Wednesday, June 29, 2022

Latest Posts

ಅನ್ನದಾತರ ಬಗ್ಗೆ ಸಹಾನುಭೂತಿ ತೋರಿಸಿದರೆ ಸಾಲದು, ನ್ಯಾಯಯುತ ಬೆಲೆ ನೀಡಬೇಕು : ಶಾಸಕ ಕಂದಕೂರು

ಯಾದಗಿರಿ: ರೈತರ ಬಗ್ಗೆ ಕೇವಲ ಸಹಾನುಭೂತಿ ತೋರಿಸದರೆ ಸಾಲದು, ಆತ ಬೆಳೆದ ಬೆಳೆಗಳಿಗೆ ಸ್ವಾಮಿನಾಥನ್ ಆಯೋಗದ ಪ್ರಕಾರ ನ್ಯಾಯುತವಾದ ಬೆಲೆ ನೀಡಬೇಕು ಎಂದು ಶಾಸಕ ನಾಗನಗೌಡ ಕಂದಕೂರು ಒತ್ತಾಯಿಸಿದರು.
ಅವರು ಗುರುಮಠಕಲ್ ಪಟ್ಟಣದಲ್ಲಿ ಸೋಮವಾರದಂದು ಕೃಷಿ ಇಲಾಖೆ ಹಮ್ಮಿಕೊಂಡ ರಿಯಾಯಿತ ಬೆಲೆಯಲ್ಲಿ ರೈತರಿಗೆ ಬೀಜ ವಿತರಣೆ ಮಾಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲಾ ರಜಕೀಯ ಪಕ್ಷಗಳ ನಾಯಕರು ರೈತರ ಬಗ್ಗೆ ಅನುಕಂಪ್ ಮಾತುಗಳನ್ನು ಆಡುತ್ತಾರೆ. ಆದರೆ ಆತನಿಗೆ ಸಿಗಬೇಕಾದ ನ್ಯಾಯ ಒದಗಿಸುವಲ್ಲಿ ಸೋತಿದ್ದಾವೆ. ರೈತ ನಕ್ಕರೆ ದೇಶ ನಗ್ತದೆ-ಆತ ಕಣ್ಣೀರಿಟ್ಟರೆ ದೇಶ ಮುಳಗ್ತದೆ ಎಂಬುದನ್ನು ಸರಕಾರ ಅರಿತುಕೊಳ್ಳಬೇಕಿದೆ ಎಂದು ಹೇಳಿದರು.
ಕೇಂದ್ರ ಸರಕಾರ ರೈತರ ಸಂಕಷ್ಟವನ್ನು ಅರಿತುಕೊಂಡು ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಅವುಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಿದಲ್ಲಿ ರೈತರಿಗೆ ಅನಕೂಲವಾಗುತ್ತದೆ ಎಂದು ಹೇಳಿದರು. ಇವತ್ತು ರೈತರಿಗೆ ರಿಯಾಯಿತಿ ಬೆಲೆಯಲ್ಲಿ ಬೀಜ ಮತ್ತು ರಸಗೊಬ್ಬರವನ್ನು ಒದಗಿಸುತ್ತಿದೆ. ಅವುಗಳ ಲಾಭ ಪಡೆದುಕೊಂಡು ರೈತರು ತಮ್ಮ ಆಥಿಇðಕತೆ ಹೆಚ್ಚಿಸಕೊಳ್ಳಬೇಕು ಎಂದಿ ಕರೆ ನೀಡಿದರು.
ಪ್ರಸಕ್ತ ಮಾಹಾಮಾರಿ ಕೊರೋನಾದಿಂದ ದೇಶ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಈ ರೋಗಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅದಕ್ಕಾಗಿ ನಾವು ಅದರ ಜೊತೆಗೆ ಬದಕಲು ನಮ್ಮ ಜೀವನ ಶೈಲಿಯನ್ನು ಬದಲಿಸಕೊಳ್ಳವ ಅನಿವಾರ್ಯತೆ ಒದಗಿಬಂದಿದೆ ಎಂದು ಹೇಳಿದರು. ಇವತ್ತು ಜಿಲ್ಲೆಯಲ್ಲಿ ಮುಂಗಾರು ಮಳೆ ಬಂದ ಪ್ರಯುಕ್ತ ರೈತರ ಮುಖದಲ್ಲಿ ನಗು ಕಾಣುತ್ತಿದ್ದೇವೆ. ಇನ್ನೊಂದು ಮಳೆ ಬಂದಲ್ಲಿ ಹೆಸರು ಬಿತ್ತನೆ ಮಾಡುತ್ತಾರೆ. ಅದಕ್ಕಾಗಿ ಗುಣಮಟ್ಟದ ಬೀಜಗಳನ್ನು ಪೂರೈಸುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಈ ಭಾಗದಲ್ಲಿ ಹೆಸರು ಕೃಷಿ ವರ್ಷದ ಪ್ರಾರಂಭದ ಬೆಳೆಯಾಗಿದೆ. ಅದು 60 ದಿನಗಳಲ್ಲಿ ಬರುವುದರಿಂದ ರೈತ ಮೃಗಶಿರ ಮಳೆಯ ನಿರೀಕ್ಷೆ ಮಾಡುತ್ತಾನೆ. ಕಾರಣ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕು ಒಂದು ವರ್ಷದ ಆರ್ಥಿಕತೆಯ ಸಹಾಯವನ್ನು ಮಾಡುತ್ತದೆ ಎಂದ ಅವರು, ರೈತರಿಗೆ ತಮ್ಮ ಕ್ಷೇತ್ರದಲ್ಲಿ ಅನ್ಯಾಯವಾದರ ಸಹಿಸುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಂಟಿ ಕೃಷಿ ನಿರ್ದೇಶಕಿ ದೇವಿಕಾ. ಆರ್ ಅವರು, ಇಲಾಖೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೀಜ ಮತ್ತು ರಸಗೊಬ್ಬರವನ್ನು ಸಂಗ್ರಹಿಸಲಾಗಿದೆ. ರೈತರ ಅಗತ್ಯಗೆ ತಕ್ಕಂತೆ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ವೇದಿಕೆಯ ಮೇಲೆ ಚುನಾಯಿತ ಪ್ರತಿನಿದಿಗಳು, ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಕೆಲವರಿಗೆ ಪರಿಹಾರ ಚೆಕ್‌ಗಳನ್ನು ವಿತರಣೆ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss