ಧಾರವಾಡ: ಬೈಕ್ಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಧಾರವಾಡ-ಹಳಿಯಾಳ ರಸ್ತೆಯ ಬಣದೂರ ಗ್ರಾಮದ ಬಳಿ ಗುರವಾರ ರಾತ್ರಿ ನಡೆದಿದೆ.
ತಾಲೂಕಿನ ಹೊಲ್ತಿಕೋಟಿ ಗ್ರಾಮದ ನಾಗರಾಜ ವಿಷ್ಣು ದಿನ್ನಿ ಗಾಯಗೊಂಡ ಯುವಕ. ಆತನನ್ನು ಚಿಕಿತ್ಸೆಗಾಗಿ ಹಳಿಯಾಳದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಗರಾಜನು ಹಳಿಯಾಳ ಕಡೆಯಿಂದ ಧಾರವಾಡ ಕಡೆಗೆ ಬೈಕ್ ಮೇಲೆ ಬರುತ್ತಿದ್ದಾಗ ಸ್ಕಾರ್ಪಿಯೋ ಡಿಕ್ಕಿ ಹೊಡೆದಿದೆ. ಪ್ರಕರಣದಲ್ಲಿ ನಿಷ್ಕಾಳಿಜಿತನದಿಂದ ವಾಹನ ಚಾಲನೆ ಮಾಡಿದ ಹಳಿಯಾಳದ ಸ್ಟ್ಯಾನಿ ಸಂತಾನ ಕಿತ್ತೂರನ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಧಾರವಾಡ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.