Sunday, August 14, 2022

Latest Posts

ಅನಾನಸ್ನಿಂದ ಕಾಯಿಲೆಗೆ ಪ್ರಯೋಜನಾಕಾರಿ, ಹಲವು ಸಮಸ್ಯೆಗಳಿಗೆ ಇಲ್ಲಿದೆ ಮನೆ ಮದ್ದು.

ಆರೋಗ್ಯಕರ ಹಣ್ಣುಗಳಲ್ಲಿ ಅನಾನಸ್ ಕೂಡ ಒಂದು. ಪೈನಾಪಲ್ನಲ್ಲಿ ಫೈಬರ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿರುತ್ತವೆ. ಹೀಗಾಗಿ ಇದನ್ನು ತಿನ್ನುವುದರಿಂದ ಹಾಗೂ ಜ್ಯೂಸ್ ಮಾಡಿ ಕುಡಿಯುವುದರಿಂದ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಹೆಚ್ಚಿನವರು ಈ ಹಣ್ಣಿನ ಸಿಪ್ಪೆಗಳನ್ನು ನಿಷ್ಪ್ರಯೋಜಕವೆಂದು ತ್ಯಜಿಸುತ್ತಾರೆ. ಇದರಲ್ಲೂ ಪೌಷ್ಟಿಕ ಅಂಶಗಳಿವೆ ಎಂದರೆ ನೀವು ನಂಬಲೇಬೇಕು.

ಅನಾನಸ್ ಸಿಪ್ಪೆಯು ವಿಟಮಿನ್ ಬಿ, ಪೋಲೇಟ್, ಥಯಾಮಿನ್, ಪ್ಯಾಂಟೊಥೆನಿಕ್ ಆಮ್ಲ, ಬ್ರೊಮೆಲೈನ್, ನಿಯಾಸಿನ್ ಮುಂತಾದ ಅಂಶಗಳನ್ನು ಒಳಗೊಂಡಿದೆ. ಇದು ಅನೇಕ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇದಲ್ಲದೆ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಜಿಂಕ್, ಮ್ಯಾಂಗನೀಸ್, ಕ್ಯಾಲ್ಸಿಯಂ, ಐರನ್ ಅಂಶಗಳೂ ಕೂಡ ಇದರಲ್ಲಿವೆ. ಹಾಗೆಯೇ ಆ್ಯಂಟಿ ಬ್ಯಾಕ್ಟೀರಿಯಾ ಅಂಶಗಳನ್ನು ಸಹ ಹೊಂದಿದ್ದು, ಇದು ಉರಿಯೂತ ಮತ್ತು ವಸ್ಸಾಗುವಿಕೆ ನಿ‘ಾನಗೊಳಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ.

ಅನಾನಸ್ ಸಿಪ್ಪೆಗಳಿಂದ ಸಿಗುವ ಪ್ರಯೋಜನಗಳೇನು ಎಂದು ತಿಳಿಯೋಣ:

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ: ಅನಾನಸ್ನೊಳಗಿನ ತಿರುಳಿಗೆ ಹೋಲಿಸಿದರೆ ಇದರ ಹೊರ ಚರ್ಮದ ಭಾಗವು ತುಂಬಾ ಗಟ್ಟಿಯಾಗಿರುತ್ತದೆ ಮತ್ತು ಇದು ರುಚಿಯಲ್ಲಿ ಸ್ವಲ್ಪ ಕಹಿಯಾಗಿರುತ್ತದೆ. ಆದರೆ ಒಳ್ಳೆಯ ಫೈಬರ್ನಿಂ‘ ತುಂಬಿರುತ್ತದೆ. ಈ ಸಿಪ್ಪೆಯಲ್ಲಿ ಬ್ರೊಮಾಲಿನ್ ಎಂಬ ಕಿಣ್ವ ಕಂಡುಬರುತ್ತದೆ. ಇದು ದೇಹದಲ್ಲಿ ರಕ್ತದ ರಚನೆಗೆ ಸಹ ಸಹಾಯ ಮಾಡುತ್ತದೆ. ಅದರೊಂದಿಗೆ ಜೀರ್ಣಕ್ರಿಯೆಯನ್ನು ಸು ಧಾರಿಸುತ್ತದೆ.

ಸುಟ್ಟಗಾಯಗಳಿಗೆ ಪರಿಹಾರ: ಅನಾನಸ್ ಸಿಪ್ಪೆಯಲ್ಲಿ ಕಂಡುಬರುವ ಬ್ರೊಮಾಲಿನ್ ಶಕ್ತಿಯುತ ಕಿಣ್ವವಾಗಿದ್ದು, ಇದು ದೇಹದಲ್ಲಿ ಸುಡುವ ಸಂವೇದನೆಗೆ ಪರಿಹಾರ ನೀಡುತ್ತದೆ. ಶಸ್ತ್ರಚಿಕಿತ್ಸೆ ಅಥವಾ ದೇಹಕ್ಕೆ ಯಾವುದೇ ರೀತಿಯ ಗಾಯವಾದರೆ, ಅನಾನಸ್ ಸಿಪ್ಪೆಗಳನ್ನು ಸೇವಿಸುವುದರಿಂದ ಶೀಘ್ರ ಪರಿಹಾರ ಸಿಗುತ್ತದೆ.

ರೋಗನಿರೋ‘ಕ ಶಕ್ತಿ ಹೆಚ್ಚಳ: ಅನಾನಸ್ ಸಿಪ್ಪೆಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಅನೇಕ ರೀತಿಯ ಚರ್ಮದ ಸೋಂಕುಗಳನ್ನು ತಡೆಯುತ್ತದೆ. ಬ್ರೊಮಾಲಿನ್ ಮತ್ತು ವಿಟಮಿನ್ ಸಿ ಒಟ್ಟಿಗೆ ದೇಹವನ್ನು ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತದೆ. ಇದು ಕೆಮ್ಮಿಗೂ ಪರಿಹಾರ ನೀಡುತ್ತದೆ ಮತ್ತು ದೇಹದ ರೋಗನಿರೋ‘ಕ ಶಕ್ತಿಯನ್ನು ಬಲಪಡಿಸುತ್ತದೆ.

ಸಂಧಿವಾತ ಮತ್ತು ಕೀಲು ನೋವು ನಿವಾರಣೆ: ಸಂಧಿವಾತ ಅಥವಾ ಕೀಲು ನೋವು ಇರುವ ಜನರು ಅನಾನಸ್ ಸಿಪ್ಪೆಯನ್ನು ಸೇವಿಸಬಹುದು. ನಿಮ್ಮ ಆಹಾರದಲ್ಲಿ ಚೆನ್ನಾಗಿ ಕ್ಲೀನ್ ಮಾಡಿ ಅನಾನಸ್ ಸಿಪ್ಪೆಯನ್ನು ನಿಯಮಿತವಾಗಿ ಸೇರಿಸುವುದರಿಂದ ಈ ಎರಡೂ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು.

ದೃಷ್ಟಿ ಹೆಚ್ಚಾಗುತ್ತದೆ; ಅನಾನಸ್ ಸಿಪ್ಪೆಗಳು ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಯಂತಹ ಅಂಶಗಳನ್ನು ಒಳಗೊಂಡಿರುತ್ತವೆ. ಇದು ಕಣ್ಣಿನ ದೃಷ್ಟಿ ತೀಕ್ಷ್ಣವಾಗಿಸಲು ಸಹಾಯ ಮಾಡುತ್ತದೆ. ಗ್ಲುಕೋಮಾದಂತಹ ರೋಗಗಳ ವಿರುದ್ಧ ಹೋರಾಡಲು ಸಹ ಇದು ಸಹಕಾರಿ.

ಹಲ್ಲು ಮತ್ತು ಮೂಳೆಗಳು ಬಲಗೊಳ್ಳುತ್ತವೆ: ಅನಾನಸ್ ಸಿಪ್ಪೆಗಳು ಹಲ್ಲು ಮತ್ತು ಮೂಳೆಗಳನ್ನು ಬಲಪಡಿಸುತ್ತವೆ. ಇವುಗಳಲ್ಲಿ ಕಂಡುಬರುವ ಮ್ಯಾಂಗನೀಸ್ ಒಸಡುಗಳು ಮತ್ತು ಅಂಗಾಂಶಗಳನ್ನು ಉರಿಯೂತದಿಂದ ರಕ್ಷಿಸುತ್ತದೆ. ಹಾಗೆಯೇ ಹಾನಿಗೊಳಗಾದ ಅಂಗಾಂಶಗಳನ್ನು ತ್ವರಿತವಾಗಿ ಸರಿಪಡಿಸಲು ಸಹಾಯ ಮಾಡುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss