ಹೊಸ ದಿಗಂತ ವರದಿ, ಬೀದರ:
ಬೀದರ ನಗರದ ಗಾಂಧಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರ್ಕಾರದ ಅನುಮತಿ ಪಡೆಯದೇ ಬೋರವೆಲ್ಗಳು ಕೊರೆಯುತಿದ್ದ ಖಾಸಗಿ ಬೋರವೆಲ್ ಏಜೆನ್ಸಿಗಳ ಕೊಳವೆಬಾವಿ ಕೊರೆಯುವ ಲಾರಿಗಳನ್ನು ಬೀದರ ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆಯ ಪೊಲೀಸ್ರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಬೀದರ ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ಮಾತನಾಡಿ, ಬೀದರ ನಗರದಲ್ಲಿ ಖಾಸಗಿಯವರು ಜಿಲ್ಲಾಡಳಿತದ ಅನುಮತಿ ಪಡೆಯದೇ ಕೊಳವೆಬಾವಿಗಳು ಕೊರೆಯುವುದು ತಿಳಿದುಬಂದಿದೆ ಎಂದರು.
ಈ ಸಂದರ್ಭದಲ್ಲಿ ಬೀದರ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ಮಾತನಾಡುತ್ತ, ಬೀದರ ನಗರದಲ್ಲಿ ಕೊಳವೆಬಾವಿಗಳು ಕೊರೆಯಲು ಸರ್ಕಾರದ ಅನುಮತಿ ಇಲ್ಲವಾದರೂ ಖಾಸಗಿಯವರು ಜಿಲ್ಲಾಡಳಿತದ ಅನುಮತಿ ಪಡೆಯದೇ ಬೋರವೆಲ್ಗಳು ಕೊರೆಯುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಸಂಬಂಧ ಬೀದರ ನಗರಸಭೆ ಪೌರಾಯುಕ್ತರು ಅನುಮತಿ ಇಲ್ಲದೇ ಕೊಳವೆಬಾವಿಗಳು ಕೊರೆಯುತ್ತಿರುವ ಖಾಸಗಿಮನೆ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಬೀದರ ನಗರದ ವಿವಿಧಡೆ ಅಧಿಕೃತವಾಗಿ 2 ಪ್ರಕರಣಗಳು ಪತ್ತೆಯಾಗಿವೆ ಎಂದರು.
ಜಿಲ್ಲಾಡಳಿತ ಅನುಮತಿ ಪಡೆಯದೇ ಖಾಸಗಿ ಬೊರವೆಲ್ ಕೊರೆಯಲು ಹೋಗಿದ್ದ ಲಾರಿಗಳನ್ನು ಬೀದರ ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ನಿಂತಿರುವುದು ಕಾಣಬಹುದು