ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಬಾಲಿವುಡ್ನ ನಟ, ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಅವರ ಮನೆಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಸುಮಾರು 350 ಕೋಟಿ ಮೊತ್ತದ ಅವ್ಯವಹಾರ ಪತ್ತೆ ಮಾಡಿದ್ದಾರೆ.
ಸಿನಿಮಾಗಳ ಬಾಕ್ಸ್ ಆಫೀಸ್ ಸಂಗ್ರಹದ ಕೇವಲ ಶೇ 2ರಷ್ಟು ಮೊತ್ತವನ್ನು ಮಾತ್ರವೇ ಆದಾಯವಾಗಿ ಘೋಷಿಸಿದ್ದಾರೆ. 20 ಕೋಟಿ ಮೊತ್ತದಷ್ಟು ಬೋಗಸ್ ಖರ್ಚಿನ ದಾಖಲೆಗಳು ಪತ್ತೆಯಾಗಿವೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಬ್ಬರನ್ನೂ ಸುಮಾರು 5 ಗಂಟೆಗಳ ಕಾಲ ವಿಚಾರಣೆಗೆ ನಡೆಸಿದ್ದು, ಈ ವೇಳೆ ಫಾಂಟಾಮ್ ಫಿಲ್ಸ್ಮ್ ಕಂಪನಿಯ ಷೇರು ವಹಿವಾಟಿನ ಮಾಹಿತಿಯನ್ನು ತಿದ್ದಿರುವ, ಮೌಲ್ಯವನ್ನು ತಪ್ಪಾಗಿ ದಾಖಲಿಸಿರುವ ದಾಖಲೆಗಳು ಪತ್ತೆಯಾಗಿದ್ದು, ಅನುರಾಗ್ ಕಶ್ಯಪ್ 350 ಕೋಟಿ ಮೊತ್ತದಷ್ಟು ತೆರಿಗೆ ಬಾಧ್ಯತೆ ಹಾಗೂ ತಪ್ಸಿ ಪನ್ನು 5 ಕೋಟಿಯಷ್ಟು ತೆರಿಗೆ ಬಾಧ್ಯತೆ ಹೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.