Thursday, August 11, 2022

Latest Posts

ಅತ್ಯಾಚಾರಿಗಳಿಗೆ ಗುಂಡಿಕ್ಕಿ ಕೊಲ್ಲಿ,ಯುಪಿ ಘಟನೆ ಖಂಡಿಸಿದ ಕಂಗನಾ

ಬಾಲಿವುಡ್ ನಟಿ ಕಂಗನಾ ರಣಾವತ್ ಸಾಮಾಜಿಕವಾಗಿ ಹೆಚ್ಚು ಸಕ್ರಿಯರಾಗುತ್ತಿದ್ದಾರೆ. ಬಾಲಿವುಡ್ ನೆಪೋಟಿಸಂ, ಡ್ರಗ್ಸ್, ಮುಂಬೈ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಗುಡುಗಿದ್ದ ನಟಿ ಈಗ ಅತ್ಯಾಚಾರಿಗಳ ವಿರುದ್ಧ ಸಿಡಿದೆದಿದ್ದಾರೆ. ಉತ್ತರ ಪ್ರದೇಶದ ಹಸ್ರಾತ್ ಎಂಬಲ್ಲಿ ೧೯ ವರ್ಷದ ಮಹಿಳೆ ಮೇಲೆ ಗ್ಯಾಂಗ್ ರೇಪ್ ಆಗಿದೆ. ಈ ಘಟನೆ ಈಗ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದು, ‘ಾರಿ ಖಂಡನೆ ವ್ಯಕ್ತವಾಗುತ್ತಿದೆ. ನಟಿ ಕಂಗನಾ ರಣಾವತ್ ಸಹ ಈ ಘಟನೆಯನ್ನು ಖಂಡಿಸಿದ್ದು, ’’ಅತ್ಯಾಚಾರಿಗಳನ್ನು ನಡುಬೀದಿಯಲ್ಲಿ ಗುಂಡಕ್ಕಿ ಕೊಲ್ಲಬೇಕು’’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ ೧೯ ವರ್ಷದ ಮಹಿಳೆ ಮೇಲೆ ದುಷ್ಕರ್ಮಿಗಳ ತಂಡ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ವರದಿಯಾಗಿದೆ. ಸಂತ್ರಸ್ಥ ಮಹಿಳೆಯನ್ನು ದೆಹಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಪರಿಣಾಮಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾಳೆ ಎಂದು ಆಕೆಯ ಸಹೋದರ ಖಚಿತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಂಗನಾ ’’ಈ ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಶೂಟ್ ಮಾಡಿ, ಪ್ರತಿವರ್ಷ ಸಂಖ್ಯೆಯಲ್ಲಿ ಹೆಚ್ಚುತ್ತಿರುವ ಈ ಸಾಮೂಹಿಕ ಅತ್ಯಾಚಾರಗಳಿಗೆ ಏನು ಪರಿಹಾರ? ಈ ದೇಶಕ್ಕೆ ಎಂತಹ ದುಃಖ ಮತ್ತು ಅವಮಾನಕರ ದಿನ. ನಮ್ಮ ಹೆಣ್ಣುಮಕ್ಕಳನ್ನು ನಾವು ದುರ್ಬಲಗೊಳಿಸಿದ್ದೇವೆ’’ ಎಂದು ಕಿಡಿಕಾರಿದ್ದಾರೆ.

 

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss