Wednesday, June 29, 2022

Latest Posts

ಅಪಾಯದಲ್ಲಿ ದೆಹಲಿ: ವಾಯು ಗುಣಮಟ್ಟ ಸೂಚ್ಯಾಂಕ 468ಕ್ಕೆ ಏರಿಕೆ

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ನಿಷೇಧ ಆದೇಶ ಉಲ್ಲಂಘಿಸಿ ಪಟಾಕಿ ಸಿಡಿಸಿದ ಪರಿಣಾಮ ಭಾನುವಾರ ದೆಹಲಿಯಲ್ಲಿ ಸರಾಸರಿ ವಾಯು ಗುಣಮಟ್ಟ ಸೂಚ್ಯಾಂಕವೂ 468ಕ್ಕೆ ಏರಿಕೆಯಾಗಿದ್ದು, ಆತಂಕದ ಸ್ಥಿತಿ ನಿರ್ಮಾಣವಾಗಿದೆ.

ನಗರದ ಬಹುತೇಕ ಪ್ರದೇಶಗಳಲ್ಲಿ 2.5 ಮಾಲಿನ್ಯಕಾರಕಗಳೊಂದಿಗೆ ವಾಯು ಗುಣಮಟ್ಟ ಸೂಚ್ಯಾಂಕವೂ 400ರ ಗಡಿ ದಾಟಿದ್ದು, ಹಲವು ಪ್ರದೇಶಗಳಲ್ಲಿ 500ರ ಗಡಿ ಸಮೀಪಿಸುವ ಸಾಧ್ಯತೆ ಅಂದಾಜಿಸಲಾಗಿದೆ. ಪಿಎಂ 2.5 ಮಾಲಿನ್ಯಕಾರಕ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ದೀಪಾವಳಿಯ ರಾತ್ರಿ ರಾಜಧಾನಿಯಲ್ಲಿ ಹೆಚ್ಚಿನ ಭಾಗಗಳಲ್ಲಿ 800 ದಾಟಿದೆ.

ಈ ಹೊಸ ಬೆಳವಣಿಗೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವೈದ್ಯರು ಮತ್ತು ವಿಜ್ಞಾನಿಗಳು, ಕಡಿಮೆ ಅವಧಿಯಲ್ಲಿ ಕಾಣಿಸಿಕೊಂಡಿರುವ ಹೆಚ್ಚು ವಾಯುಮಾಲಿನ್ಯ ಕೊರೋನಾ ಸೋಂಕು ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.

ದೆಹಲಿಯಲ್ಲಿ ವಾಯುಮಾಲಿನ್ಯ ಮೀತಿಮೀರಿದ್ದರಿಂದ ಮುನ್ನೆಚ್ಛರಿಕಾ ಕ್ರಮವಾಗಿ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ನ.9ರ ಮಧ್ಯರಾತ್ರಿಯಿಂದ ನ.30ರ ಮಧ್ಯರಾತ್ರಿಯವರೆಗೂ ಸಂಪೂರ್ಣ ನಿಷೇಧ ಮಾಡಲಾಗಿದೆ. ಆದರೆ ಈ ಆದೇಶ ಧಿಕ್ಕರಿಸಿ ಪಟಾಕಿ ಸುಡುತ್ತಿರುವುದು ದೆಹಲಿ ವಾಯು ಗುಣಮಟ್ಟ ಕ್ಷೀಣಿಸುತ್ತಿರುವುದಕ್ಕೆ ಕಾರಣವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss