Tuesday, June 28, 2022

Latest Posts

ಅಪ್ಪನ ಬಿಟ್ಬಿಡಿ ಎಂದು ಪೊಲೀಸ್ ಜೀಪಿಗೆ ತಲೆಚಚ್ಚಿಕೊಂಡ ಮಗುವಿನ ಕಣ್ಣೀರಿಗೆ ಕರಗಿದ ಸಿಎಂ ಯೋಗಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಒಂದು ಮುಗ್ದ ಮಗುವಿನ ಕಣ್ಣೀರಿಗೆ ಕರಾಗದವರು ಇಲ್ಲ. ಆ ಮುಗ್ದತೆಗೆ, ಪ್ರೀತಿಗೆ ಸದಾ ಎಲ್ಲರೂ ಸೋಲುವರು. ಅದರಲ್ಲೂ ಹೆಣ್ಣು ಮಗುನ್ನು ಒಬ್ಬ ಅಪ್ಪ ಇಷ್ಟ ಪಡುವಷ್ಟು ಬೇರಾರು ಇಷ್ಟ ಪಡಲು ಸಾಧ್ಯವಿಲ್ಲವೆನ್ನುತ್ತಾರೆ.
ಹೌದು, ಅಂತಹ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾದ ವ್ಯಕ್ತಿಯೊಬ್ಬ ತನ್ನ ಮಗಳು ತನ್ನ ಮೇಲಿಟ್ಟಿದ್ದ ಪ್ರೀತಿಯಿಂದಲೇ ಬಿಡುಗಡೆಯಾಗಿ ಬಂದಿರುವರು.
ರಾಜ್ಯದ ಬುಲಂದ್​​ಶರ್​ನ ಖುರ್ಜಾ ಪಟ್ಟಣದಲ್ಲಿ ವ್ಯಕ್ತಿಯೊಬ್ಬನ್ನು ಪಟಾಕಿ ಬ್ಯಾನ್​ ಮಾಡಿದ್ದರೂ ಅದರ ಮಾರಾಟ ಮಾಡಿರುವ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಲು ಮುಂದಾಗಿದ್ದಾರೆ. ಅಂಗಡಿಯಿಂದ ಅವರನ್ನು ಬಂಧಿಸುವ ವೇಳೆ , ಆ ಸಮಯದಲ್ಲಿ ಅಂಗಡಿಯಲ್ಲಿದ್ದ ಅವರ ಮಗಳು ಅಪ್ಪನನ್ನು ಅರೆಸ್ಟ್​ ಮಾಡಬೇಡಿ ಎಂದು ಗೋಳಾಡಿದ್ದಾಳೆ.
ದಾರಿಯುದ್ದಕ್ಕೂ ತನ್ನ ತಂದೆಯನ್ನು ಪೊಲೀಸರ ಕೈಯಿಂದ ಬಿಡಿಸುವ ಪ್ರಯತ್ನ ಮಾಡಿದ್ದಾಳೆ. ಅವರನ್ನು ಪೊಲೀಸರು ಗಾಡಿಯೊಳಗೆ ಕೂರಿಸಿದ ತಕ್ಷಣ, ಗಾಡಿಯ ಡ್ರೈವರ್​ ಬಳಿ ಮಗಳು ತೆರಳಿ ನನ್ನ ತಂದೆಯನ್ನು ಬಿಟ್ಟುಬಿಡಿ ಎಂದು ಕೇಳಿಕೊಂಡಿದ್ದಾಳೆ. ಅವರು ಆಗುವುದಿಲ್ಲವೆಂದಾಗ ಅದೇ ಗಾಡಿಗೆ ತನ್ನ ತಲೆಯನ್ನು ಮೂರ್ನಾಲ್ಕು ಬಾರಿ ಚಚ್ಚಿಕೊಂಡಿದ್ದಾಳೆ.
ಈ ಸನ್ನಿವೇಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಅವರೂ ಕೂಡ ವಿಡಿಯೋ ನೋಡಿದ್ದಾರೆ. ವಿಡಿಯೋದಲ್ಲಿರುವ ಹೆಣ್ಣು ಮಗುವಿಗೆ ತಂದೆಯ ಮೇಲಿರುವ ಪ್ರೀತಿಯನ್ನು ನೋಡಿ ಕರಗಿರುವ ಯೋಗಿ ಅವರು ಆಕೆಯ ತಂದೆಯನ್ನು ಬಿಡುಗಡೆ ಮಾಡಿಸಿದ್ದಾರೆ.
ಅಷ್ಟೇ ಅಲ್ಲದೆ ಆ ಮಗಳಿಗೆ ದೀಪಾವಳಿ ಪ್ರಯುಕ್ತ ವಿಶೇಷ ಸಿಹಿ ತಿನಿಸುಗಳನ್ನೂ ಕಳುಹಿಸಿಕೊಟ್ಟಿದ್ದಾರೆ. ಕೇವಲ ಸಿಎಂ ಮಾತ್ರವಲ್ಲ, ಆಕೆಯ ತಂದೆಯನ್ನು ಬಂಧಿಸಿದ್ದ ಪೊಲೀಸರು ಸಹ ಆಕೆಯ ಮನೆಗೆ ಬಂದು ಸಿಹಿ ನೀಡಿ ಹೋಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss