Wednesday, August 10, 2022

Latest Posts

ಅನಾರೋಗ್ಯದ ಕಾರಣ ಜಪಾನ್ ಪ್ರಧಾನಿ ಶಿಂಜೊ ಅಬೆ ರಾಜೀನಾಮೆ

ಟೋಕಿಯೋ: ಜಪಾನ್ ಪ್ರಧಾನಿ ಶಿಂಜೊ ಅಬೆ ಅನಾರೋಗ್ಯದ ಕಾರಣದಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಜಪಾನ್ ರಾಷ್ಟ್ರೀಯ ವಾಹಿನಿ ಎನ್‌ಎಚ್‌ಕೆ ಶಿಂಜೊ ಅಬೆಯವರು ಆರೋಗ್ಯ ಸಮಸ್ಯೆ ಎದುರಾಗಿರುವುದರಿಂದ ತಮ್ಮ ಸ್ಥಾನದಿಂದ ಕೆಳಗಿಳಿಯುವುದಾಗಿ ವರದಿ ಮಾಡಿದೆ.

೬೫ ವರ್ಷದ ಅಬೆಯವರು ತುಂಬಾ ವರ್ಷಗಳಿಂದ ಅಲ್ಸ್‌ರೇಟಿವ್ ಕೊಲೈಟಿಸ್‌ನಿಂದ ಬಳಲುತ್ತಿದ್ದರು. ಕಾಯಿಲೆಗೆ ಚಿಕಿತ್ಸೆ ಪಡೆಯಲೆಂದು ೨೦೦೭ರಲ್ಲಿ ತಮ್ಮ ಅಧಿಕಾರವನ್ನು ತೊರೆದಿದ್ದರು.

ಈ ಬಗ್ಗೆ ಆಗಸ್ಟ್ ೪ ರಂದು ಜಪಾನ್ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಯೋಶಿಹಿದ್ ಸುಗಾ ಮಾತನಾಡಿ, ಅಬೆಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಭಾವಿಸಿರಲಿಲ್ಲ. ೧೫ ದಿನಗಳಿಂದಲೂ ಚಿಕಿತ್ಸೆ ಪಡೆಯುತ್ತಿರವುದನ್ನು ನೋಡಿದರೆ ಅವರ ಅಧಿಕಾರದ ಪೂರ್ಣ ಅವಧಿಯನ್ನು ನೋಡಲು ಸಾಧ್ಯವಿಲ್ಲ ಎಂಬ ಆತಂಕ ಹೆಚ್ಚುತ್ತಿದೆ ಎಂದಿದ್ದಾರೆ.
೨೦೨೧ರಲ್ಲಿ ಅಬೆಯವರ ಅಧಿಕಾರ ಅವಧಿ ಕೊನೆಯಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss