Tuesday, June 28, 2022

Latest Posts

ಅಪಹರಣಕ್ಕೆ ಒಳಗಾದ ಬಾಲಕಿಯ ರಕ್ಷಣೆಗೆ ಎಲ್ಲಿಯೂ ನಿಲ್ಲದೆ 260 ಕಿ.ಮೀ. ಓಡಿತು ರೈಲು!

ಭೋಪಾಲ್: ನೀವು 2010ರಲ್ಲಿ ತೆರೆಗೆ ಬಂದ unstoppable ಸಿನೆಮಾ ನೋಡಿರಬಹುದು… ಇಲ್ಲೊಂದು ಅಂತಹದ್ದೇ ಘಟನೆ ನಡೆದಿದೆ!
ಆದರೆ ಇದು ಪೈಲೆಟ್ ಇಲ್ಲದೆ ಓಡಿದ ರೈಲಲ್ಲ, ಬದಲಾಗಿ ಅಪಹರಣಕ್ಕೆ ಒಳಗಾದ ಮೂರು ವರ್ಷದ ಬಾಲಕಿಯನ್ನು ರಕ್ಷಿಸಲು ಓಡಿದ ರೈಲು!
ಉತ್ತರ ಪ್ರದೇಶದ ಲಲಿತಪುರದಿಂದ ಮಧ್ಯಪ್ರದೇಶದ ಭೋಪಾಲ್‌ವರೆಗೆ ಸುಮಾರು 260 ಕಿ.ಮೀ. ಯಾವುದೇ ನಿಲುಗಡೆ ಇಲ್ಲದೆ ನಿರಂತರವಾಗಿ ಚಲಿಸಿದ ಈ ರೈಲು ಕೊನೆಗೂ ತನ್ನ ಉದ್ದೇಶ ಈಡೇರಿಸಿಕೊಂಡಿದೆ.
ಏನಾಯಿತು?
ಲಲಿತಪುರ ರೈಲು ನಿಲ್ದಾಣದಿಂದ ಮೂರು ವರ್ಷದ ಬಾಲಕಿಯನ್ನು ಅಪಹರಿಸಲಾಗಿತ್ತು. ಮಗುವನ್ನು ಅಪಹರಿಸಿದ್ದ ದುಷ್ಕರ್ಮಿ, ಭೋಪಾಲಕ್ಕೆ ಹೊರಟಿದ್ದ ರಪ್ತಿಸಾಗರ್ ಎಕ್ಸ್‌ಪ್ರೆಸ್ ರೈಲನ್ನು ಏರಿದ್ದ. ಈ ಬಗ್ಗೆ ಬಾಲಕಿಯ ಕುಟುಂಬ ದೂರು ನೀಡಿದ್ದ ಕೂಡಲೇ ಸಕ್ರಿಯರಾದ ರೈಲ್ವೆ ಪೊಲೀಸ್ ಪಡೆ ನಿಲ್ದಾಣದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಬಾಲಕಿಯನ್ನು ಅಪಹರಿಸಿದ ವ್ಯಕ್ತಿ, ಆಕೆಯೊಂದಿಗೆ ರೈಲು ಹತ್ತಿರುವುದು ಕಂಡುಬಂದಿದೆ. ಕೂಡಲೇ ಲಲಿತಪುರದ ಪೊಲೀಸರು ಭೋಪಾಲದಲ್ಲಿರುವ ಕಾರ್ಯಾಚರಣಾ ನಿಯಂತ್ರಣ ಘಟಕಕ್ಕೆ ಸೂಚನೆ ನೀಡಿದ್ದಾರೆ. ಲಲಿತಪುರದಿಂದ ಹೊರಟ ರೈಲನ್ನು ಭೋಪಾಲದವರೆಗೆ ಎಲ್ಲಿಯೂ ನಿಲ್ಲಿಸದಂತೆ ಆರ್‌ಪಿಎಫ್ ಇನ್‌ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ತಲೆಕೆಳಗಾಯಿತು ಕಿಡ್ನಾಪರ್ ಸ್ಕೆಚ್!
ಅಪಹರಣಕಾರ ಬಾಲಕಿಯ ಜೊತೆಗೆ ಮಾರ್ಗ ಮಧ್ಯೆ ಇಳಿಯುವ ಯೋಜನೆ ಹಾಕಿಕೊಂಡಿದ್ದ. ಆದರೆ ಪೊಲೀಸರು ಈ ಯೋಜನೆಯನ್ನು ತಲೆಕೆಳಗೆ ಮಾಡಿದ್ದಾರೆ. ನೇರವಾಗಿ ಭೋಪಾಲಕ್ಕೆ ರೈಲು ತೆರಳುವಂತೆ ಮಾಡಿದ ಪೊಲೀಸರು, ಅಲ್ಲಿ ರೈಲು ಬರುತ್ತಿದ್ದಂತೆಯೇ ಅಪಹರಣಕಾರನನ್ನು ಬಂಧಿಸಿದ್ದಾರೆ. ಬಾಲಕಿ ಸುರಕ್ಷಿತಳಾಗಿದ್ದು, ಆಕೆಯನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ.
ಅಪಹರಣಕಾರನೊಬ್ಬನನ್ನು ಹಿಡಿಯಲು ಸುಮಾರು 260 ಕಿ.ಮೀ. ಎಲ್ಲಿಯೂ ನಿಲ್ಲಿಸದಂತೆ ರೈಲನ್ನು ಓಡಿಸಿರುವುದು ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಇದೇ ಮೊದಲು!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss