ಕರಿಬೇವು ಈ ಹೆಸರಿನಲ್ಲಿಯೇ ಒಂದು ಘಮವಿದೆ. ಅಡುಗೆ ರುಚಿ ಹೆಚ್ಚಬೇಕಾದರೆ ಕರಿಬೇವು ಬೇಕೇ ಬೇಕು. ದಕ್ಷಿಣ ಭಾರತದ ಕಡೆಗೆ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆಯುರ್ವೇದದಲ್ಲಿ ಇದನ್ನು ನಾನಾ ಔಷಧಿಗಳಲ್ಲಿ ಬಳಸುತ್ತಾರೆ. ಬರೀ ಅಡುಗೆಗೊಂದೇ ಅಲ್ಲದೇ ನಮ್ಮ ಆರೋಗ್ಯದ ಸಮಸ್ಯೆಗಳಿಗೂ ಇದು ತುಂಬಾ ಒಳ್ಳೆಯದು. ಇದರಲ್ಲಿ ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್, ಪ್ರೋಟೀನ್, ಫೈಬರ್, ಮಿಲರ್ ವಿಟಮಿನ್ಸ್ ಹೀಗೆ ಅನೇಕ ರೀತಿಯ ಅಂಶಗಳು ಅಡಗಿವೆ.
# ಗರ್ಭಿಣಿಯರಿಗೆ:
ಕರಿಬೇವಿನಲ್ಲಿ ಕಬ್ಬಿಣ ಮತ್ತು ಪೋಲಿಕ್ ಆಸಿಡ್ ಅಂಶವಿದೆ. ಇದು ಗರ್ಭಿಣಿಯರಿಗೆ ಮತ್ತು ಹೆಣ್ಣುಮಕ್ಕಳಿಗೆ ಒಳ್ಳೆಯದು. ರಕ್ತ ಹೀನತೆಯಿಂದ ಬಳಲುತ್ತಿರುವವರಿಗೆ ಈ ಕೊರತೆ ನೀಗಿಸುತ್ತದೆ.
# ಜೀರ್ಣಶಕ್ತಿ ವೃದ್ಧಿ:
ಜೀರ್ಣಶಕ್ತಿ ವೃದ್ಧಿಯಾಗ ಬೇಕಾದಲ್ಲಿ ಇದನ್ನು ಸೇವಿಸುವುದು ಒಳ್ಳೆಯದು. ಇದರೊಂದಿಗೆ ನಾಲ್ಕು ಕಾಳು ಓಂ ಸೇರಿಸಿ ಸೇವಿಸಿದರೆ ಮತ್ತೂ ಒಳ್ಳೆಯದು.
# ತಲೆ ಕೂದಲು ವೃದ್ಧಿ:
ತಲೆಕೂದಲು ಉದುರುತ್ತಿದ್ದರೆ, ಕೊಬ್ಬರಿ ಎಣ್ಣೆಗೆ ಕರಿಬೇವನ್ನು ಸೇರಿಸಿಕೊಂಡು ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ಹಚ್ಚಿಕೊಳ್ಳುವುದರಿಂದ ತಲೆಕೂದಲು ಉದುರುವುದು ನಿಲ್ಲುತ್ತದೆ.
# ಬೊಜ್ಜು ನಿವಾರಣೆ:
ಬೊಜ್ಜು ಕರಗಿಸಬೇಕು ಎನ್ನುವವರು ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 10ರಿಂದ 20 ಎಲೆಯನ್ನು ಅಗೆದು ತಿನ್ನಬೇಕು. ಇದರಿಂದ ಬೇಗ ಬೊಜ್ಜು ನಿವಾರಣೆಯಾಗುತ್ತದೆ.
#ಮೂಲವ್ಯಾಧಿ :
ಮೂಲವ್ಯಾದಿಯಿಂದ ಬಳಲುವವರು ಕರಿಬೇವಿನ ಚಿಗುರು ಎಲೆಗಳನ್ನು ಜೇನುತುಪ್ಪದಲ್ಲಿ ಅದ್ದಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ಮೂಲವ್ಯಾಧಿ ಕಡಿಮೆ ಆಗುತ್ತದೆ. ಮೂಲವ್ಯಾಧಿ ಬರದಂತೆ ತಡೆಯುತ್ತದೆ.
# ಸಕ್ಕರೆ ಕಾಯಿಲೆ
ಕರಿಬೇವಿನ ಗೊಜ್ಜನ್ನು ಮಾಡಿಕೊಂಡು ಅನ್ನದ ಜೊತೆ ಸೇವಿಸಿದರೆ ಕಬ್ಬಿಣ ಅಂಶ ಹೆಚ್ಚುತ್ತದೆ. ಸಕ್ಕರೆ ಕಾಯಿಲೆ ತಡೆಯಬಹುದು.
ಗೊಜ್ಜು ಮಾಡುವ ವಿಧಾನ: ಎಳೆ ಕರಿಬೇವನ್ನು ತೆಗೆದುಕೊಂಡು ಅದಕ್ಕೆ ಎಳ್ಳು, ಜೀರಿಗೆ ಸೇರಿಸಿ ಸೊಪ್ಪನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ಅದಕ್ಕೆ ಕೊಬ್ಬರಿ ಹಾಕಿ ರುಬ್ಬಿಕೊಳ್ಳಿ. ಬೇಕಾದಷ್ಟು ಉಪ್ಪು ಸೇರಿಸಿ, ಲಿಂಬು ರಸ ಹಾಕಿ ಮಿಶ್ರಣ ಮಾಡಿಕೊಂಡು ಸೇವಿಸಿರಿ. ಆರೋಗ್ಯ ವೃದ್ಧಿಯಾಗುತ್ತದೆ.
# ಕಿಡ್ನಿ ಸ್ಟೋನ್:
ಕರಿಬೇವನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಅದರ ರಸವನ್ನು ತೆಗೆದು ಅದಕ್ಕೆ ಒಂದು ಕಪ್ ನೀರು ಬೆರೆಸಿಕೊಂಡು ಕುಡಿಯುವುದರಿಂದ ಕಿಡ್ನಿಯಲ್ಲಿ ಬೆಳೆಯುವ ಕಲ್ಲಿನಿಂದ ಮುಕ್ತಿ ಪಡೆಯಬಹುದು.
#ಅಜೀರ್ಣ :
ತಿಂದಿದ್ದು ಏರುಪೇರಾದಾಗ ಅಜೀರ್ಣವಾಗುತ್ತದೆ. ಹೊಟ್ಟೆ ತೊಳಸಿದಂತಾಗುತ್ತದೆ. ಅಂತಹ ಸಮಯದಲ್ಲಿ ಮೂರು ಚಮಚದಷ್ಟು ಕರಿಬೇವಿನ ರಸ, ಎರಡು ಚಮಚದಷ್ಟು ಲಿಂಬೆ ರಸ ಮತ್ತು ಸಕ್ಕರೆಯನ್ನು ಬೆರೆಸಿ ಸೇವಿಸುವದರಿಂದ ಅಜೀರ್ಣ ಸರಿಯಾಗುತ್ತದೆ.
ಮನೆಯಲ್ಲಿಯೇ ಇರುವ ಕರಿಬೇವಿನಲ್ಲಿ ಇಷ್ಟೊಂದು ಉಪಯೋಗವಿದೆ. ಇದನ್ನು ಅಡುಗೆ ಒಗ್ಗರಣೆಗೆಂದೇ ಬಳಸದೇ ಆರೋಗ್ಯ ವೃದ್ಧಿಗೂ ಬಳಸಿರಿ.