ಹೊಸ ದಿಗಂತ ವರದಿ, ಯಲ್ಲಾಪುರ:
ಖಾಸಗಿ ಬಸ್ನಲ್ಲಿ ಯಾವುದೇ ದಾಖಲೆಗಳಿಲ್ಲದೇ ಅನಧಿಕೃತವಾಗಿ 50 ಲಕ್ಷ ರೂ. ಹಣವನ್ನು ಸಾಗಿಸುತ್ತಿದ್ದ ಐವರನ್ನು ಪಟ್ಟಣ ವ್ಯಾಪ್ತಿ ಜೋಡುಕೆರೆ ಕ್ರಾಸ್ ಬಳಿ ಯಲ್ಲಾಪುರ ಪೋಲಿಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಆರೋಪಿಗಳಾದ ಗುಜರಾತಿನ ಮೋಹಶಾನ್ ಜಿಲ್ಲೆಯ ಹೂಂಜಾದ ಚೌಧರಿವಾಸ ಅಮೂದನ ವ್ಯವಹಾರಸ್ಥರಾದ ದಿನೇಶಜಿ ದಿಲೀಪ .ಪ್ರಭಾತಜಿ. ಠಾಕೂರ . (34), ಪಂಕಜಕುಮಾರ ಪ್ರಕಾಶ ರಾಮಾಭಾಯಿ ಪಟೇಲ್(40), ಅಹಮದಾಬಾದನ ಕಿಶನನಗರದ ಗೋವೀಂದ ಭಾಯಿ ನಾಥೂದಾಸ ಪಟೇಲ್(50), ಮುಖೇಶಬಾಯಿ ಚತುರಭಾಯಿ ಪಟೇಲ್(55), ಉಪೇಂದ್ರ ನಾರಾಯಣಬಾಯಿ ಪಟೇಲ್ ಇವರೆಲ್ಲರೂ ಬೆಳಗಾವಿಯಿಂದ ಮಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಯಲ್ಲಾಪುರ ಪೊಲೀಸರು ಜೋಡುಕೇರಿ ಬಳಿ ಬಸ್ ತಡೆದು ದಾಳಿನಡೆಸಿ ಅವರಬಳಿಯಿದ್ದ ದಾಖಲೆಗಳಿಲ್ಲದ 50ಲಕ್ಷ ರೂ. ಹಾಗೂ ವಿವಿಧ ಕಂಪನಿಗಳ 23.000 ರೂ ಮೌಲ್ಯದ 6 ಮೋಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ಕುರಿತು ಆದಾಯ ತೆರಿಗೆ ಇಲಾಖೆಯವರಿಗೆ ಸಂಪರ್ಕಿಸಿ ಮಾಹಿತಿ ನೀಡಲಾಗಿದೆ . ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಶಿವಪ್ರಸಾದ ದೇವರಾಜು,ಹಾಗೂ ಶಿರಸಿಡಿವಾಯ್ಎಸ್ಪಿ ರವಿ .ಡಿ.ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ ಯಳ್ಳೂರ ,ಪಿಎಸ್ ಐ ಮಂಜುನಾಥ ಗೌಡರ, ಸಿಬ್ಬಂದಿಗಳಾದ ದೀಪಕ ನಾಯ್ಕ, ನಾಗಪ್ಪಾ ಲಮಾಣಿ,ಮಹಮ್ಮದ್ ಶಫಿ,ಕೃಷ್ಣ ಮಾತ್ರೋಜಿ,ಗಿರೀಶ ಲಮಾಣಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.