ಪ್ರತಿಯೊಬ್ಬರ ಅಡುಗೆ ಮನೆಯಲ್ಲಿಯೂ ಇಂಗಿಗೆ ಅಗ್ರಸ್ಥಾನ. ಇಂಗು ತೆಂಗು ಇದ್ದರೆ ಮಂಗನೂ ಅಡುಗೆ ಮಾಡುತ್ತದೆ ಎಂಬ ಮಾತೂ ಇದೆ. ಇಂಗು ಕೇವಲ ನಿಮ್ಮ ಅಡುಗೆ ರುಚಿ ಹೆಚ್ಚಿಸುವುದಕ್ಕಷ್ಟೇ ಅಲ್ಲ. ಇದು ಆರೋಗ್ಯಕ್ಕೂ ಸಹಕಾರಿ. ಕೆಲವೊಬ್ಬರಿಗೆ ಇಂಗಿನ ವಾಸನೆ ಹಿಡಿಸುವುದಿಲ್ಲ. ಆದರೆ ಅದರಲ್ಲಿ ಔಷಧಿ ಗುಣಗಳಿವೆ. ಇದು ಇರಾನ್ ದೇಶದ ಫೆರುಲಾ ಎಂಬ ಸಸ್ಯದ ವಿವಿಧ ಭಾಗಗಳನ್ನು ಒಣಗಿಸಿ ಮಾಡಲಾಗಿದೆ. ಬನ್ನಿ ಇಂಗಿನ ವಿಶೇಷತೆಗಳನ್ನು ಅರಿಯೋಣ..
- ಹೊಟ್ಟೆನೋವು: ಗ್ಯಾಸ್ಟ್ರಿಕ್ ಈಗ ಸಾಮಾನ್ಯ ಸಮಸ್ಯೆ. ಹುಳಿ ಮಜ್ಜಿಗೆಗೆ ಒಂದು ಚಿಟಿಕೆ ಇಂಗನ್ನು ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸಬೇಕು. ಇನ್ನು ಅಡುಗೆಯಲ್ಲಿ ಬಳಸಿದರೂ ಒಳ್ಳೆಯದು. ಇಷ್ಟೇ ಅಲ್ಲ ಮುಟ್ಟಿನ ಸಮಸ್ಯೆಗೂ ಇಂಗು ಸಹಕಾರಿ. ಇದನ್ನು ಸೇವಿಸುವುದರಿಂದ ಹೊಟ್ಟೆ ನೋವು ಕಡಿಮೆ ಆಗುತ್ತದೆ.
- ಉಸಿರಾಟದ ತೊಂದರೆ: ಇದರಲ್ಲಿ ಉರಯೂತ ನಿವಾರಕ,ವೈರಸ್ ನಿವಾರಕ ಮತ್ತು ಜೀವಿರೋಧಿ ಗುಣಗಳಿವೆ. ಹಾಗಾಗಿ ಒಣಕೆಮ್ಮು, ಅಸ್ತಮಾ ಇರುವವರು ಇಂಗನ್ನು ಸೇವಿಸಿದರೆ ಒಳಿತು.
- ತಲೆನೋವು: ಇದರ ಉರಯೂತ ನಿವಾರಕ ಗುಣದಿಂದ ತಲೆನೋವು ನಿವಾರಣೆಗೆ ಉತ್ತಮವಾಗಿದೆ. ಒಂದು ವೇಳೆ ತಲೆನೋವು ನರಗಳ ಉರಿಯೂತದಿಂದ ಬಂದಿದ್ದರೆ, ಅಂದರೆ ಶೀತದಿಂದ ಬಂದಿದ್ದರೆ, ತಣ್ಣನೆಯ ಗಾಳಿ ಬೀಸಿದಾಗ, ದೊಡ್ಡ ಶಬ್ದದಿಂದ ಬಂದಿದ್ದರೆ ಇಂಗು ರಾಮಬಾಣ. ಉಗುರುಬೆಚ್ಚ ನೀರಿಗೆ ಒಂದು ಚಿಟಿಕೆ ನೀರು ಸೇರಿಸಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ತಲೆನೋವು ನಿಯಂತ್ರಣಕ್ಕೆ ಬರುತ್ತದೆ.
- ಹಲ್ಲುನೋವು: ಇದರಲ್ಲಿರುವ ಆಂಟಿ ಆಕ್ಸಿಡೆಂಟ್, ಬ್ಯಾಕ್ಟೀರಿಯಾ ನಿವಾರಕ ಅಂಶ ವಸಡಿನಲ್ಲಿ ರಕ್ತ ಬರುವುದು ನಿಲ್ಲಿಸುತ್ತದೆ. ನೀರಿಗೆ ಚಿಟಿಗೆ ಇಂಗು ಬೆರೆಸಿ ದಿನವೂ ಮುಕ್ಕಳಿಸುವುದರಿಂದ ಹಲ್ಲಿನ ಸಮಸ್ಯೆ ದೂರವಾಗುತ್ತದೆ.
- ಬಾಯಿವಾಸನೆ ದೂರಗೊಳಿಸಿ: ಬಾಯಿಯ ದುರ್ವಾಸನೆ ಹೋಗಲಾಡಿಸಲು ಇಂಗನ್ನು ಬಳಸಬಹುದು. ದಿನಕ್ಕೆ ಒಂದು ಬಾರಿ ಇದನ್ನು ಸೇವಿಸಿ. ಇದರಲ್ಲಿರುವ ಬ್ಯಾಕ್ಟೀರಿಯಾ ಕೊಲ್ಲುವ ಗುಣ ಬಾಯಿಯ ಕೆಟ್ಟ ಬ್ಯಾಕ್ಟೀರಿಯಗಳನ್ನು ಸಾಯಿಸುತ್ತವೆ.
- ಕಿವಿನೋವು: ಎಣ್ಣೆಗೆ ಇಂಗು ಬೆರೆಸಿ ಅದನ್ನು ಕುದಿಸಿ ತಣ್ಣಗೆ ಮಾಡಿ, ನಂತರ ಕಿವಿ ಒಳಗೆ ಹಾಕಿಕೊಂಡರೆ ಕಿವಿ ನೋವು ತರಿಸುತ್ತಿರುವ ಬ್ಯಾಕ್ಟೀರಿಯಾಗಳು ಸಾಯುತ್ತವೆ.