spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, September 28, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅನೈತಿಕ ಸಂಬಂಧ: ಪತ್ನಿ, ಮಕ್ಕಳಿಂದಲೇ ಪತಿಯ ಅನಾಚಾರ ಬಯಲು

- Advertisement -Nitte

ಹೊಸ ದಿಗಂತ ವರದಿ, ಕೊಪ್ಪಳ:

ಕೊಪ್ಪಳ ಸಣ್ಣ ನೀರಾವರಿ ಇಲಾಖೆಯಲ್ಲಿ ಕಾರ್ಯ ನಿರ್ವಾಹಕ ಇಂಜಿನಿಯರ್ ಆಗಿರುವ ವಿನೋದ್ ಕುಮಾರ ಗುಪ್ತಾರ ಅನೈತಿಕ ಸಂಬಂಧವನ್ನು ಅವರ ಪತ್ನಿ, ಮಕ್ಕಳೇ ಬಯಲು ಮಾಡಿದ್ದಾರೆ. ಪತಿಯೊಂದಿಗೆ ಸಂಬಂಧ ಹೊಂದಿದ ಮಹಿಳೆಯನ್ನು ಪತ್ನಿ ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕೊಪ್ಪಳದ ಬಿ.ಟಿ.ಪಾಟೀಲ್ ನಗರದಲ್ಲಿ ನಡೆದಿದೆ.
ವಿನೋದ್ ಕುಮಾರ ಗುಪ್ತಾ ಹಲವು ದಿನಗಳಿಂದ ಓರ್ವ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ ಸಂಬಂಧ ಪತ್ನಿ ಭಾಗ್ಯಲಕ್ಷ್ಮಿ ತೀವ್ರ ಅಸಮಾಧಾನಗೊಂಡಿದ್ದರಂತೆ. ಬುಧವಾರ ಪತಿಯ ನಡವಳಿಕೆಗೆ ಬೇಸತ್ತು
ಹೋಗಿದ್ದರಂತೆ. ಇಂಜಿನಿಯರ್ ಮನೆಯಲ್ಲಿಯೇ ಶೀಲಾ ಎನ್ನುವ ಮಹಿಳೆ ಇರುವುದರ ಬಗ್ಗೆ ಪತ್ನಿ ಭಾಗ್ಯಲಕ್ಷ್ಮಿ ಹಾಗೂ ಮಕ್ಕಳು ಸಮೇತ ಮನೆಗೆ ಆಗಮಿಸಿ ಅನೈತಿಕ ಸಂಬಂಧ ಬೆಳೆಸಿದ ಮಹಿಳೆಗೆ ಚಪ್ಪಲಿ ಏಟು ನೀಡಿ ಹಿಗ್ಗಾ ಮುಗ್ಗ ಥಳಿಸಿದ್ದಾರೆ. ಶೀಲಾ ಎನ್ನುವ ಮಹಿಳೆ ನಾನೇನು ತಪ್ಪು ಮಾಡಿಲ್ಲವೆಂದು ಹೇಳುತ್ತಿದ್ದಂತೆ ಮತ್ತೆ ಧರ್ಮದೇಟು ಜೋರಾಗಿಯೇ ಬಿದ್ದಿವೆ. ಇನ್ನು ಪತ್ನಿ ಮಕ್ಕಳು ಮನೆಗೆ ಬರುತ್ತಿದ್ದಂತೆ ಪತಿ ವಿನೋದ ಕುಮಾರ ಗುಪ್ತಾ ಅಲ್ಲಿಂದ ಪರಾರಿಯಾಗಿದ್ದಾರೆ. ಮಹಿಳೆಗೆ ಥಳಿಸಿದ ಪತ್ನಿ ಮಕ್ಕಳು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ನಗರ ಠಾಣೆಯ ಪೊಲೀಸರು ಆ ಮಹಿಳೆಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಪ್ರಕರಣ ಠಾಣೆ ಮೆಟ್ಟಿಲೇರಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss