Sunday, June 26, 2022

Latest Posts

ಅಡಿಕೆ ಕಾರ್ಯಪಡೆ ಚಟುವಟಿಕೆ: 10 ಕೋಟಿ ರೂ. ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಹೊಸ ದಿಗಂತ ವರದಿ ಶಿವಮೊಗ್ಗ :

ಅಡಿಕೆ ಕಾರ್ಯಪಡೆ ಚಟುವಟಿಕೆಗಳಿಗಾಗಿ ರಾಜ್ಯ ಸರ್ಕಾರ ೧೦ ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಕಾರ್ಯ ಪಡೆ ಅಧ್ಯಕ್ಷ ಆರಗ ಜ್ಞಾನೇಂದ್ರ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಾರ್ಯಪಡೆ ಚಟುವಟಿಕೆಗಳಿಗಾಗಿ ಅನುದಾನ ನೀಡಬೇಕೆಂದು ಕೋರಲಾಗಿತ್ತು. ಅದಕ್ಕೆ ಸ್ಪಂದಿಸಿರುವ ಸಿಎಂ ಯಡಿಯೂರಪ್ಪ ನವರು ತೋಟಗಾರಿಕೆ ಇಲಾಖೆಗೆ ಹಣ ಬಿಡುಗಡೆ ಮಾಡಿದ್ದಾರೆ. ಅವರಿಗೆ ಅಭಿನಂದಿಸುವುದಾಗಿ ಹೇಳಿದರು.

ಅಡಿಕೆ ಕ್ಯಾನ್ಸರ್ ಕಾರಕ ಎಂದು ಈ ಹಿಂದಿನ ಸರ್ಕಾರ ಸುಪ್ರಿಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ಇದನ್ನು ತೆಗೆಸಲು ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂಬ ಸಂಶೋಧನಾ ವರದಿ ನೀಡಬೇಕಿದೆ. ಅದಕ್ಕಾಗಿ ಕಾರ್ಯಪಡೆ ಎಂ.ಎಸ್. ರಾಮಯ್ಯ ಸಂಸ್ಥೆಗೆ ಸಂಶೋಧನೆಗೆ ನೀಡಲಾಗಿದೆ. 8 ತಿಂಗಳಲ್ಲಿ ಮಧ್ಯಂತರ ವರದಿ ನೀಡುವುದಾಗಿ ಸಂಸ್ಥೆ ಹೇಳಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss