Tuesday, June 28, 2022

Latest Posts

ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಸಮಿತಿಗೆ ಭಾರತೀಯ-ಅಮೆರಿಕನ್ ಮಜು ವರ್ಗೀಸ್ ನೇಮಕ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಅಮೆರಿಕದ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದ ಚಟುವಟಿಕೆಗಾಗಿ ರಚಿಸಿರುವ ಅಧ್ಯಕ್ಷೀಯ ಉದ್ಘಾಟನಾ ಸಮಿತಿಗೆ ಭಾರತೀಯ-ಅಮೆರಿಕನ್ ಮಜು ವರ್ಗೀಸ್’ರನ್ನು ನೇಮಕ ಮಾಡಲಾಗಿದೆ.

“ಅಧ್ಯಕ್ಷೀಯ ಉದ್ಘಾಟನಾ ಸಮಿತಿ”ಯಲ್ಲಿ ಒಟ್ಟೂ ನಾಲ್ಕು ಜನರಿದ್ದಾರೆ. ಸಮಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಟೋನಿ ಅಲೆನ್, ಉಪ ಕಾರ್ಯನಿರ್ವಾಹಕ ನಿರ್ದೇಶಕರುಗಳಾಗಿ ಎರಿನ್ ವಿಲ್ಸನ್‌ ಮತ್ತು ಯುವನ್ನಾ ಕಾನ್ಸೆಲಾ ,ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮಜು ವರ್ಗೀಸ್ ನೇಮಕ ಮಾಡಲಾಗಿದೆ.

ಮಜು ವರ್ಗೀಸ್”ರನ್ನು ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಅವರು ಈ ಸಮಿತಿಗೆ ನೇಮಿಸಿದ್ದಾರೆ. ಅಧಿಕಾರ ಸ್ವೀಕಾರ ಸಮಾರಂಭದ ಕಾರ್ಯಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿರುವುದು ಬಹಳ ದೊಡ್ಡ ಗೌರವ ಎಂದು ಮಜು ವರ್ಗೀಸ್ ಸಂತೋಷ ವ್ಯಕ್ತಪಡಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss