ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳುತ್ತಿಲ್ಲ. ಈ ನಡುವೆ ಜೋ ಬೈಡನ್ ಟ್ರಂಪ್ ಅಧಿಕಾರ ಹಸ್ತಾಂತರಿಸಲು ವಿಳಂಬ ಮಾಡಿದರೆ ಕೊರೋನಾ ಲಸಿಕೆಗೂ ವಿಳಂಬವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಟ್ರಂಪ್ ಚುನಾವಣೆ ಸೋಲನ್ನು ಒಪ್ಪಿಕೊಳ್ಳದ ಕಾರಣ ಅಧಿಕಾರ ಹಸ್ತಾಂತರಕ್ಕೆ ಅಡ್ಡಿಯಾಗುತ್ತದೆ. ಅಧಿಕಾರ ಹಸ್ತಾಂತರಕ್ಕೆ ವಿಳಂಬವಾದಷ್ಟು ಕೊವಿಡ್-19 ಲಸಿಕೆ ಯೋಜನೆ ಹಿಂದಕ್ಕೆ ಬೀಳಲಿದೆ ಎಂದು ಬೈಡನ್ ಸ್ಪಷ್ಟಪಡಿಸಿದರು.
ಕೋವಿಡ್ ಕುರಿತಂತೆ ನಮ್ಮ ತಂಡಕ್ಕೆ ಯಾವೆಲ್ಲ ಮಾಹಿತಿ ಬೇಕಾಗಿದೆಯೋ ಅವೆಲ್ಲವೂ ಇನ್ನೂ ಸಿಕ್ಕಿಲ್ಲ. ಲಸಿಕೆ ಯಾವಾಗ ಬರಲಿದೆ, ಅದನ್ನು ವಿತರಣೆ ಮಾಡುವುದಕ್ಕೆ ಸಿದ್ಧವಾಗಿರುವ ಯೋಜನೆಗಳೇನು ಎಂಬ ಯಾವ ಮಾಹಿತಿಯೂ ಇಲ್ಲದಂತಾಗಿದೆ. ಇದಕ್ಕೆ ಬೇಕಾಗುವ ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲ ಎಂದು ಬೈಡನ್ ಆರೋಪಿಸಿದರು.
ಸರ್ಕಾರದ ಅಂಕಿ-ಅಂಶ, ಮಾಹಿತಿಗಳನ್ನು ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗೆ ಲಭ್ಯವಾಗುವಂತೆ ಸರ್ಕಾರ ಮಾಡಬೇಕು ಎಂದು ಹೇಳಿದರು.