Wednesday, August 10, 2022

Latest Posts

ಅಬಕಾರಿ ಇಲಾಖೆ ಭರ್ಜರಿ ಕಾರ್ಯಾಚರಣೆ: ಸೊರಬದಲ್ಲಿ 5.50 ಲಕ್ಷ ರೂ.ಗಾಂಜಾ ವಶ

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಕಣ್ಣೂರು ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿರುವ ಅಬಕಾರಿ ಇಲಾಖೆ 5.50 ಲಕ್ಷ ರೂ. ಅಕ್ರಮ ಗಾಂಜಾ ವಶಕ್ಕೆ ಪಡೆದಿದೆ.
ಕಣ್ಣೂರು ಗ್ರಾಮದ ಸರ್ವೇ ನಂಬರ್ 26 ರ ಬಗರ್ ಹುಕುಂ ಸಾಗುವಳಿ ಭೂಮಿಯ ಶುಂಠಿ ಮತ್ತು ಅದರ ಸುತ್ತಮುತ್ತಲಿನ ಸ್ಥಳದಲ್ಲಿ ಅಕ್ರಮವಾಗಿ ಕಣ್ಣೂರು ಗ್ರಾಮದ ಗಂಗಾಧರಪ್ಪ ಬಿನ್ ಈಶ್ವರಪ್ಪ, ಪರಶುರಾಮಪ್ಪ ಬಿನ್ ಈಶ್ವರಪ್ಪ ಹಾಗೂ ಹುಚ್ಚರಾಯಪ್ಪ ಬಿನ್ ಈಶ್ವರಪ್ಪ ಅವರು ನಾಲ್ಕರಿಂದ ಆರು ಅಡಿ ಎತ್ತರವಿರುವ ಹೂವು ಕಾಯಿಗಳಿಂದ ಕೂಡಿದ್ದ ಫಲಭರಿತ ಘಾಟು ವಾಸನೆಯುಳ್ಳ ಸುಮಾರು 200 ಗಾಂಜಾ ಗಿಡಗಳನ್ನು ಬೆಳೆದಿದ್ದರು. ಇವುಗಳನ್ನು ವಶಕ್ಕೆ ಪಡೆಯಲಾಗಿದೆ.
ಅಬಕಾರಿ ಜಂಟಿ ಆಯುಕ್ತ ನಿರ್ದೇಶನದ ಮೇರೆಗೆ ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್ ನೇತೃತ್ವದಲ್ಲಿ ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕ ಹನುಮಂತಪ್ಪ ಹಾಗೂ ಅಬಕಾರಿ ಉಪನಿರೀಕ್ಷಕ ಜಾನ್ ಪಿ ಜೆ ಮತ್ತು ಸೊರಬ ವಲಯದ ಅಬಕಾರಿ ನಿರೀಕ್ಷಕ ಅಣ್ಣಪ್ಪ ಮತ್ತು ಸಿಬ್ಬಂದಿಯವರಾದ ಚಂದ್ರಪ್ಪ, ರಾಜಮ್ಮ,ರವೀಂದ್ರ ಪಾಟೀಲ್, ಗುರುಮೂರ್ತಿ, ಮುದಾಸಿರ್ ಹಾಗೂ ಸೊರಬ ಸಾಗರ ಮತ್ತು ಶಿವಮೊಗ್ಗ ವಲಯಗಳ ಒಟ್ಟು 30 ಅಧಿಕಾರಿ ಹಾಗೂ ಸಿಬ್ಬಂದಿ, ವಾಹನ ಚಾಲಕರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss