ಹೊಸದಿಗಂತ ವರದಿ,ಧಾರವಾಡ:
ಬಿದರ ಜಿಲ್ಲೆಯ ಅನುಭವ ಮಂಟಪಕ್ಕೆ ಸನಾತನ ಶಬ್ಧ ಬಳಕೆ ಹಾಸ್ಯಾಸ್ಪದ. ಸರ್ಕಾರದ ಈ ಶಬ್ಧ ಬಳಕೆಗೆ ಕೂಡಲಸಂಗಮದ ಬಸವ ಧರ್ಮ ಪೀಠದ ಬಸವಪ್ರಕಾಧ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದರು.
ಸೋಮವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 6 ಕೋಟಿ ರೂ.ವೆಚ್ಚದಲ್ಲಿ ಅನುಭವ ಮಂಟಪದ ಶಿಲನ್ಯಾದ ಸ್ವಾಗತಾರ್ಹ. ಮತ್ತು ಖುಷಿ ವಿಚಾರ. ಆದರೆ, ಸನಾತನ ಪದ ಬಳಕೆ ಸರಿಯಲ್ಲ. ತಕ್ಷಣ ಈ ಶಬ್ಧ ಹಿಂಪಡೆಯುವಂತೆ ಆಗ್ರಹಿಸಿದರು.
ಸನತಾನ ಧರ್ಮ ಜಾತಿ ಪದ್ಧತಿ ಒಪ್ಪುತ್ತದೆ. ಶರಣರು ಕಾಯಕ ಧರ್ಮ ಒಪ್ಪುತ್ತದೆ. ಕೆಲ ವೈದಿಕ ಧರ್ಮದ ಪಟ್ಟಭದ್ರ ಹಿತಾಶಕ್ತಿಗೆ ಶರಣರಿಗೆ ಸನಾತನ ಧರ್ಮದ ತಳಕು ಹಾಕುವುದು ಸರಿಯಲ್ಲ. ಬಸವ ಕಲ್ಯಾಣ ಚುನಾವಣೆ ಹಿನ್ನಲೆ ವೈಯಕ್ತಿಕ ಹಿತಾಶಕ್ತಿಗೆ ಧರ್ಮ ರಾಜಕಾರಣ ಸರಿಯಲ್ಲ ಎಂದರು.
ಬಸವಾದಿ ಶಿವಶರಣರ ತತ್ವ-ಸಿದ್ಧಾಂತ ಹಾಗೂ ಸನತಾನ ಧರ್ಮದ ತತ್ವ-ಸಿದ್ಧಾಂತಕ್ಕೆ ಎಣ್ಣೆ-ಶೀಗೆಕಾಯಿ ಪೂರ್ವ-ಪಶ್ಚಿಮ ಇದ್ದಂತೆ. ಅನುಭವ ಮಂಟಪಕ್ಕೆ ಸನತಾನ ಪದ ಬಳಕೆ ಖಂಡನೀಯ. ತಕ್ಷಣ ಮುಖ್ಯಮಂತ್ರಿಗಳು ಬಹಿರಂಗ ಕ್ಷಮೆಯಾಚಿಸಬಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಮ ಸೇನಾ ಧಾರವಾಡ ಜಿಲ್ಲಾಧ್ಯಕ್ಷ ವಿಜಯ ಕದಂ, ಮಂಜುನಾಥ, ಹರಣಿನವರ, ರಾಜೇಶ ನಾಯಕ ಇದ್ದರು.