ಕೊರೋನಾ ಸಮಯದಲ್ಲಿ ನೆಲನೆಲ್ಲಿ ಸೊಪ್ಪು ಬಹಳಷ್ಟು ಪ್ರಸಿದ್ಧಿ ಹೊಂದಿದೆ. ಏಕೆಂದರೆ ನೆಲನೆಲ್ಲಿ ಸೊಪ್ಪಿನಲ್ಲಿ ಹೇರಳವಾಗಿ ರೋಗ ನಿರೋಧಕ ಶಕ್ತಿ ಇರುತ್ತದೆ. ದಿನವೂ ಸೊಪ್ಪನ್ನು ಹಸಿಯದೇ ಸೇವಿಸಬೇಕು. ಆದರೆ ಹಸಿ ಸೊಪ್ಪನ್ನು ಹಾಗೆಯೇ ತಿನ್ನುವುದಕ್ಕೆ ಆಗುವುದಿಲ್ಲ. ಗೊಜ್ಜನ್ನು ಮಾಡಿಕೊಂಡು ತಿನ್ನಬಹುದು. ಈ ಗೊಜ್ಜು ಅನ್ನದ ಜೊತೆ ಸೇವಿಸಬಹುದು. ದೋಸೆಯ ಜೊತೆಗೂ ಸೇವಿಸಬಹುದು. ಇದನ್ನು ಸೇವಿಸುವುದಕ್ಕೆ ಬಹಳ ರುಚಿಯಾಗಿರುತ್ತದೆ. ನೆಲನೆಲ್ಲಿ ಗೊಜ್ಜು ತಯಾರಿಸುವುದು ಹೇಗೆ ಎಂಬುದು ಇಲ್ಲಿದೆ ನೋಡಿ.
ಬೇಕಾಗುವ ಪದಾರ್ಥ:
ನೆಲನೆಲ್ಲಿ ಸೊಪ್ಪು
ಕಾಯಿ ತುರಿ
ಕಾಳು ಮೆಣಸು
ಜೀರಿಗೆ
ಉಪ್ಪು
ಲಿಂಬೆ ರಸ
ಸಾಸಿವೆ
ಇಂಗು
ಎಣ್ಣೆ
ಮಾಡುವ ವಿಧಾನ:
ಮೊದಲಿಗೆ ನೆಲನೆಲ್ಲಿ ಸೊಪ್ಪನ್ನು ಒಂದು ಮುಷ್ಟಿಯಾಗುವಷ್ಟು ತೆಗೆದುಕೊಳ್ಳಿ. ಆ ನಂತರ ಬಾಣಲೆಗೆ ಎಣ್ಣೆ, ನೆಲನೆಲ್ಲಿ ಸೊಪ್ಪು, ಕಾಳು ಮೆಣಸು ಹಾಕಿಕೊಂಡು ಹುರಿದುಕೊಳ್ಳಿ. ಆನಂತರ ಹುರಿದು ಕೊಂಡಿರುವುದನ್ನು ಅರ್ಧ ಕಪ್ ಕಾಯಿತುರಿಯೊಂದಿಗೆ ರುಬ್ಬಿಕೊಳ್ಳಿ. ಅದಕ್ಕೆ ರುಚಿ ತಕ್ಕಷ್ಟು ಉಪ್ಪು ಲಿಂಬೆ ರಸವನ್ನು ಹಾಕಿ, ಸಾಸಿವೆ, ಇಂಗಿನ ಒಗ್ಗರಣೆ ಮಾಡಿದರೆ ನೆಲನೆಲ್ಲಿ ಸೊಪ್ಪಿನ ಗೊಜ್ಜು ರೆಡಿ.