ಬೆಂಗಳೂರು:ಬೆಂಗಳೂರು: ಅತ್ಯಾಚಾರಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡು ಸಾವಿಗೀಡಾದ ಉತ್ತರ ಪ್ರದೇಶದ ಯುವತಿಯನ್ನು ಅಲ್ಲಿನ ಪೊಲೀಸರು ಒತ್ತಾಯ ಪೂರ್ವಕವಾಗಿ ಸಂಸ್ಕಾರ ಮಾಡಿಸಿದ್ದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ಉತ್ತರಪ್ರದೇಶದ ದಲಿತ ಯುವತಿಗೆ ಗೌರವಪೂರ್ವಕ ಅಂತ್ಯಕ್ರಿಯೆಗೂ ಅವಕಾಶ ನೀಡದೆ, ಹೆತ್ತವರನ್ನು ಗೋಳಾಡಿಸಿದ ಸರಾಕಾರದ ಕ್ರಮ ಖಂಡನಾರ್ಹ. ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಉತ್ತರಪ್ರದೇಶದ ಯಾವ ಹೆಣ್ಣು ಮಕ್ಕಳೂ ಸುರಕ್ಷಿತರಲ್ಲ.
ಇವರನ್ನು ವಜಾ ಮಾಡಿ ಎಂದು ಪ್ರಧಾನಿಯನ್ನು ಆಗ್ರಹಿಸಿದ್ದಾರೆ. ಇಂತಹಾ ಘಟನೆಗಳಿಗೆ ಯೋಗಿ ಮಾತ್ರವಲ್ಲ ಪ್ರಧಾನಿ ಕೂಡಾ ಹೊಣೆಯಾಗುತ್ತಾರೆ ಎಂದವರು ಹೇಳಿದ್ದಾರೆ.
ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ಉತ್ತರಪ್ರದೇಶದ ದಲಿತ ಯುವತಿಗೆ ಗೌರವಪೂರ್ವಕ ಅಂತ್ಯಕ್ರಿಯೆಗೂ ಅವಕಾಶ ನೀಡದೆ,
ಹೆತ್ತವರನ್ನು ಗೋಳಾಡಿಸಿದ @myogiadityanath ಕಾವಿಧಾರಿಗಳ ಪಾಲಿನ ಕಳಂಕ.ಇವರ ಆಡಳಿತದಲ್ಲಿ ಉತ್ತರಪ್ರದೇಶದ ಯಾವ ಹೆಣ್ಣು ಮಕ್ಕಳೂ ಸುರಕ್ಷಿತರಲ್ಲ.
ಮೊದಲು ಇವರನ್ನು ವಜಾ ಮಾಡಿ.#HathrasHorror
— Siddaramaiah (@siddaramaiah) September 30, 2020
ಉತ್ತರಪ್ರದೇಶದಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಮತ್ತು
ಕೊಲೆಯ ಹೊಣೆಯನ್ನು @myogiadityanath ಮಾತ್ರವಲ್ಲ,
ಅವರನ್ನು
ಬೆಂಬಲಿಸುತ್ತಿರುವ @narendramodi ಮತ್ತು ಸಮಸ್ತ ಸಂಘ ಪರಿವಾರ ಕೂಡಾ ಹೊರಬೇಕಾಗುತ್ತದೆ.ತಕ್ಷಣ @myogiadityanath ಅವರನ್ನು ಕಿತ್ತುಹಾಕಿ ಉತ್ತರಪ್ರದೇಶವನ್ನು ರಕ್ಷಿಸಿ.#HathrasHorror
— Siddaramaiah (@siddaramaiah) September 30, 2020