Saturday, August 13, 2022

Latest Posts

ಅಧಿಕಾರ ದಾಹ ನನಗಿಲ್ಲ, ಯಾರ ಬಳಿಯೂ ಭಿಕ್ಷೆ ಬೇಡುವುದಿಲ್ಲ: ಮಾಲೀಕಯ್ಯಾ ಗುತ್ತೇದಾರ

ಹೊಸ ದಿಗಂತ ವರದಿ, ಕಲಬುರಗಿ:

ಅಧಿಕಾರಕ್ಕಾಗಿ ಯಾರ ಬಳಿಯೂ ಭಿಕ್ಷೆ ಬೇಡಲ್ಲ, ಯಾರ ಮನೆ ಮುಂದೆಯೂ ನಿಲ್ಲಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಹೇಳಿದ್ದಾರೆ.
ಕೋವಿಡ್ ಸೋಂಕಿಗೆ ತುತ್ತಾಗಿ ಗುಣಮುಖಗೊಂಡ ನಂತರ ಕಲಬುರಗಿಗೆ ಆಗಮಿಸಿದ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ಅಧಿಕಾರ ದಾಹ ನನಗಿಲ್ಲ. ಸಚಿವರನ್ನಾಗಿಸಿ, ಎಂ.ಎಲ್.ಸಿ.ಯನ್ನಾಗಿಸಿ ಎಂದು ಯಾರ ಮನೆ ಬಳಿಯೂ ಹೋಗಲ್ಲ. ಈ ಮಾಲೀಕಯ್ಯ ಗುತ್ತೇದಾರ ಭಿಕ್ಷೆ ಬೇಡೋ ಜಾಯಮಾನದವನಲ್ಲ ಎಂದಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷನ ಸ್ಥಾನ ನೀಡಿದೆ, ಸದ್ಯಕ್ಕೆ ಅಷ್ಟಕ್ಕೆ ತೃಪ್ತಿಪಟ್ಟುಕೊಳುತ್ತೇನೆ ಎಂದರು. ಆದರೆ, ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಬೇಕು. ಕಲಬುರಗಿ ಜಿಲ್ಲೆಗೂ ಸಚಿವ ಸ್ಥಾನ ಸಿಗಬೇಕು. ಜಿಲ್ಲೆಗೆ ಬಾರದ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರನ್ನೂ ಬದಲಾಯಿಸಬೇಕು ಎಂದರು.
ಈ ಭಾಗದವರಿಗೆ ಜಿಲ್ಲೆಯ ಉಸ್ತುವಾರಿ ನೀಡಬೇಕು. ಯಾರೂ ಉತ್ತಮವಾಗಿ ಕೆಲಸ ಮಾಡ್ತಾರೋ ಅವರಿಗೆ ಉಸ್ತುವಾರಿ ನೀಡಲಿ. ಇಷ್ಟು ದಿನ ಸಚಿವ ಸ್ಥಾನದಲ್ಲಿ ಮಜಾ ಮಾಡಿದವರನ್ನು ಕೈಬಿಡಲಿ. ಹೊಸಬರಿಗೆ ಸಚಿವ ಸ್ಥಾನದ ಅವಕಾಶ ನೀಡಲಿ ಎಂದು ಮಾಲೀಕಯ್ಯ ಗುತ್ತೇದಾರ ಆಗ್ರಹಿಸಿದ್ದಾರೆ.
ಅತಿವೃಷ್ಟಿ‌ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಮನವಿ
ಇದೇ ವೇಳೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಆದರೆ ಕೇಂದ್ರದಿಂದ ಹೆಚ್ಚಿನ ಪರಿಹಾರ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಲಿದೆ ಎಂಬ ವಿಶ್ವಾಸವಿದೆ. ಸರ್ಕಾರ ತಕ್ಷಣವೇ ಮನೆ ಹಾಗೂ ಬೆಳೆ ಹಾನಿಯ ಸರ್ವೆ ಮಾಡಿಸಿ ಪರಿಹಾರ ವಿತರಿಸಲಿ ಎಂದು ಮಾಲೀಕಯ್ಯ ಒತ್ತಾಯಿಸಿದ್ದಾರೆ.
ಯಮಲೋಕದ ಹೊಸ್ತಿಲು ಮುಟ್ಟಿ ಬಂದಿರುವೆ
ಕೋರೊನಾಗೆ ಸೊಂಕಿಗೆ ಬಲಿಯಗಿ ಜೀವನ್ಮರಣದ ಹೋರಾಡಿ ಬಂದಿರುವೆ. ನಾಲ್ಕೈದು ದಿನ ಯಮಯಾತೆ ಅನುಭವಿಸಿರುವೆ. ಒಂದುರೀತಿಯ ಯಮಲೋಕದ ವಸ್ತಿಲು ಮುಟ್ಟಿ ವಾಪಸ್ ಬಂದಿರುವೆ. ಬದುಕಿತ್ತೆನೆ ಎಂಬ ಆಸೇ ಕಳೆದುಹೋಗಿತ್ತು. ಯಾರು ಸಹ ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರದಿರಿ ಎಂದು ತಾವು ಕೊರೊನಾ ಸೋಂಕಿಗೆ ತುತ್ತಾದಾಗ ಅನುಭವಿಸಿದ ಯಾತನೆ ವಿಸ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಸಿದ್ದಾಜೀ ಪಾಟೀಲ್, ಮಾಜಿ ಗ್ರಾಮಾಂತರ ಅಧ್ಯಕ್ಷ ದೊಡ್ಡಪಗೌಡ ಪಾಟೀಲ್ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss