ಒಮ್ಮೆ ನಿಮ್ಮ ಅಡುಗೆ ಮನೆಗೆ ಹೋಗಿ ನೋಡಿ. ಎಷ್ಟು ಪ್ಲಾಸ್ಟಿಕ್ ಡಬ್ಬಿ ಇದೆ? ಇನ್ನು ಫ್ರಿಡ್ಜ್ ತೆಗೆದುನೋಡಿ. ಅದರಲ್ಲೂ ಪ್ಲಾಸ್ಟಿಕ್ ಡಬ್ಬಿ. ಅಡುಗೆ ಮನೆಯ ಬಾಗಿಲ ಹಿಂದೆ ಪ್ಲಾಸ್ಟಿಕ್ ಕವರ್ಗಳ ಸಂತೆ, ಬಿಸಾಡಲೆಂದು ತೆಗೆದಿಟ್ಟ ಡಸ್ಟ್ಬಿನ್ನಲ್ಲೂ ಪ್ಲಾಸ್ಟಿಕ್ನದ್ದೇ ಹವಾ? ಇಷ್ಟೆಲ್ಲಾ ಪ್ಲಾಸ್ಟಿಕ್ನಿಂದ ಸುತ್ತುವರಿದ ನಿಮ್ಮ ಆರೋಗ್ಯ ಹಾಳಾಗದೇ ಇರಲು ಹೇಗೆ ಸಾಧ್ಯ? ಮಕ್ಕಳ ವಾಟರ್ ಬಾಟಲ್, ಟಿಫನ್ ಎಲ್ಲವೂ ಪ್ಲಾಸ್ಟಿಕ್ ಇರುತ್ತದೆ. ಪ್ಲಾಸ್ಟಿಕ್ ಕಂಟೇನರ್ಗಳಲ್ಲಿಟ್ಟ ಆಹಾರ, ನೀರು ಸೇವಿಸುವುದರಿಂದ ತಕ್ಷಣಕ್ಕೆ ಏನೂ ಆಗುವುದಿಲ್ಲ ಆದರೆ ಮುಂದೆ ಬರುವ ಮಹಾನ್ಕಾಯಿಲೆಗಳಿಗೆ ಇದೇ ಉತ್ತರ.. ಪ್ಲಾಸ್ಟಿಕ್ ಬಳಕೆಯಿಂದ ಏನಾಗುತ್ತದೆ? ಅದಿಲ್ಲದಿದ್ದರೆ ಇನ್ನೇನು ಬಳಸಹುದು ನೋಡಿ..
- ಟಾಕ್ಸಿಕ್ ಆರೋಗ್ಯ ಹದಗೆಡಿಸುತ್ತದೆ: ಒಂದು ಬಾರಿ ಬಳಸಿದ ಬಾಟಿಲ್ ರೀ ಯೂಸ್ ಮಾಡಬೇಡಿ ಎಂದರೂ, ಅಂತಹ ಬಾಟಲಿಗಳ ಬಂಢಾರವನ್ನೇ ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ. ಇವುಗಳ ಕೆಮಿಕಲ್ ರಿಲೀಸ್ನಿಂದ ನಮ್ಮ ದೇಹಕ್ಕೆ ನಾನಾ ತೊಂದರೆಯಾಗುತ್ತದೆ. ಕ್ಯಾನ್ಸರ್, ಅಲ್ಜೈಮರ್ಸ್, ಹೃದಯ ಸಂಬಂಧಿ ಕಾಯಿಲೆ, ಕಣ್ಣಿನ ತೊಂದರೆಗೆ ಪ್ಲಾಸ್ಟಿಕ್ ಕಾರಣ.
- ಸೇಫ್ ಪ್ಲಾಸ್ಟಿಕ್ ಇಲ್ಲ: ಕೆಲವರು ಜಾಗೃತರಾಗಿ ಬಾಟಲಿ ಅಥವಾ ಡಬ್ಬಿ ಕೊಳ್ಳುವಾಗ ಬಾಟಲಿಯ ಹಿಂದಿನ ಭಾಗ ನೋಡುತ್ತಾರೆ. ಅದರಲ್ಲಿ ಅದು ಯಾವ ಕ್ವಾಲಿಟಿಯದ್ದು ಎಂಬ ಮಾಹಿತಿ ಇರುತ್ತದೆ. ಅದನ್ನು ನೋಡಿ ನಾವು ಸೇಫ್ ಪ್ಲಾಸ್ಟಿಕ್ ಬಳಸುತ್ತಿದ್ದೀವಿ ಎಂದುಕೊಳ್ಳುತ್ತಾರೆ. ಆದರೆ ಈ ಭೂಮಿ ಮೇಲೆ ಸೇಫ್ ಪ್ಲಾಸ್ಟಿಕ್ ಇಲ್ಲ.ಎಲ್ಲವೂ ಕೆಟ್ಟದ್ದೇ. ಅಂಗಡಿಯಿಂದ ಬರುವ ಪ್ಲಾಸ್ಟಿಕ್ನಲ್ಲಿ ಪ್ಯಾಕ್ ಆದ ಪ್ರತಿ ಫುಡ್ ಕೂಡ ಡೇಂಜರ್ ಹೌದು. ಈಗ ಹೇಳಿ? ನಿಮ್ಮ ಬಳಕೆಯ ಪ್ಲಾಸ್ಟಿಕ್ ಸೇಫಾ?
- ರಿಪ್ರೊಡಕ್ಟೀವ್ ಸಮಸ್ಯೆಗಳು: ಮಿಲಿಯನ್ಗಿಂತ ಹೆಚ್ಚು ಜನರಿಗೆ ಪ್ಲಾಸ್ಟಿಕ್ ನಿಂದ ಮಕ್ಕಳಾಗುವ ತೊಂದರೆಯಾಗಿದೆ.ಇದರ ಕೆಮಿಕಲ್ಸ್ ನಮ್ಮ ಇಮ್ಯುನಿಟಿ ಹಾಗೂ ಹಾರ್ಮೋನ್ಗಳ ಮೇಲೆ ನೇರ ಪರಿಣಾಮ ಬೀರಿ ಫರ್ಟಿಲಿಟಿ ಸಮಸ್ಯೆ ನೀಡುತ್ತದೆ.
- ಸ್ಥೂಲಕಾಯ ದೇಹ: ಪ್ಲಾಸ್ಟಿಕ್ನಲ್ಲಿ ರ್ಯಾಪ್ ಮಾಡಿರುವ ಆಹಾರ ಎಷ್ಟು ಕೆಟ್ಟದ್ದೋ, ಅದನ್ನು ರ್ಯಾಪ್ ಮಾಡಿರುವ ಪ್ಲಾಸ್ಟಿಕ್ ಕೂಡ ಅಷ್ಟೇ ಡೇಂಜರ್. ಇದರಿಂದ ಮಕ್ಕಳಲ್ಲಿ ಬೇಗ ಒಬೆಸಿಟಿ ಸಮಸ್ಯೆ ಆರಂಭವಾಗುತ್ತದೆ. ಅಷ್ಟೇ ಅಲ್ಲದೆ ದೊಡ್ಡವರಲ್ಲಿಯೂ ತೂಕ ಹೆಚ್ಚಳ, ಒಬೆಸಿಟಿ ಮಾಮೂಲಾಗುತ್ತದೆ.
- ಭೂಮಿತಾಯಿಗೂ ನೋವು: ಪ್ಲಾಸ್ಟಿಕ್ ಮನುಷ್ಯನಿಗಷ್ಟೇ ಅಲ್ಲದೆ ಭೂಮಿಗೂ ತೊಂದರೆ ನೀಡುತ್ತದೆ. ಇದರ ಕೆಮಿಕಲ್ ಭೂಮಿಗೆ ಬಿದ್ದರೆ, ಅದರಲ್ಲಿ ಬೆಳೆದ ಬೆಳೆ ನಾವು ತಿಂದರೆ ನಮಗೂ ತೊಂದರೆ. ನಾವು ರಸ್ತೆಗೆ ಎಸೆಯುವ ಪ್ಲಾಸ್ಟಿಕ್ ಮತ್ತೆ ಬಂದು ನಮ್ಮ ಹೊಟ್ಟೆಗೇ ಸೇರುತ್ತದೆ. ಮಣ್ಣಿನ ಕ್ವಾಲಿಟಿ ಹಾಳಾಗುತ್ತದೆ. ಆದ್ದರಿಂದ ಆದಷ್ಟು ಕಡಿಮೆ ಪ್ಲಾಸ್ಟಿಕ್ ಬಳಸುವುದು ಸೂಕ್ತ.
ಪ್ಲಾಸ್ಟಿಕ್ ಬದಲು ಏನನ್ನು ಬಳಸಬೇಕು? - ನಿತ್ಯ ತರಕಾರಿ ಹಾಲು ಕೊಂಡೊಯ್ಯಲು ಜೂಟ್ ಅಥವಾ ಬಟ್ಟೆ ಬ್ಯಾಗ್ ಮಾಡಿಕೊಳ್ಳಿ. ನಿತ್ಯ ಅದನ್ನೇ ತೆಗೆದುಕೊಂಡು ಹೋಗಿ.
- ಅಂಗಡಿಗಳಿಗೆ ಹೋಗುವ ಮುನ್ನ, ನಿಮ್ಮ ಗಾಡಿ ಅಥವಾ ಕೈಯಲ್ಲಿ ಜೂಟ್ ಅಥವಾ ಬಟ್ಟೆ ಬ್ಯಾಗ್ ಇರಲಿ. ಎಮರ್ಜೆನ್ಸಿ ರೀತಿಯಾವಾಗಲೂ ಇದನ್ನು ಇಟ್ಟುಕೊಳ್ಳಿ.
- ಅಡುಗೆ ಮನೆಯ ವಸ್ತುಗಳನ್ನು ಪ್ಲಾಸ್ಟಿಕ್ ಡಬ್ಬಿಯಲ್ಲಿಟ್ಟಿದ್ದರೆ, ಅದನ್ನು ಗಾಜು ಅಥವಾ ಪಿಂಗಾಣಿ ಡಬ್ಬಿಗಳಲ್ಲಿ ಇಡಿ.
- ಫ್ರಿಡ್ಜ್ನಲ್ಲಿಡುವ ಪಾತ್ರೆಗಳನ್ನೂ ಪ್ಲಾಸ್ಟಿಕ್ ಬಿಟ್ಟು ಬೇರೆಡೆಗೆ ಶಿಫ್ಟ್ ಮಾಡಿ.ಅಲ್ಲಿಯೂ ಪ್ಲಾಸ್ಟಿಕ್ ಬಿಟ್ಟು ಬೇರೆ ಮೆಟೀರಿಯಲ್ನ ಡಬ್ಬಿ ಬಳಸಿ.