Saturday, August 13, 2022

Latest Posts

ಅನಂತ್ ನಾಗ್ ಜಾಗಕ್ಕೆ ಪ್ರಕಾಶ್ ರೈ, ಸ್ಪಷ್ಟನೆ ನೀಡಿದ ನಿರ್ದೇಶಕ ಪ್ರಶಾಂತ್ ನೀಲ್, ಅವರು ಹೇಳಿದೇನು?

ಕೆಜಿಎಫ್ ೨ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟ ಪ್ರಕಾಶ್ ರೈ ಚಿತ್ರೀಕರಣದ ಚಿತ್ರವನ್ನು ಟ್ವೀಟ್ ಮಾಡಿದ್ದೆ  ತಡ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯೇ ಹುಟ್ಟಿಕೊಂಡಿತ್ತು. ಕೆಜಿಎಫ್ ಮೊದಲ ‘ಭಾಗದ ಮುಖ್ಯಪಾತ್ರ ಅನಂತ್ನಾಗ್ ಪಾತ್ರವನ್ನು ಪ್ರಕಾಶ್ ರೈ ಮುಂದುವರೆಸುತ್ತಿದ್ದಾರೆ ಎಂದು ಸುದ್ದಿ  ಹರಡಿತ್ತು.  ಕೆಲವರಂತೂ ಅನಂತ್ನಾಗ್ ಸಿನಿಮಾದಲ್ಲಿ ಇಲ್ಲದೇ ಹೋದಲ್ಲಿ ಸಿನಿಮಾದಲ್ಲಿ ನಾವು ನಟಿಸುವುದಿಲ್ಲ’ ಎಂದರು. ಇನ್ನು ಕೆಲವರು ಬಾಯ್‌ಕಾಟ್ ಕೆಜಿಎಫ್ ಎಂದರು. ಆದರೆ ಎಲ್ಲದಕ್ಕೂ ನಿರ್ದೇಶಕ ಪ್ರಶಾಂತ್ ನೀಲ್ ಸ್ಪಷ್ಟನೆ ಕೊಟ್ಟಿದ್ದಾರೆ. ಕೆಜಿಎಫ್ ೨ ಪ್ರಶಾಂತ್ ನೀಲ್ ಹೇಳಿರುವ ಪ್ರಕಾರ, ಅನಂತ್ನಾಗ್ ಪಾತ್ರವನ್ನು ಬದಲಾಯಿಸಿಲ್ಲ. ಅನಂತ್ನಾಗ್ ಪಾತ್ರವನ್ನು ಪ್ರಕಾಶ್ ರೈ ಮಾಡುತ್ತಿಲ್ಲ. ಬದಲಿಗೆ ಪ್ರಕಾಶ್ ರೈ ಅವರದ್ದು ಭಿನ್ನವಾದ ಪಾತ್ರ. ಕೆಜಿಎಫ್ ೨ ಸಿನಿಮಾದಲ್ಲಿ ಸೇರಿಕೊಳ್ಳುತ್ತಿರುವ ಹೊಸ ಪಾತ್ರ ಎಂದಿದ್ದಾರೆ ಪ್ರಶಾಂತ್ ನೀಲ್.

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss