ಅನಾರೋಗ್ಯದಿಂದ ಬಳಲುತ್ತಿರುವ ನಟ ಕಿಲ್ಲರ್ ವೆಂಕಟೇಶ್ ನೆರವಿಗೆ ಧಾವಿಸಿದ ಚಿತ್ರರಂಗ; 1 ಲಕ್ಷ ರೂ. ನೀಡಿದ ದರ್ಶನ್

0
206

ಕನ್ನಡದ ಹಿರಿಯ ನಟ ಕಿಲ್ಲರ್ ವೆಂಕಟೇಶ್ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆರ್ಥಿಕವಾಗಿ ಸಂಕಷ್ಟದ ಸ್ಥಿತಿಯಲ್ಲಿದ್ದ ಕಿಲ್ಲರ್ ವೆಂಕಟೇಶ್ ಕುಟುಂಬಕ್ಕೆ ನವರಸ ನಾಯಕ ಜಗ್ಗೇಶ್ ನೆರವಿಗೆ ಧಾವಿಸಿದ್ದರು. ಒಂದು ಕಾಲದಲ್ಲಿ ಕಿರ್ಲ್ಲರ್ ವೆಂಕಟೇಶ್ ಮತ್ತು ಜಗ್ಗೇಶ್ ಹಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ಆತ್ಮೀಯ ಸ್ನೇಹಿತನ ಕುಟುಂಬ ತುಂಬಾ ಕಷ್ಟದಿಂದ ನೋವು ಅನುಭವಿಸುತ್ತಿರುವ ಸಂಗತಿ ಗೊತ್ತಾಗುತ್ತಿದ್ದಂತೆ ಚಿತ್ರರಂಗದ ಪರವಾಗಿ ಸಹಾಯಕ್ಕೆ ನಿಂತಿದ್ದಾರೆ. ಇದೀಗ, ಕಿಲ್ಲರ್ ವೆಂಕಟೇಶ್ ಸಹಾಯಕ್ಕೆ ಚಾಲೆಂಜಿಂಗ್ ದರ್ಶನ್ ಕೂಡ ಬಂದಿದ್ದಾರೆ. ಕಿಲ್ಲರ್ ವೆಂಕಟೇಶ್ ಅವರ ಅನಾರೋಗ್ಯ ಹಾಗೂ ಆರ್ಥಿಕ ಪರಿಸ್ಥಿತಿಯ ಕುರಿತು ನಟ ಜಗ್ಗೇಶ್ ಅವರು ದರ್ಶನ್ ಅವರ ಬಳಿ ತಿಳಿಸಿದ್ದಾರೆ. ಜಗ್ಗೇಶ್ ಅವರ ಒಂದು ಫೋನ್‌ ಗೆ ತಕ್ಷಣ ಪ್ರತಿಕ್ರಿಯಿಸಿದ ದರ್ಶನ್ ಒಂದು ಲಕ್ಷ ಹಣ ಕಳುಹಿಸಿದ್ದಾರೆ. ಈ ವಿಚಾರವನ್ನು ಸ್ವತಃ ಜಗ್ಗೇಶ್ ಅವರು ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕಿಲ್ಲರ್ ವೆಂಕಟೇಶ್ ವಿಷಯವಾಗಿ ನಾನು ಕರೆ ಮಾಡಿದ 1 ಘಂಟೆಯಲ್ಲಿ ಅವನ ಚಿಕಿತ್ಸೆಗೆ 1 ಲಕ್ಷ ರೂ. ಕಳಿಸಿದ ಕಲಾಬಂಧು. ಉದ್ಯಮದಲ್ಲಿ ಪ್ರಥಮ ಸ್ಪಂದಿಸಿದ ಕಲಾಬಂಧು. ನಿನ್ನ ಶ್ರೇಷ್ಠಗುಣ ನನ್ನ ಹೃದಯದಲ್ಲಿ ಅಚ್ಚಾಯಿತು. ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ ಎಂದು ಜಗ್ಗೇಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here