ಹೊಸ ದಿಗಂತ ವರದಿ, ಕುಂದಾಪುರ:
ಮನೆಯ ಕೆಲಸದವರ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅದೇ ಮನೆಯ ತೋಟದ ಕೆಲಸ ಮಾಡುವ ವ್ಯಕ್ತಿ ಅತ್ಯಾಚಾರ ನಡೆಸಿದ ಘಟನೆ ಕುಂದಾಪುರದಲ್ಲಿ ನಡೆದಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಹನುಮಂತ ಬಂಧಿತ ಆರೋಪಿ. ನಗರದ ಹೊರವಲಯದಲ್ಲಿನ ಮನೆ ಕೆಲಸ ಮಾಡುತ್ತಿದ್ದ ಹಾವೇರಿ ಮೂಲದ ಮಹಿಳೆಯೊಬ್ಬರು ತನ್ನ 7 ವರ್ಷದ ಮಗಳೊಂದಿಗೆ ತೋಟದ ಮನೆಯಲ್ಲಿ ವಾಸವಿದ್ದರು.
ಇವರು ಕೆಲಸಕ್ಕಿದ್ದ ಮನೆಯಲ್ಲಿ ತೋಟದ ಕೆಲಸ ಮಾಡುತ್ತಿದ್ದ ಹನುಮಂತ ಮಹಿಳೆಯು ಕೆಲಸಕ್ಕೆಂದು ಸಾಹುಕಾರರ ಮನೆಗೆ ತೆರಳಿದ್ದಾಗ ತೋಟದ ಮನೆಗೆ ಬಂದು ಮಗುವನ್ನು ಅತ್ಯಾಚಾರ ನಡೆಸಿದ್ದಾನೆ ಎಂದು ತಾಯಿ ದೂರಿನಲ್ಲಿ ವಿವರಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.