ಮಳವಳ್ಳಿ: ಅಬಕಾರಿ ಪೊಲೀಸರಿಂದ ಪ್ರತ್ಯೇಕ ದಾಳಿ ನಡೆಸಿ 3.550 ಗ್ರಾಂ ಗಾಂಜಾ ಜಪ್ತಿ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ತಾಲೂಕಿನ ದಾಸನದೊಡ್ಡಿ ಬಳಿ ನಡೆದಿದೆ.
ಮಂಡ್ಯ ತಾಲೂಕು ಹೆಮ್ಮಿಗೆ ಗ್ರಾಮದ ಓರ್ವ ಹಾಗೂ ತಮಿಳುನಾಡು ಮೂಲದ ಇಬ್ಬರು ಸೇರಿ ಮೂವರು ಬಂಧಿತ ಆರೋಪಿಗಳಾಗಿದ್ದು, ಅವರ ಹೆಸರುಗಳು ತಿಳಿದುಬಂದಿಲ್ಲ.
ಆರೋಪಿಗಳು ಬೈಕ್ನಲ್ಲಿ ಬಂದು ಗಾಂಜಾ ಮಾರಾಟ ಮಾಡುತ್ತಿದ್ದರೆನ್ನಲಾಗಿದೆ. ಮಾಹಿತಿ ಅರಿತ ಅಬಕಾರಿ ಪೆÇಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿ ಅವರಿಂದ ಗಾಂಜಾ ಮತ್ತು ಬೈಕ್ಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಎನ್ಡಿಪಿಎಸ್ ರೀತ್ಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.