Monday, August 8, 2022

Latest Posts

ಅಥಣಿ | ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಓರ್ವನಲ್ಲಿ ಸೋಂಕು: ಸಚಿವ, ಶಾಸಕರಿಗೆ ಕಾಡಿದೆ ಕ್ವಾರಂಟೈನ್ ಭೀತಿ!

ಅಥಣಿ : ಅಥಣಿ ತಾಲೂಕಿನಲ್ಲಿ ಒಂದೇ ದಿನ ೧೨ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಜಲಸಂಪನ್ಮೂಲ ಸಚಿವ ಮತ್ತು ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಝಂಜರವಾಡಾದ ಓರ್ವನಲ್ಲಿ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಮೇ. ೨೫ ರಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಝುಂಜರವಾಡ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬ್ಯಾರೇಜ್ ಕಾಮಗಾರಿ ವೀಕ್ಷಣೆ ಮಾಡಿದ್ದರು. ಇವರ ಜೊತೆ ಝುಂಜರವಾಡ ಗ್ರಾಮಸ್ಥರೂ ಕೂಡ ಸಾಥ್ ನೀಡಿದ್ದರು. ಸಚಿವ ಮತ್ತು ಶಾಸಕರು ಗ್ರಾಮಸ್ಥರಿಂದ ಅಲ್ಪೋಪಹಾರ ಸೇವಿಸಿದ್ದರು. ಈಗ ಇದೇ ಗ್ರಾಮದ ಓರ್ವನಿಗೆ ಕೊರೋನಾ ದೃಢಪಟ್ಟಿರುವುದರಿಂದ ಚಿಂತೆ ಶುರುವಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಚಿವ- ಶಾಸಕರು ಹೋಮ್ ಕ್ವಾರಂಟೈನ್ ಆಗಬೇಕಾದ ಸನ್ನಿವೇಶ ಸೃಷ್ಟಿಯಾಗುವುದೇ ಎಂಬ ಪ್ರಶ್ನೆ ಜನರನ್ನು ಕಾಡಿದೆ.
ಇವರ ಜೊತೆ ಅಥಣಿ ಡಿವೈಎಸ್ಪಿ ಎಸ್ ವಿ ಗಿರೀಶ್, ಸಿಪಿಐ ಶಂಕರಗೌಡ ಬಸನಗೌಡ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರಪ್ಪನವರ್ ಸಹ ಪಾಲ್ಗೊಂಡಿದ್ದು ಇವರೆಲ್ಲರಿಗೂ ಚಿಂತೆ ಶುರುವಾಗಿದೆ.
ಸೋಂಕಿತ ವ್ಯಕ್ತಿ ಸಚಿವರಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದನೇ , ಎಲ್ಲಿದ್ದ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕುವ ಕಾರ್ಯ ಶುರುವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss