Sunday, March 7, 2021

Latest Posts

ಅಟೋದಲ್ಲಿ ಬಂದಿಳಿದು ಅಚ್ಚರಿ ಮೂಡಿಸಿದ್ರು ಮಿಸ್ ಇಂಡಿಯಾ ರನ್ನರ್ ಅಪ್ ಮಾನ್ಯಾ!  

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮಿಸ್ ಇಂಡಿಯಾ 2020ರ ರನ್ನರ್ ಅಪ್ ಉತ್ತರ ಪ್ರದೇಶದ ದೇವರಿಯಾ ನಿವಾಸಿ ಮಾನ್ಯಾ ಸಿಂಗ್ ಸಮಾರಂಭವೊಂದಕ್ಕೆ ತನ್ನ ತಂದೆಯ ಅಟೋದಲ್ಲಿಯೇ ಬಂದಿಳಿದು ಅಚ್ಚರಿ ಮೂಡಿಸಿದ್ದಾರೆ.
ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಮೆಚ್ಚುಗೆಗಳು ಕೇಳಿಬಂದಿವೆ. ಮುಂಬೈನ ಠಾಕೂರ್ ಕಾಲೇಜಿನಲ್ಲಿ  ನಡೆದ ಸಮಾರಂಭಕ್ಕೆ ಆಗಮಿಸುವ ವೇಳೆ ಮಾನ್ಯಾ ಕಪ್ಪು ಬಣ್ಣದ ಉಡುಗೆ ಧರಿಸಿದ್ದರು. ತಲೆಯ ಮೇಲೆ ಕಿರೀಟ ಧರಿಸಿದ್ದರು. ಅವರ ತಂದೆ ಜೀನ್ಸ್ ಹಾಗೂ ಶರ್ಟ್ ಧರಿಸಿದ್ದರು. ತಾಯಿ ಸೂಟ್ ಧರಿಸಿದ್ದರು. ಮಾನ್ಯಾ ಮತ್ತು ಅವರ ಪೋಷಕರು ಸಮಾರಂಭಕ್ಕೆ ಬರುತ್ತಿದ್ದಂತೆ ಅವರನ್ನು ಪ್ರೀತಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭ ಮಾನ್ಯಾ ದೇಶದ ಧ್ವಜವನ್ನು ಕೈಯಲ್ಲಿ ಹಿಡಿದಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss