Wednesday, August 17, 2022

Latest Posts

ಅಡುಗೆಗೂ ಸೈ, ಆರೋಗ್ಯಕ್ಕೂ ಸೈ.. ಕೊತ್ತಂಬರಿ ಸೊಪ್ಪಿನ ಆರೋಗ್ಯಕರ ಗುಣದ ಬಗ್ಗೆ ನಿಮಗೆಷ್ಟು ಗೊತ್ತು? ಇದನ್ನು ಓದಿ..

ಕೊತ್ತಂಬರಿ ಸೊಪ್ಪು ತುಂಬಾ ಜನಕ್ಕೆ ಇಷ್ಟವಾಗುವುದಿಲ್ಲ. ಕೊತ್ತಂಬರಿ ಸೊಪ್ಪಿನ ಒಂದೇ ಒಂದು ಎಸಳು ಅಡುಗೆಗೆ ಬಿದ್ದರೂ ಸಾಕು ಅದರ ರುಚಿಯೇ ಬೇರೆಯಾಗುತ್ತದೆ. ಹಲವಾರು ಅಡುಗೆ ಪದಾರ್ಥಗಳ ರುಚಿ ಹೆಚ್ಚಿಸುವ ಕೊತ್ತಂಬರಿ ಸೊಪ್ಪು ಆರೋಗ್ಯದ ದೃಷ್ಟಿಯಿಂದಲೂ ಅಷ್ಟೆ ಮಹತ್ವವನ್ನು ಪಡೆದಿದೆ. ಅನೇಕ ಕಾಯಿಲೆಗಳನ್ನು ಕೊತ್ತಂಬರಿ ಸೊಪ್ಪಿನಿಂದ ಗುಣಪಡಿಸಬಹುದಾಗಿದೆ. ಇಲ್ಲಿದೆ ಕೊತ್ತಂಬರಿ ಸೊಪ್ಪಿನ ಔಷಧ.

  • ಕೂದಲು ಉದುರಿವ ಸಮಸ್ಯೆ ಇರುವವರು ಕೊತ್ತಂಬರಿ ರಸವನ್ನು ತೆಗೆದು ಅದನ್ನು ತಲೆ ಸ್ನಾನ ಮಾಡುವ ಒಂದು ಗಂಟೆ ಮೊದಲು ಹಾಕಿಕೊಂಡರೆ ಕೂದಲು ಉದುರುವುದು ನಿಲ್ಲುತ್ತದೆ. ಮತ್ತು ಕೂದಲು ಕಪ್ಪಗಾಗುತ್ತದೆ.
  • ಉರಿ ಮೂತ್ರದ ಸಮಸ್ಯೆ ಇರುವವರು ಕೊತ್ತಂಬರಿ ಸೊಪ್ಪಿನ ರಸವನ್ನು ಅರ್ಧ ಕಪ್ ಆಗುವಷ್ಟು ತೆಗೆದು ಅದನ್ನು ಅರ್ಧ ಕಪ್ ನೀರಿಗೆ ಹಾಕಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ವಾರ ಸೇವಿಸಿದರೆ ಉರಿ ಮೂತ್ರದ ಸಮಸ್ಯೆ ನಿವಾರಣೆಯಾಗುತ್ತದೆ.
  • ಗರ್ಭಿಣಿಯರಲ್ಲಿ ಆಗಾಗ ಕಾಣಿಸಿಕೊಳ್ಳುವ ವಾಂತಿಗೆ ಕೊತ್ತಂಬರಿ ಸೊಪ್ಪಿನ ರಸ ರಾಮಬಾಣದಂತೆ. ಕೊತ್ತಂಬರಿ ಸೊಪ್ಪಿನ ರಸವನ್ನು ಅರ್ಧ ಕಪ್ ಆಗುವಷ್ಟು ತೆಗೆದು ಅದಕ್ಕೆ ಅರ್ಧ ಕಪ್ ನೀರನ್ನು ಸೇರಿಸಿ, ಸಿಹಿ ಆಗುವಷ್ಟು ಸಕ್ಕರೆಯನ್ನು ಹಾಕಿ ಕುದಿಸಬೇಕು. ಇದು ತಣ್ಣಗಾದ ಮೇಲೆ ಕುಡಿದರೆ ವಾಂತಿ ಕಡಿಮೆ ಆಗುತ್ತದೆ.
  • ಬಾಯಿಯ ದುರ್ವಾಸನೆಯನ್ನು ನಿವಾರಣೆ ಮಾಡಲು ಕೊತ್ತಂಬರಿ ಸೊಪ್ಪನ್ನು ತಿನ್ನಬೇಕು. ದಿನದಲ್ಲಿ ಆಗಾಗ ಕೊತ್ತಂಬರಿ ಸೊಪ್ಪನ್ನು ತಿನ್ನುವುದರಿಂದ ಬಾಯಿ ವಾಸನೆ ಹೋಗುತ್ತದೆ.
  • ಮೂಗಿನಲ್ಲಿ ಆಗಾಗ ರಕ್ತ ಸೋರುತ್ತದೆ. ರಕ್ತ ಸೋರಲು ಪ್ರಾರಂಭವಾದ ತಕ್ಷಣ ಕೊತ್ತೊಂಬರಿ ರಸವನ್ನು ತೆಗೆದು ಮೂಗಿಗೆ ಬಿಡಬೇಕು. ತಕ್ಷಣ ರಕ್ತಸ್ರಾವ ನಿಲ್ಲುತ್ತದೆ.
  • ಹೊಟ್ಟೆಯುಬ್ಬರ, ಜೀರ್ಣಕ್ರೀಯೆ ಸಮಸ್ಯೆ ಇರುವವರು ಒಂದು ಲೋಟ ಮಜ್ಜಿಗೆಗೆ ಕೊತ್ತಂಬರಿ ಸೊಪ್ಪು ಅಥವಾ ಕೊತ್ತಂಬರಿ ಸೊಪ್ಪಿನ ರಸವನ್ನು ಹಾಕಿಕೊಂಡು ಕುಡಿಯುವುದನ್ನು ರೂಢಿಸಿಕೊಳ್ಳಿ. ಇದರಿಂದ ಹೊಟ್ಟೆಯುಬ್ಬರ, ಜರ್ಣಕ್ರೀಯೆ ಸಮಸ್ಯೆ ನಿವಾರಣೆಯಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!