Tuesday, August 16, 2022

Latest Posts

ಅನಾವರಣಗೊಂಡಿತು ಭಾರತೀಯ ನೌಕಾಪಡೆಯ ಐದನೇ ಸ್ಕಾರ್ಪೀನ್ ಕ್ಲಾಸ್ ಜಲಾಂತರ್ಗಾಮಿ ‘ವಾಗಿರ್’!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮುಂಬೈ ನ ಮಜಾಗನ್ ಡಾಕ್‌ನಲ್ಲಿ ಭಾರತೀಯ ನೌಕಾಪಡೆಯ ಐದನೇ ಸ್ಕಾರ್ಪೀನ್ ಕ್ಲಾಸ್ ಜಲಾಂತರ್ಗಾಮಿ ‘ವಾಗಿರ್’ ಅನ್ನು ಗುರುವಾರ ಅನಾವರಣ ಮಾಡಲಾಯಿತು. ರಾಜ್ಯ ರಕ್ಷಣಾ ಸಚಿವ ಶ್ರೀಪಾದ್ ನಾಯಕ್, ಜಲಾಂತರ್ಗಾಮಿ ನೌಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಲಾಂಚ್​ ಮಾಡಿದರು.
‘ವಾಗಿರ್’ ಭಾರತದಲ್ಲಿ ನಿರ್ಮಿಸಲಾಗುತ್ತಿರುವ ಆರು ಕಲ್ವಾರಿ ದರ್ಜೆಯ ಜಲಾಂತರ್ಗಾಮಿ ನೌಕೆಗಳ ಭಾಗವಾಗಿದ್ದು, ಫ್ರೆಂಚ್ ನೌಕಾ ರಕ್ಷಣಾ ಮತ್ತು ಇಂಧನ ಕಂಪನಿ ಡಿಸಿಎನ್ಎಸ್ ವಿನ್ಯಾಸಗೊಳಿಸಿದ ಜಲಾಂತರ್ಗಾಮಿ ನೌಕೆಗಳನ್ನು ಭಾರತೀಯ ನೌಕಾಪಡೆಯ ಪ್ರಾಜೆಕ್ಟ್ -75 ರ ಭಾಗವಾಗಿ ನಿರ್ಮಿಸಲಾಗುತ್ತಿದೆ.
ಆರು ಸ್ಕಾರ್ಪೀನ್ ದರ್ಜೆಯ ಜಲಾಂತರ್ಗಾಮಿ ನೌಕೆಗಳಲ್ಲಿ ಮೊದಲನೆಯದಾದ ಐಎನ್‌ಎಸ್ ಕಲ್ವರಿಯನ್ನು 2017 ರಲ್ಲಿ ಲಾಂಚ್​ ಮಾಡಲಾಗಿತ್ತು. ನಂತರ ಖಂಡೇರಿ, ಕಾರಂಜ್ ಮತ್ತು ವೇಲಾ.
ಈ ಜಲಾಂತರ್ಗಾಮಿ ನೌಕೆಗಳು ಮೇಲ್ಮೈ ವಿರೋಧಿ ಯುದ್ಧ, ಜಲಾಂತರ್ಗಾಮಿ ವಿರೋಧಿ ಯುದ್ಧ, ಗುಪ್ತಚರ ಸಂಗ್ರಹಣೆ, ಗಣಿ ಹಾಕುವಿಕೆ, ಮತ್ತು ಪ್ರದೇಶದ ಕಣ್ಗಾವಲು ಮುಂತಾದ ಕಾರ್ಯಗಳನ್ನು ನಿರ್ವಹಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss