Saturday, July 2, 2022

Latest Posts

ಅಡುಗೆ ಮಾಡುವಾಗ ಸುಟ್ಟುಕೊಳ್ತೀರಾ? ಸುಟ್ಟಗಾಯ ಕಲೆಯಾಗಬಾರದೆಂದರೆ ಈ ರೀತಿ ಮಾಡಿ… ಸಿಂಪಲ್ ಟಿಪ್ಸ್

ನಾವು ಆಗಾಗಾ ಸುಟ್ಟುಕೊಳ್ಳುತ್ತಲೇ ಇರುತ್ತೇವೆ. ಅದರಲ್ಲೂ ಹೆಂಗಸರು ಅಡುಗೆ ಮಾಡುವಾಗ ಆಗಾಗ ಸುಟ್ಟುಕೊಳ್ಳುತ್ತಲೇ ಇರುತ್ತಾರೆ. ಕೆಲವು ಜನರಿಗೆ ಅದರ ಕಲೆ ಉಳಿದು ಬಿಡುತ್ತದೆ. ಇನ್ನೂ ಕೆಲವರಿಗೆ ಕಲೆಗಳು ನಿವಾರಣೆಯಾಗುತ್ತದೆ. ಸುಟ್ಟುಗಾಯದ ಕಲೆ ಹಾಗೆ ಉಳಿದರೆ ಚರ್ಮದ ಅಂದವೇ ಹಾಳಾಗಿ ಹೋಗುತ್ತದೆ. ನಿಮಗೆ ಸುಟ್ಟ ಗಾಯದ ಕಲೆ ಹಾಗೆ ಇದ್ದರೆ ಚಿಂತಿಸುವುದು ಬೇಡ. ಕೆಲೆ ನಿವಾರಣಗೆ ಈ ಮನೆ ಮದ್ದುಗಳನ್ನು ಇವುಗಳನ್ನು ಟ್ರೈ ಮಾಡಿ.

  • ಮೇ, ಏಪ್ರಿಲ್‌ನಲ್ಲಿ ಒಂದೊಂದು ಮಳೆ ಆಗುತ್ತದೆ. ಆಗ ಆಲಿಕಲ್ಲಿನ ಮಳೆಯಾಗುತ್ತದೆ. ಆಲಿಕಲ್ಲನ್ನು ಹೆಕ್ಕಿ ಬಾಟಲ್‌ನಲ್ಲಿ ಇಟ್ಟುಕೊಳ್ಳಬೇಕು. ನಂತರ ಅದನ್ನು ಸುಟ್ಟಗಾಯಕ್ಕೆ ಹಚ್ಚಿಕೊಳ್ಳಬೇಕು. ಕಲೆಯೂ ಆಗುವುದಿಲ್ಲ. ಉರಿಯೂ ಕಡಿಮೆ ಆಗುತ್ತದೆ.
  • ಸಾಗವಾನಿ ಎಲೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಚೆನ್ನಾಗಿ ಕುದಿಸಬೇಕು. ಅದು ಕೆಂಪುಬಣ್ಣದ ಎಣ್ಣೆಯಾಗುತ್ತದೆ. ನಂತರ ಅದನ್ನು ಸುಟ್ಟ ಗಾಯಕ್ಕೆ ಹಚ್ಚಿಕೊಳ್ಳುತ್ತಿದ್ದರೆ ಒಂದು ತಿಂಗಳಲ್ಲಿ ಕಲೆ ಕಡಿಮೆ ಆಗುತ್ತದೆ.
  • ಗಾಯ ಸುಟ್ಟ ತಕ್ಷಣ ಅದಕ್ಕೆ ಜೇನು ತುಪ್ಪವನ್ನು ಲೇಪಿಸಿಕೊಳ್ಳಬೇಕು. ಉರಿಯೂ ಕಡಿಮೆ ಆಗುತ್ತದೆ ಮತ್ತು ಕಲೆಯೂ ಸಹ ಆಗುವುದಿಲ್ಲ.
  • ಗಾಯ ಸುಟ್ಟ ತಕ್ಷಣ ಹಲ್ಲು ಉಜ್ಜುವ ಪೇಸ್ಟ್‌ನ್ನು ಹಚ್ಚಿಕೊಳ್ಳಬೇಕು. ಹೀಗೆ ಹಚ್ಚಿಕೊಂಡರೆ ಸುಟ್ಟಗಾಯದ ಉರಿಯೂ ಹೋಗುತ್ತದೆ ಮತ್ತು ಕಲೆಯೂ ನಿವಾರಣೆಯಾಗುತ್ತದೆ. ಕಲೆಯಾಗದಂತೆ ತಡೆಯುತ್ತದೆ.
  • ಲೋಳೆಸರವನ್ನು ಸುಟ್ಟು ಗಾಯವಾದ ತಕ್ಷಣ ಗಾಯವನ್ನು ತಣ್ಣ ನೀರಿನಲ್ಲಿ ತೊಳೆದು ಹಚ್ಚಬೇಕು. ಗಾಯ ಕೆಂಪಾಗದಂತೆ ತಡೆಯುತ್ತದೆ. ಮತ್ತು ಸುಟ್ಟ ಜಾಗ ಕಪ್ಪುಬಣ್ಣಕ್ಕೆ ತಿರುಗಂದಂತೆ ತಡೆಯುತ್ತದೆ. ಕಲೆಯೂ ಆಗುವುದಿಲ್ಲ.
  • ಸುಟ್ಟ ತಕ್ಷಣ ಉರಿಯಾಗುವುದಿಲ್ಲ ಉರಿಯಾದ ಕೂಡಲೆ ದೋಸೆ ಹಿಟ್ಟನ್ನು ಸುಟ್ಟಗಾಯಕ್ಕೆ ಹಚ್ಚಿಕೊಳ್ಳಬೇಕು. ಹೀಗೆ ಹಚ್ಚಿಕೊಂಡರೆ ಉರಿ ಕಡಿಮೆ ಆಗುತ್ತದೆ ಮತ್ತು ಕಲೆಯಾಗದಂತೆ ತಡೆಯುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss