Tuesday, August 16, 2022

Latest Posts

ಅನುಮಾನಾಸ್ಪದ ಬೀಜದ ಪೊಟ್ಟಣ ಪಾರ್ಸಲ್: ಕೃಷಿ ಇಲಾಖೆಯಿಂದ ರೈತರಿಗೆ ಎಚ್ಚರಿಕೆ 

ಧಾರವಾಡ: ಅನಾಮಧೇಯ ವ್ಯಕ್ತಿಗಳು ರೈತರ ಮನೆ ಬಾಗಿಲಿಗೆ ಬಿತ್ತನೆ ಬೀಜದ ಪೊಟ್ಟಣಗಳನ್ನು ಕಳುಹಿಸುತ್ತಿದ್ದು, ಇವುಗಳು ಕೃಷಿಗೆ ಅಪಾಯಕಾರಿ ಆಗಬಹುದಾದ ಸಂಭವವಿದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತಂತೆ ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಅನುಮಾನಾಸ್ಪದ ಬೀಜದ ಪೊಟ್ಟಣಗಳ ಬಳಕೆ ಮಾಡದಂತೆ ರೈತರಿಗೆ ಕೃಷಿ ಇಲಾಖೆ ಮೂಲಕ ಮಾಹಿತಿ ನೀಡಲಾಗಿದೆ.
ರೈತರು ಮಾಡುವುದು ಏನು?
ಈ ಅನಾಮಧೇಯ ಪಾರ್ಸಲ್ ಬಂದಾಗ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಅಥವಾ ತಾಲೂಕಾ ಮಟ್ಟದಲ್ಲಿ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬೇಕು. ಪಾರ್ಸಲ್ ವಾಪಸ್ ಮಾಡುವುದು ಸಾಧ್ಯವಾಗದಿದ್ದರೆ ಪೊಟ್ಟಣ ಸಮೇತ ಸುಟ್ಟು ಹಾಕಬೇಕು. ಪ್ಯಾಕೆಟ್‌ಗಳನ್ನು ಯಾವುದೇ ಕಾರಣಕ್ಕೂ ತೆರೆಯದೆ ಅವುಗಳೊಂದಿಗೆ ಕೃಷಿ ಇಲಾಖೆಗೆ ಭೇಟಿ ನೀಡಬೇಕು.
ಆಗುವ ತೊಂದರೆಗಳು:
ಅನುಮಾನಾಸ್ಪದ ಬೀಜದ ಪೊಟ್ಟಣ ಮುಂಜಾಗೃತೆ ವಹಿಸದೇ ತೆಗೆಯುವುದರಿಂದ ರೋಗಕಾರಕ ವೈರಾಣುಗಳು ಹರಡಬಹುದು. ರೋಗಕಾರಕ ತಳಿ ಆಗಿರುವ ಸಾಧ್ಯತೆ ಇದೆ. ಕೃಷಿ ಉತ್ಪನ್ನಗಳ ಉತ್ಪಾದನೆಗೆ ಪೆಟ್ಟಾಗುವ ಸಾಧ್ಯತೆ ಉಂಟು. ಕೃಷಿ ಭೂಮಿ ಸಂಪೂರ್ಣ ಹಾಳಾಗಬಹುದು.
ಬೀಜ ಮುಟ್ಟಿದ ರೈತರ ಚರ್ಮದ ಮೇಲೆ ಪರಿಣಾಮ ಸಾಧ್ಯತೆ, ಇಂತಹ ಯಾವುದೇ ಪ್ರಕರಣಗಳು ಕಂಡು ಬಂದಲ್ಲಿ ಕೃಷಿ ಇಲಾಖೆ ಸ್ಥಳಿಯ ಅಧಿಕಾರಿಗಳಿಗೆ ಕೂಡಲೆ ಮಾಹಿತಿ ನೀಡಬೇಕೆಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ರಾಜಶೇಖರ್ ಬಿಜಾಪೂರ ಪ್ರಕಟಣೆ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss