ಹೊಸದಿಗಂತ ಆನ್ಲೈನ್ ಡೆಸ್ಕ್:
ಬಾಲಿವುಡ್ ನಟಿ ಅನುಷ್ಕಾ ಶರ್ಮ ಪೋಸ್ಟ್ ಒಂದಕ್ಕೆ ಇಮೋಜಿಗಳ ಸುರಿಮಳೆಯೇ ಬಂದಿದೆ!
ಹೌದು ನಿನ್ನೆಯಷ್ಟೇ ಪತಿ ವಿರಾಟ್ ಕೊಹ್ಲಿ ಜನ್ಮದಿನ ಆಚರಿಸಿಕೊಂಡಿದ್ದು, ಅನುಷ್ಕಾ ಕೆಲವು ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ರೆಡ್ ಹಾರ್ಟ್ ಇಮೋಜಿ ಕ್ಯಾಪ್ಷನ್ ಹಾಕಿದ್ದಾರೆ. ಬ್ಲಾಕ್ ಲೂಸ್ ಕುರ್ತಾದಲ್ಲಿ ಅನುಷ್ಕಾ ಪ್ರೆಗ್ನೆನ್ಸಿ ಗ್ಲೋ ಎದ್ದು ಕಾಣುತ್ತಿದ್ದು, ವಿರಾಟ್ ಕೂಡ ಬ್ಲಾಕ್ ಟೀ ಶರ್ಟ್ ಹಾಕಿದ್ದಾರೆ. ಎರಡು ಫೋಟೊ ಅಪ್ಲೋಡ್ ಮಾಡಿದ್ದು, ಒಂದರಲ್ಲಿ ಅನುಷ್ಕಾ ವಿರಾಟ್ರನ್ನು ಹಗ್ ಮಾಡಿದ್ದಾರೆ, ಮತ್ತೊಂದರಲ್ಲಿ ಕೆನ್ನೆಗೆ ಮುತ್ತು ಕೊಡುತ್ತಿದ್ದಾರೆ.
ಈ ಫೋಟೊಗೆ ನಟಿಯರಾದ ಪ್ರಿಯಾಂಕಾ ಚೋಪ್ರಾ,ರಾಕುಲ್ ಪ್ರೀತ್, ಸೊನಾಲಿ ಬೇಂದ್ರೆ,ಜಾಕ್ವೆಲಿನ್ ಫರ್ನಾಂಡಿಸ್, ಮೌನಿ ರಾಯ್ ರಿಯಾಕ್ಟ್ ಮಾಡಿದ್ದಾರೆ. ಎಲ್ಲರೂ ಇಮೋಜಿಗಳಲ್ಲೇ ತಮ್ಮ ಕಮೆಂಟ್ ಹಾಕಿದ್ದಾರೆ. ಹಾರ್ಟ್,ಸ್ಮೈಲಿ,ಹಾರ್ಟ್ನ ಸ್ಮೈಲಿ ಹೀಗೆ ಇಮೋಜಿಗಳಲ್ಲೇ ಅನುಷ್ಕಾ-ವಿರಾಟ್ ಜೋಡಿಗೆ ಶುಭ ಹಾರೈಸಿದ್ದಾರೆ.