Saturday, September 26, 2020
Saturday, September 26, 2020

Latest Posts

ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ಕೊಟ್ಟ ದೀದಿ ಸರಕಾರ: ಅ. 1 ರಿಂದ ಚಿತ್ರಮಂದಿರಗಳು ಓಪನ್!

ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೆಲವು ಷರತ್ತುಗಳೊಂದಿಗೆ ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ನೀಡಿದ್ದಾರೆ. ಆದರೆ ಯಾವ ಕಾರ್ಯಕ್ರಮಗಳಿಗೂ ಹೆಚ್ಚು ಜನರು ಸೇರುವಂತಿಲ್ಲ, ವೈಯಕ್ತಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್...

ಕೋವಿಡ್ ಟೆಸ್ಟ್​ ಬೆಲೆ ಮತ್ತಷ್ಟು ಕಡಿಮೆ ಮಾಡಿದ ರಾಜ್ಯ ಸರಕಾರ

ಬೆಂಗಳೂರು: ರಾಜ್ಯದಲ್ಲಿ ಕಾಡುತ್ತಿರುವ ಕೊರೋನಾ ಸೋಂಕಿನ ಪತ್ತೆಗೆ ಅನುಕೂಲ ಮಾಡಿಕೊಡಲು ಕೋವಿಡ್ ಟೆಸ್ಟ್​ ಬೆಲೆಯನ್ನು ಸರ್ಕಾರ ಮತ್ತಷ್ಟು ಕಡಿಮೆ ಮಾಡಿದೆ. ಈ ಮೂಲಕ ಸಾರ್ವಜನಿಕರಿಗೆ ಟೆಸ್ಟ್​ ಹೊರೆ ಕಡಿಮೆ ಆಗುವಂತೆ ಮಾಡಿದೆ. ರಾಜ್ಯ ಸರ್ಕಾರ...

32 ವರ್ಷಗಳ ಬಳಿಕ ಸಿಕ್ಕಿತು ಭಾರತೀಯ ಪೌರತ್ವ: ಸರಕಾರಕ್ಕೆ ಧನ್ಯವಾದ ಅರ್ಪಿಸಿದ ಪಾಕಿಸ್ತಾನದ ಫಕ್ರಾ ನೌರೀನ್!

ಬುಲಂದ್‌ಶಹರ್ (ಉತ್ತರ ಪ್ರದೇಶ): ಕಳೆದ 32 ವರ್ಷಗಳಿಂದ ಹೋರಾಡುತ್ತಿರುವ ಪಾಕಿಸ್ತಾನದ ಫಕ್ರಾ ನೌರೀನ್ ಗೆ ಕೊನೆಗೂ ಸಿಕ್ಕಿತು ಭಾರತೀಯ ಪೌರತ್ವ. ಹೌದು , ನಿಕಾಹ್ ನಂತರ, ಪಾಕಿಸ್ತಾನ ಮೂಲದ ಫಕ್ರಾ ನೌರೀನ್ ಕಳೆದ 32...

ಅತ್ತೆ, ಸೊಸೆಯ ಮನೋಭಾವ ಬದಲಾಗಲಿ

ಒಬ್ಬ ಪ್ರಾಪ್ತವಯಸ್ಕ ಸರ್ಕಾರ ನಿಗದಿ ಪಡಿಸಿದಂತೆ 21 ವರ್ಷ ಮೇಲ್ಪಟ್ಟವನು. ಅವನು ಮದುವೆಯಾಗುವ ಸಮಯವೆಂದರೆ ಹೆತ್ತವರ ಬಗ್ಗೆ ಅವನ ತಿಳಿವಳಿಕೆ, ಭಾವನೆಗಳು ಸ್ಪುಟವಾಗಿರುತ್ತವೆ. ಹೆಂಡತಿ ಹೇಳುವುದರಿಂದಲೇ ಹೆತ್ತವರನ್ನು ಅವನು ಅರ್ಥ ಮಾಡಿಕೊಳ್ಳಬೇಕೇ?  ಅಥವಾ ಅರ್ಥ ಮಾಡಿಕೊಳ್ಳುತ್ತಾನೆ ಎನ್ನುವುದು ಸರಿಯೇ ಎಂಬುದನ್ನು ಎಲ್ಲರೂ ವಿಚಾರ ಮಾಡಬೇಕು. ಹೆಂಡತಿಯ ಕೈಗೊಂಬೆಯಾಗಿದ್ದಾನೆ ಎಂಬುದು ಸತ್ಯವಾದರೆ ಸ್ವಂತಿಕೆ ಇಲ್ಲದ ವ್ಯಕ್ತಿತ್ವದವನವನು ಎನ್ನುವುದಕ್ಕೆ ಅವನನ್ನು ಬಾಲ್ಯದಿಂದ ಬೆಳೆಸಿದ ಹೆತ್ತವರೂ ಅರ್ಧ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ.

-ಮಾಲತಿ ಹೆಗಡೆ

ಹೆಣ್ಣಾಗಿಯೂ ಇನ್ನೊಬ್ಬ ಹೆಣ್ಣಿನ ಸಂವೇದನೆಗಳು ಅರ್ಥವಾಗದ ವ್ಯಥೆ ಇರುವುದು ಅತ್ತೆ ಸೊಸೆಯ ಸಂಬಂಧದಲ್ಲಿ ಮಾತ್ರವಿರಬೇಕು.  ಮನೋಭಾವ ಬದಲಿಸಿಕೊಂಡರೆ ಈ ಸಂಬಂಧವನ್ನು ಸುಧಾರಿಸುವುದು ಅಸಾಧ್ಯವೇನಲ್ಲ.

ಹೊತ್ತು ಹೆತ್ತು ಎತ್ತಿ ಆಡಿಸಿದ ಅಮ್ಮನನ್ನು ಮದುವೆಯಾದೊಡನೆ ಮಗ ಕಡೆಗಣಿಸುತ್ತಾನೆ ಎನ್ನುವುದು ಸತ್ಯವೇ ಹೌದೇ? ಅದಕ್ಕೆ ಕಾರಣ ಕೇವಲ ಸೊಸೆಯೇ ಹೌದೇ? ಒಬ್ಬ ಪ್ರಾಪ್ತವಯಸ್ಕ ಸರ್ಕಾರಿ ನಿಗದಿ ಪಡಿಸಿದಂತೆ 21 ವರ್ಷ ಮೇಲ್ಪಟ್ಟವನು. ಅವನು ಮದುವೆಯಾಗುವ ಸಮಯವೆಂದರೆ ಹೆತ್ತವರ ಬಗ್ಗೆ ಅವನ ತಿಳುವಳಿಕೆ,ಭಾವನೆಗಳು ಸ್ಪುಟವಾಗಿರುತ್ತವೆ. ಹೆಂಡತಿ ಹೇಳುವುದರಿಂದಲೇ ಹೆತ್ತವರನ್ನು ಅವನು ಅರ್ಥ ಮಾಡಿಕೊಳ್ಳಬೇಕೇ? ಅಥವಾ ಅರ್ಥ ಮಾಡಿಕೊಳ್ಳುತ್ತಾನೆ ಎನ್ನುವುದು ಸರಿಯೇ ಎಂಬುದನ್ನು ಎಲ್ಲರೂ ವಿಚಾರ ಮಾಡಬೇಕು. ಹೆಂಡತಿಯ ಕೈಗೊಂಬೆಯಾಗಿದ್ದಾನೆ ಎಂಬುದು ಸತ್ಯವಾದರೆ ಸ್ವಂತಿಕೆ ಇಲ್ಲದ ವ್ಯಕ್ತಿತ್ವದವನವನು ಎನ್ನುವುದಕ್ಕೆ ಅವನನ್ನು ಬಾಲ್ಯದಿಂದ ಬೆಳೆಸಿದ ಹೆತ್ತವರೂ ಅರ್ಧ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಇರಲಿ. ಒಂದಿಷ್ಟು ಅತ್ತೆ ಸೊಸೆಯರ ನೈಜ ಕತೆಗಳತ್ತ ದೃಷ್ಟಿ ಹಾಯಿಸೋಣ.

ಇವರು ಹೀಗೇಕೆ? ಒಮ್ಮೆ ದಾರವಾಡದ ಸಮೀಪ ಒಂದು ಹಳ್ಳಿಗೆ ಹೋಗಿದ್ದೆ. ಗೌಡರು ಮಗ ತನ್ನ ನಾಲ್ಕು ವರ್ಷದ ಅಕ್ಕನ ಮಗಳನ್ನು ಓಡಾಡಿಸುತ್ತ, ಆಟವಾಡಿಸುತ್ತ ಇದ್ದರೆ ಗೌಡಶಾನಿ ನೋಡ್ರೀ ಭಾವಿ ಹೆಂಡ್ತಿನ ಹೆಂಗ ಆಟಾ ಆಡಿಸ್ತಾನ ನನ್ನ ಮಗಾ ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. ಹದಿನಾರು ವರ್ಷ ವಯಸ್ಸಿನ ಅಂತರವಿದೆ ಅವರಿಬ್ಬರಿಗೆ. ಹಿಂಗ್ಯಾಕೆ ವಿಚಾರ ಮಾಡತೀರಿ? ಎಂದು ನಾನು ಕೇಳಿದಾಗಲೆಲ್ಲ ಏನೂ ಆಗಂಗಿಲ್ರಿ. ಹಡದ ಹಡದ ಹೆಂಗಸರು ಜಲ್ದಿ ಮುದಕಿ ಆಗ್ತಾರು. ಗಂಡಸಮಗಾ ಇದ್ದಂಗ ಇರತಾನೂ, ನಮ್ಮ ಕಡಿಗೆಲ್ಲಾ ಹಿಂಗರೀ. ವರದಕ್ಷಿಣೆ ವರೋಪಚಾರ ತಪ್ಪತದ. ಎಷ್ಟಾತೋ ಅಷ್ಟ ಕೊಟ್ರ ಸಾಕಾಗ್ತದ ಅಂತ ಹೆಣ್ಣ ಹುಟ್ಟಿದ ಕೂಡ್ಲೆ ಮಗಳು ತಾಯಿ ಕೂಡ ಈಕೀನ್ನೆ ನನ್ನ ತಮ್ಮಗ ತಗೋಬೇಕು ಅಂತ ಮಾತು ತಗೊಂಡು ಬಿಡ್ತಾರ್ರೀ ಎಂದು ಸಮರ್ಥನೆ ಮಾಡಿಕೊಂಡರು.  ನನ್ನ ಕಳ್ಳು ಬಳ್ಳಿಯಲ್ಲೇ ತಂದುಕೊಂಡರೆ ನಾಳೆ ಮುದಕಿಯಾದಾಗ ಚೊಲೋ ನೋಡಿಕೊತಾರ್ರೀ ಎನ್ನುವ ಅವರ ಸ್ವಾರ್ಥದ ನಡೆಯಲ್ಲಿ ಮಕ್ಕಳ ‘ವಿಷ್ಯದ ಕಾಳಜಿ ಇದೆ ಎನ್ನಲಾದೀತೆ?  ರಕ್ತ ಸಂಬಂಧದಲ್ಲೇ ಮದುವೆಯಾದ ಅನೇಕರಿಗೆ ಬುದ್ಧಿಮಾಂದ್ಯ ಮಕ್ಕಳು ಹುಟ್ಟುತ್ತಾರೆ. ಆಗ ಅಜ್ಜಿಯರೇ ಟಿಪಿಕಲ್ ಅತ್ತೆಯಾಗುವುದೂ ಇದೆ.

ಉತ್ತರ ಕರ್ನಾಟಕದ ಅನೇಕ ನಗರ ಹಳ್ಳಿಗಳಲ್ಲಿ ಸರ್ವೆ ಮಾಡಿದರೆ ಬಹುಶಃ ನೂರಕ್ಕೆ ಐವತ್ತರಷ್ಟು ರಕ್ತ ಸಂಬಂಧದ ಮದುವೆಗಳು. ಹೆಚ್ಚಿನವರಿಗೆ ಹುಟ್ಟುವುದು ಕಿವಿ ಕೇಳದ, ಮಾತು ಬಾರದ, ಅಂಧತ್ವದಿಂದ ಬಳಲುವ, ಬುದ್ಧಿಮಾಂದ್ಯತೆಯಿಂದ ನಲುಗುವ ಮಕ್ಕಳು. ಆಸ್ತಿ ಇನ್ಯಾರ ಪಾಲಿಗೂ ಸೇರಬಾರದು ಎನ್ನುವ ಹಠವೂ ರಕ್ತ ಸಂಬಂಧದ ಮದುವೆಗೆ ಮುಖ್ಯ ಕಾರಣ. ಇಂದಿನ ತಲೆಮಾರಿನ ಹುಡುಗಿಯರಾದರೂ ಇಂತಹ ಸಂಪ್ರದಾಯಗಳ ವಿರುದ್ಧ ಬಲವಾದ ದ್ವನಿ ಎತ್ತಬೇಕಿದೆ.

ದೇಶಕ್ಕಾಗಿ ಬಲಿದಾನಗೈದ ಹಲವು ಯೋಧರ ಪತ್ನಿಯರನ್ನು ಒಮ್ಮೆ ಮಾತನಾಡಿಸಿದ್ದೆ. ಆಗ ಗೊತ್ತಾಗಿದ್ದು ವಿಧವೆ ಸೊಸೆಯರ ಬಗ್ಗೆ ವಿಚಿತ್ರವಾಗಿ ನಡೆದುಕೊಳ್ಳುವ ಅತ್ತೆಯರ ಬಗ್ಗೆ. ಒಬ್ಬ ಅತ್ತೆ ಇನ್ನು ನಿನ್ನ ಬದುಕೆಂದರೆ ಹಾರ ಹಾಕಿರುವ ನನ್ನ ಮಗನ ಫೋಟೋ ನೋಡಿ ಅಳುತ್ತಾ ಕಳೆಯುವುದು ಎಂದರೆ ಇನ್ನೊಬ್ಬ ಅತ್ತೆ ಇಪ್ಪತ್ತು ವರ್ಷದ ವಿಧವೆ ಸೊಸೆಯ ಮರು ಮದುವೆಗೆ ಅಡ್ಡಗಾಲು ಹಾಕಿದ್ದಳು. ಮಗುದೊಬ್ಬ ಅತ್ತೆ ಪರಿಹಾರ ಧನದ ವಿಷಯದಲ್ಲಿ ಸೊಸೆಯೊಂದಿಗೆ ಮಾರಾಮಾರಿ ನಡೆಸಿ ಮಧ್ಯಮದವರೆದುರು ಸುದ್ದಿಯಾಗಿದ್ದಳು. ಎಷ್ಟೆಲ್ಲ ಯೋಧರು ಯುದ್ಧ ಮುಗಿಸಿ ಸುರಕ್ಷಿತವಾಗಿ ಹಿಂದಿರುಗಿದ್ದಾರೆ ನಿನ್ನ ಕಾಲ್ಗುಣ ಕೆಟ್ಟದ್ದಾಗಿರುವುದರಿಂದಲೇ ನನ್ನ ಮಗ ಸತ್ತಿದ್ದು ಎಂದು ಹಂಗಿಸುವ ಅತ್ತೆಯರಿದ್ದಾರೆ ಎಂದು ಅವರು ಕತೆ ಹೇಳುತ್ತಾರೆ. ಯಾಕೆ ಈ ಅತ್ತೆಯರಿಗೆ ಮಗನನ್ನು ಕಳೆದುಕೊಂಡ ಮೇಲೂ ಈ ಬದುಕಿನ ಮಿತಿ ಇಷ್ಟೇ ಎಲ್ಲರೂ ಒಂದಲ್ಲ ಒಂದು ದಿನ ಎಲ್ಲವನ್ನೂ ಬಿಟ್ಟು ಹೋಗುವವರೇ ಎಂಬ ಸತ್ಯ ಅರ್ಥವಾಗುವುದಿಲ್ಲ? ಒಂದು ಉದಾತ್ತ ಧ್ಯೇಯಕ್ಕಾಗಿ ಮಕ್ಕಳನ್ನು ಯುದ್ಧ ಭೂಮಿಗೆ ಕಳಿಸುವ ಈ ಅಮ್ಮಂದಿರು. ಅವನು ತೀರಿಕೊಂಡ ನಂತರ ಸ್ವಾರ್ಥಿಯಾಗುತ್ತಾರಾದರೂ ಯಾಕೆ? ಮಗನ ಸಾವಿನಿಂದ ಕಂಗಾಲಾಗಿರುವ ಸೊಸೆಯಲ್ಲಿಯೇ ಮಗನನ್ನು ಕಂಡು ಮೊಮ್ಮಕ್ಕಳನ್ನು ನೆಮ್ಮದಿಯಾಗಿ ಬೆಳೆಸಲು ಸೊಸೆಯ ಬೆಂಬಲಕ್ಕೆ ನಿಲ್ಲಬಾರದೇ? ಇನ್ನು ನಿಜಕ್ಕೂ ಮಗನ ಸಾವಿನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪಾಲಕರಿದ್ದರೆ ಪರಿಹಾರ ‘ನವನ್ನೆಲ್ಲ ಕಟ್ಟಿಕೊಂಡು ಬೇರೆ ಮನೆ ಮಾಡಿಕೊಂಡು ಹೋಗುವ ಬದಲು ಇನ್ನು ನಾನು ನಿಮ್ಮ ಮಗನಾಗಿ ಬದುಕುತ್ತೇನೆ ಎಂದು ಸೊಸೆ ಹೇಳಬಾರದೇ ಎನಿಸುವುದು ಸುಳ್ಳಲ್ಲ.

ಇದು ನ್ಯಾಯವೇ? ಪರಿಚಿತ ಶಿಕ್ಷಕಿಯೊಬ್ಬರು ಗಂಡನ ನಿಧನದ ನಂತರ ತನ್ನ ಮಕ್ಕಳನ್ನು ಕಷ್ಟಪಟ್ಟು ಬೆಳೆಸಿದ್ದರು. ಹಿರಿಯ ಮಗಳನ್ನು ಬಿ.ಎ ಓದಿಸಿ ಶ್ರೀಮಂತ ಮನೆತನ ಹುಡುಗನ ಅಮ್ಮ ಸಂಬಂಧ ವಿಚಾರಿಸಿಕೊಂಡು ಬಂದಾಗ ಸಂತಸದಿಂದ ಸಾಲಸೋಲ ಮಾಡಿ ಚೆಂದವಾಗಿ ಮದುವೆ ಮಾಡಿಕೊಟ್ಟರು. ತಾಯಿ ಮತ್ತಾರು ತಿಂಗಳಲ್ಲಿ ಒಂದು ದಿನ ಮಾರುಕಟ್ಟೆಯಲ್ಲಿ ಸಿಕ್ಕರು. ಸೊರಗಿ ಸೊರಗಿ ಹೆಂಚಿನ ಕಡ್ಡಿಯಂತಾದವರನ್ನು ನೋಡಿ ಯಾಕ್ರೀ ಹೀಗಿದ್ದೀರಿ ಎಂದೆ. ನಾನು ಇಷ್ಟಾದರೂ ಇದ್ದೇನೆ. ನನ್ನ ಮಗಳು ಆಸ್ಪತ್ರೆಯಲ್ಲಿದಾಳ್ರೀ ಅಕ್ಕಾ ಎಂದಳು. ಅವಳಿಗೇನಾಯ್ತು ಕೇಳಿದೆ. ಅವಳನ್ನು ಮದುವೆಯಾದವನು ಷಂಡನಿದ್ದಾನ್ರೀ. ಒಬ್ಬ ಹೆಣ್ಣಿನ ಬಾಳು ಹಾಳು ಮಾಡಬಾರದು ಎಂಬ ವಿಚಾರವಿಲ್ಲದೇ ಬಡವರ ಮನೆಯ ಹುಡುಗಿಯನ್ನು ಮದುವೆ ಮಾಡಿಸಿಕೊಂಡರೆ ವಸ ಒಡವೆಗಳ ಆಸೆಯಲ್ಲಿ ಸೊಸೆಯಂತೆ ಬದುಕಿಬಿಡಬಹುದು ಎಂಬ ದುರಾಲೋಚನೆ ಮಾಡಿ ಅವಳತ್ತೆ ನನ್ನ  ಮಗಳನ್ನು ಮದುವೆ ಮಾಡಿಸಿಕೊಂಡಿದ್ದಾರೆ. ಅವನು ದೈಹಿಕ ಸುಖ ಕೊಡಲಾರದವನಾದರೂ ಇವಳಿಗೆ ಪ್ರತಿ ರಾತ್ರಿಯೂ ತರಾವರಿ ಹಿಂಸೆಯನ್ನು ಇವಳಿಗೆ ಕೊಡುತ್ತಾನಂತೆ. ಈಗ ಕೃತಕ ಗರ್ಭಧಾರಣೆ ಮಾಡಿಸಿಕೊಂಡು ಒಂದು ವಂಶೋದ್ಧಾರಕನನ್ನು ಹೆತ್ತುಕೊಡು ಎಂದು ಪೀಡಿಸುತ್ತಿದ್ದಾರಂತೆ ಎಂದು ಕಣ್ಣೀರು ಹಾಕಿದರು. ಬಲವಾದ ಕಾರಣವಿರುವುದರಿಂದ ಡಿವೋರ್ಸ್ ಸಿಗುತ್ತದೆ. ಆದರೆ ಕೋರ್ಟಿಗೆ ಓಡಾಡುವುದರಲ್ಲಿ ಕಳೆಯುವ ಆ ಹುಡುಗಿಯ ಯೌವನದ ದಿನಗಳು ಮತ್ತೆ ಸಿಗುತ್ತವೆಯೇ. ಅತ್ತ ವಿದ್ಯಾಭ್ಯಾಸವೂ ಮುಗಿಯದ ಇತ್ತ ಸಂಸಾರವೂ ಸರಿಹೋಗದ ಅವಳ ಮಗಳ ಅತಂತ್ರ ಸ್ಥಿತಿ, ಮಾನಸಿಕ ಆಘಾತ ಇವುಗಳಿಗೆ ಯಾರನ್ನು ಹೊಣೆಯಾಗಿಸುವುದು? ಅತ್ತೆ ಒಂದು ಕ್ಷಣ ಆ ಸೊಸೆಯ ಸ್ಥಾನದಲ್ಲಿ ತನ್ನನ್ನೆ ಇಟ್ಟು ನೋಡಿಕೊಂಡಿದ್ದರೆ?

ಹುಟ್ಟು, ಬಾಲ್ಯ, ಯೌವನ, ನಡುಹರಯ, ವೃದ್ಧಾಪ್ಯ, ಸಾವು ಹೀಗೊಂದು ಬದುಕಿನ ಚಕ್ರದಲ್ಲಿ ನಮ್ಮ ಪಾತ್ರಗಳು ಬದಲಾಗುತ್ತಲೇ ಇರುತ್ತದೆ. ಯೌವನದಲ್ಲಿ ಯಾರನ್ನೋ ವರಿಸಿ ಸೊಸೆಯಾಗಿ ಬಂದು ಒಂದು ಮನೆ ತುಂಬಿದವಳು ಮಗನನ್ನು ಹೆತ್ತು ನಡುಹರಯದಲ್ಲಿ ಅತ್ತೆಯಾಗುತ್ತಾಳೆ. ಬಂದ ಸೊಸೆಯೂ ತನ್ನಂತೆಯೇ ಈ ಮನೆಗೆ ಬೆಳಕಾಗಲೆಂದೇ ಬಂದಿದ್ದಾಳೆ ಎಂದು ಸಹೃದಯತೆಯಿಂದ ವರ್ತಿಸುವುದು ಮುಖ್ಯ.

ಅಂತೆಯೇ ಬಂದ ಸೊಸೆಯೂ ತನ್ನ ಹೆತ್ತಮ್ಮನನ್ನು ಪ್ರೀತಿಸಿದಂತೆ ಗಂಡನ ಅಮ್ಮನನ್ನು ಆದರಿಸುವುದು ಅಗತ್ಯ. ಅತ್ತೆ ಸೊಸೆ ಸಂಬಂಧದ ಮುಖ್ಯಪಾತ್ರಧಾರಿಯಾದ ಮಗ ಕುಟುಂಬದ ಆಧಾರಸ್ಥಂಭವಾದ ತಂದೆ ತಾಯಿರನ್ನು ಸರಿಯಾದ ರೀತಿಯಲ್ಲಿ ಪತ್ನಿಗೆ ಪರಿಚಯಿಸಬೇಕು. ತಾಳ್ಮೆ, ತಿಳುವಳಿಕೆ, ಅಭಿಮಾನದಿಂದ ಪತ್ನಿಯನ್ನು ತನ್ನ ಕುಟುಂಬದ ಸದಸ್ಯಳನ್ನಾಗಿಸಬೇಕು.

ಅತ್ತೆ ಸೊಸೆಯನ್ನು ಹಳಿಯಲಿ ಅಥವಾ ಸೊಸೆ ಅತ್ತೆಯನ್ನು ಜರಿಯಲಿ ಇಬ್ಬರ ಮನಸ್ಥಿತಿಯೂ, ಮನೆಯ ಸ್ಥಿತಿಯೂ ಕೆಡುವುದಂತೂ ಸತ್ಯ. ಜಗಳವಾಡಿ ಬಡಿದಾಡಿದರೂ ದಿನ ಕಳೆಯುತ್ತದೆ. ಆನಂದದಿಂದ ನಲಿದಾಡಿದರೂ ದಿನ ಕಳೆಯುತ್ತದೆ. ಮೊದಲಿನ ಆಯ್ಕೆ ಏಕೆ?  ಒಬ್ಬರನ್ನೊಬ್ಬರು ಅರಿತು ಬೆರೆತು ಬಾಳುವುದರಲ್ಲಿಯೇ ಎಲ್ಲರ ಹಿತವಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ಕೊಟ್ಟ ದೀದಿ ಸರಕಾರ: ಅ. 1 ರಿಂದ ಚಿತ್ರಮಂದಿರಗಳು ಓಪನ್!

ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೆಲವು ಷರತ್ತುಗಳೊಂದಿಗೆ ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ನೀಡಿದ್ದಾರೆ. ಆದರೆ ಯಾವ ಕಾರ್ಯಕ್ರಮಗಳಿಗೂ ಹೆಚ್ಚು ಜನರು ಸೇರುವಂತಿಲ್ಲ, ವೈಯಕ್ತಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್...

ಕೋವಿಡ್ ಟೆಸ್ಟ್​ ಬೆಲೆ ಮತ್ತಷ್ಟು ಕಡಿಮೆ ಮಾಡಿದ ರಾಜ್ಯ ಸರಕಾರ

ಬೆಂಗಳೂರು: ರಾಜ್ಯದಲ್ಲಿ ಕಾಡುತ್ತಿರುವ ಕೊರೋನಾ ಸೋಂಕಿನ ಪತ್ತೆಗೆ ಅನುಕೂಲ ಮಾಡಿಕೊಡಲು ಕೋವಿಡ್ ಟೆಸ್ಟ್​ ಬೆಲೆಯನ್ನು ಸರ್ಕಾರ ಮತ್ತಷ್ಟು ಕಡಿಮೆ ಮಾಡಿದೆ. ಈ ಮೂಲಕ ಸಾರ್ವಜನಿಕರಿಗೆ ಟೆಸ್ಟ್​ ಹೊರೆ ಕಡಿಮೆ ಆಗುವಂತೆ ಮಾಡಿದೆ. ರಾಜ್ಯ ಸರ್ಕಾರ...

32 ವರ್ಷಗಳ ಬಳಿಕ ಸಿಕ್ಕಿತು ಭಾರತೀಯ ಪೌರತ್ವ: ಸರಕಾರಕ್ಕೆ ಧನ್ಯವಾದ ಅರ್ಪಿಸಿದ ಪಾಕಿಸ್ತಾನದ ಫಕ್ರಾ ನೌರೀನ್!

ಬುಲಂದ್‌ಶಹರ್ (ಉತ್ತರ ಪ್ರದೇಶ): ಕಳೆದ 32 ವರ್ಷಗಳಿಂದ ಹೋರಾಡುತ್ತಿರುವ ಪಾಕಿಸ್ತಾನದ ಫಕ್ರಾ ನೌರೀನ್ ಗೆ ಕೊನೆಗೂ ಸಿಕ್ಕಿತು ಭಾರತೀಯ ಪೌರತ್ವ. ಹೌದು , ನಿಕಾಹ್ ನಂತರ, ಪಾಕಿಸ್ತಾನ ಮೂಲದ ಫಕ್ರಾ ನೌರೀನ್ ಕಳೆದ 32...

ಗೆಲುವಿಗಾಗಿ ಕೋಲ್ಕತ್ತಾ ನೈಟ್​ ರೈಡರ್ಸ್ ಗೆ 143 ರನ್​ಗಳ ಸಾಧಾರಣ ಗುರಿ ನೀಡಿದ ಸನ್​ರೈಸರ್ಸ್​ ಹೈದರಾಬಾದ್!

ಅಬುಧಾಬಿ: ಯುಎಇ ಯಲ್ಲಿ ನಡೆಯುತ್ತಿರುವ 13 ನೇ ಐಪಿಎಲ್ ಸರಣಿಯ 8 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್​ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 142 ರನ್​ಗಳ...

Don't Miss

ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ಕೊಟ್ಟ ದೀದಿ ಸರಕಾರ: ಅ. 1 ರಿಂದ ಚಿತ್ರಮಂದಿರಗಳು ಓಪನ್!

ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೆಲವು ಷರತ್ತುಗಳೊಂದಿಗೆ ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ನೀಡಿದ್ದಾರೆ. ಆದರೆ ಯಾವ ಕಾರ್ಯಕ್ರಮಗಳಿಗೂ ಹೆಚ್ಚು ಜನರು ಸೇರುವಂತಿಲ್ಲ, ವೈಯಕ್ತಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್...

ಕೋವಿಡ್ ಟೆಸ್ಟ್​ ಬೆಲೆ ಮತ್ತಷ್ಟು ಕಡಿಮೆ ಮಾಡಿದ ರಾಜ್ಯ ಸರಕಾರ

ಬೆಂಗಳೂರು: ರಾಜ್ಯದಲ್ಲಿ ಕಾಡುತ್ತಿರುವ ಕೊರೋನಾ ಸೋಂಕಿನ ಪತ್ತೆಗೆ ಅನುಕೂಲ ಮಾಡಿಕೊಡಲು ಕೋವಿಡ್ ಟೆಸ್ಟ್​ ಬೆಲೆಯನ್ನು ಸರ್ಕಾರ ಮತ್ತಷ್ಟು ಕಡಿಮೆ ಮಾಡಿದೆ. ಈ ಮೂಲಕ ಸಾರ್ವಜನಿಕರಿಗೆ ಟೆಸ್ಟ್​ ಹೊರೆ ಕಡಿಮೆ ಆಗುವಂತೆ ಮಾಡಿದೆ. ರಾಜ್ಯ ಸರ್ಕಾರ...

32 ವರ್ಷಗಳ ಬಳಿಕ ಸಿಕ್ಕಿತು ಭಾರತೀಯ ಪೌರತ್ವ: ಸರಕಾರಕ್ಕೆ ಧನ್ಯವಾದ ಅರ್ಪಿಸಿದ ಪಾಕಿಸ್ತಾನದ ಫಕ್ರಾ ನೌರೀನ್!

ಬುಲಂದ್‌ಶಹರ್ (ಉತ್ತರ ಪ್ರದೇಶ): ಕಳೆದ 32 ವರ್ಷಗಳಿಂದ ಹೋರಾಡುತ್ತಿರುವ ಪಾಕಿಸ್ತಾನದ ಫಕ್ರಾ ನೌರೀನ್ ಗೆ ಕೊನೆಗೂ ಸಿಕ್ಕಿತು ಭಾರತೀಯ ಪೌರತ್ವ. ಹೌದು , ನಿಕಾಹ್ ನಂತರ, ಪಾಕಿಸ್ತಾನ ಮೂಲದ ಫಕ್ರಾ ನೌರೀನ್ ಕಳೆದ 32...
error: Content is protected !!