Tuesday, July 5, 2022

Latest Posts

ಅತಿಹೆಚ್ಚು ಸೋಂಕಿತರ ಸಾವು: ಸೂಪರ್ ಸ್ಪೀಡ್ ಕೊರೋನಾಗೆ ತತ್ತರಿಸಿದ ಬ್ರಿಟನ್‌

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬ್ರಿಟನ್‌ನಲ್ಲಿ ಉಂಟಾದ ಕೊರೋನಾ ಸೋಂಕಿನ ರೂಪಾಂತರದಿಂದ ಐದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಅತಿ ಹೆಚ್ಚು ಜನರ ಸಾವಾಗಿದೆ ಎಂದು ವರದಿಯಾಗಿದೆ
ಅಧಿಕೃತ ಅಂಕಿಅಂಶಗಳ ಪ್ರಕಾರ, ಬ್ರಿಟನ್‌ನಲ್ಲಿ ಬುಧವಾರ (ಡಿ.23) ಸೋಂಕಿನಿಂದ 744 ಜನರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಮಾರಕ ಸೋಂಕಿನಿಂದ ಒಟ್ಟು 69,157 ಜನರು ಮೃತಪಟ್ಟಿದ್ದಾರೆ.
ಇನ್ನು ಕೇವಲ ಒಂದೇ ದಿನದಲ್ಲಿ 39,237 ಜನರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ದೇಶದಲ್ಲಿ ಹೊಸ ರೂಪಾಂತರಗೊಂಡ ವೈರಸ್ ಪ್ರಾರಂಭವಾದ ಬಳಿಕ ಮೊದಲ ಬಾರಿಗೆ ಸಾರ್ವಜನಿಕರಲ್ಲಿ ಈ ಮಟ್ಟದಲ್ಲಿ ಸೋಂಕು ಕಾಣಿಸಿಕೊಂಡಿದೆ. ಸದ್ಯ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,155,996 ಕ್ಕೆ ತಲುಪಿದೆ.
ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್‌ಕಾಕ್ , ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಇಂಗ್ಲೆಂಡ್‌ನ ಪೂರ್ವ ಮತ್ತು ಆಗ್ನೇಯದ ಹೆಚ್ಚಿನ ಪ್ರದೇಶಗಳನ್ನು ಕಟ್ಟುನಿಟ್ಟಿನ ನಿರ್ಬಂಧಕ್ಕೆ ಒಳಪಡಿಸುವುದಾಗಿ ಘೋಷಿಸಿದ್ದಾರೆ.
ಎರಡನೇ ಹೊಸ ರೂಪಾಂತರ ಕೊರೋನಾ ಸೋಂಕು ದಕ್ಷಿಣ ಆಫ್ರಿಕಾದ ಪ್ರಯಾಣಿಕರಿಗೆ ಸಂಬಂಧಿಸಿದೆ ಎಂದು ಹ್ಯಾನ್ಕಾಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss