Friday, July 1, 2022

Latest Posts

ಅಧಿಕಾರಿಗಳ ನಿರ್ಲಕ್ಷ್ಯ: ಇನ್ನೂ ದುರಸ್ತಿ ಕಾಣದ ಉಪ್ಪಳ -ಕುಕ್ಕಾರು ಸೇತುವೆ ತಡೆಬೇಲಿ

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯ ಉಪ್ಪಳ ಹಾಗೂ ಕುಕ್ಕಾರು ಹೊಳೆಗಳಿಗೆ ನಿರ್ಮಿಸಿದ ಕಾಂಕ್ರೀಟ್ ತಡೆಬೇಲಿಗಳು (ತಡೆಗೋಡೆಗಳು) ಹಾನಿಗೊಂಡಿದ್ದು , ಕೂಡಲೇ ಅವುಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಶೋಚನೀಯ ಸ್ಥಿತಿಯಲ್ಲಿರುವ ಈ ಎರಡು ಸೇತುವೆಗಳ ತಡೆಗೋಡೆ ದುರಸ್ತಿಗೊಳಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಅಲ್ಲದೆ ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದ್ದರಿಂದ ವಾಹನ ಚಾಲಕರಲ್ಲಿ ಆತಂಕ ಹೆಚ್ಚುತ್ತಿದೆ.
ಉಪ್ಪಳ ಸೇತುವೆಯಲ್ಲಿ ಟಿಪ್ಪರ್ ಲಾರಿಯೊಂದು ನಿಯಂತ್ರಣ ತಪ್ಪಿ ತಡೆಬೇಲಿಗೆ ಡಿಕ್ಕಿ ಹೊಡೆದು ಮಗುಚಿಬಿದ್ದ ಘಟನೆ ಸಂಭವಿಸಿತ್ತು. ಇದರಿಂದಾಗಿ ತಡೆಬೇಲಿ ಹಾನಿಗೊಂಡಿತ್ತು. ಈ ಘಟನೆ ನಡೆದು ಅನೇಕ ತಿಂಗಳುಗಳು ಕಳೆದರೂ ಇನ್ನೂ ದುರಸ್ತಿ ಮಾಡಿಲ್ಲ. ಈ ಮಧ್ಯೆ ಕುಕ್ಕಾರು ಹೊಳೆಯ ಸೇತುವೆಯಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ಲಾರಿ ಡಿಕ್ಕಿ ಹೊಡೆದು ತಡೆಗೋಡೆ ಹಾನಿಗೊಂಡಿತ್ತು. ಇದೀಗ ಈ ಸೇತುವೆಯಲ್ಲಿ ಸಂಚರಿಸುವ ವೇಳೆ ಇತರ ವಾಹನಗಳಿಗೆ ಸೈಡ್ ನೀಡುವ ಸಂದರ್ಭ ಚಾಲಕರಲ್ಲಿ ಭಯ ಆವರಿಸುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಿಸಿ ಸೂಕ್ತವಾದ ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss