Wednesday, August 17, 2022

Latest Posts

ಅತಿಯಾಗಿ ಬೆವರುವುದನ್ನು ತಡೆಗಟ್ಟಲು ಈ ಮನೆ ಮದ್ದುಗಳನ್ನು ಟ್ರೈ ಮಾಡಿ

ಬೇಸಿಗೆಯಲ್ಲಿ, ಅತಿಯಾಗಿ ದೇಹಕ್ಕೆ ಆಯಾಸವಾದಾಗ ಬೆವರುವುದ ಸಹಜ. ಆದರೆ ಕೆಲವೊಂದಿಷ್ಟು ಜನರಿಗೆ ಅತಿಯಾಗಿ ಸುಮ್ಮನೆ ಬೆವರುತ್ತಿರುತ್ತದೆ. ಇದರಿಂದ ದೇಹ ದುರ್ಗಂಧ ಸಹ ಬೀರುತ್ತದೆ. ಈ ರೀತಿ ಆದರೆ ಎಲ್ಲರೆದುರು ಮಾತನಾಡುವುದಕ್ಕೂ ಮುಜುಗರವೆನಿಸುತ್ತದೆ. ಸಾಮಾನ್ಯವಾಗಿ ಹಣೆ, ಪಾದ, ತಲೆ, ಕೈಗಳಲ್ಲಿ ಬೆವರುತ್ತದೆ. ತುಂಬಾ ಬೆವರಿದರೆ ಕೆಟ್ಟವಾಸನೆ ಬರುತ್ತದೆ. ಈ ಅತಿಯಾಗಿ ಬೆವರುವುದನ್ನು ತಡೆಗಟ್ಟಲು ಈ ಮನೆಮದ್ದನ್ನು ಟ್ರೈ ಮಾಡಿ.

  • ನೀರನ್ನು ಬೇಸಿಗೆ ಕಾಲದಲ್ಲಿ ಉಳಿದ ಎರಡು ಕಾಲಕ್ಕಿಂತ ಹೆಚ್ಚು ಕುಡಿದರೆ ಬೆವರು ಪ್ರಮಾಣ ಕಡಿಮೆ ಆಗುತ್ತದೆ ಮತ್ತು, ಬೆವರು ವಾಸನೆ ಬರುವುದಿಲ್ಲ.
  • ಕೈ ಬೆವರು ಹೆಚ್ಚುತ್ತಿದ್ದರೆ ಬದನೆ ಕಾಯಿಯನ್ನು ಚಿಕ್ಕ ಚಿಕ್ಕ ಗಾಲಿಗಳನ್ನು ಮಾಡಿಕೊಂಡು ಅದನ್ನು ನೀರಿನಲ್ಲಿ ನೆನೆಸಿಡಿ. ಆನಂತರ ಆ ನೀರಿನಲ್ಲಿ ಕೈಗಳನ್ನು ೧೦ ನಿಮಿಷ ಅದ್ದಿಕೊಳ್ಳಿ. ದಿನವೂ ಹೀಗೆ ಮಾಡಿದರೆ ಕೈ ಬೆವರುವುದು ಕಡಿಮೆ ಆಗುತ್ತದೆ.
  • ಪಿತ್ತದ ಸಮಸ್ಯೆ ಹೆಚ್ಚಾದಾಗಲೂ ಬೆವರುತ್ತದೆ. ಪಿತ್ತ ಹೆಚ್ಚಿದಾಗ ಬೈಲ್ ರಸ ನಮ್ಮಲ್ಲಿ ಉತ್ಪತ್ತಿ ಕಡಿಮೆ ಮಾಡುತ್ತದೆ. ಅದು ಕಡಿಮೆ ಆದಾಗ ದೇಹದ ಉಷ್ಣತೆ ಹೆಚ್ಚಾಗಿ ಬೆವರಲು ಪ್ರಾರಂಭಿಸುತ್ತದೆ. ಪಿತ್ತಕ್ಕೆ ವಾರದಲ್ಲಿ ಎರಡು ದಿನ ಔಷಧ ಮಾಡಿಕೊಂಡರೆ ಬೆವರುವದು ಕಡಿಮೆ ಆಗುತ್ತದೆ.

    1.ಪಿತ್ತ ಸಮಸ್ಯೆಗೆ ಮದ್ದು: ದೊಡ್ಡ ಪತ್ರೆಯ ರಸವನ್ನು ಒಂದು ಚಮಚ ಆಗುವಷ್ಟು ತೆಗೆದು ಅದಕ್ಕೆ ಬೆಲ್ಲ ಹಾಕಿಕೊಂಡು ಬೆಳ್ಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು.
    2. ೧೦ ಒಣ ದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ತಿನ್ನುವುದು.

  • ಇಂದಿನ ಒತ್ತಡದ ಯುಗವೂ ಬೆವರುವುದಕ್ಕೆ ಕಾರಣ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಪ್ರಾಣಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ. ಮನಸ್ಸು ಶಾಂತವಾದಾಗ ಬೆವರುವುದು ಕಡಿಮೆ ಆಗುತ್ತದೆ.
  • ಸ್ನಾನ ಮಾಡುವ ನೀರಿಗೆ ಮಲ್ಲಿಗೆ ಎಣ್ಣೆ ಅಥವಾ, ಲ್ಯಾವೆಂಡರ್ ಆಯಿಲ್‌ನ್ನು ಎರಡು ಚಮಚ ಹಾಕಿಕೊಂಡು ಸ್ನಾನ ಮಾಡುವುದರಿಂದ ಬೆವರು ಹೆಚ್ಚು ಬರುವುದನ್ನು ತಡೆಯಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!