ತಿರುವನಂತಪುರ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅಬ್ದುಲ್ಲಕುಟ್ಟಿಯವರ ಮೇಲೆ ನಡೆದ ಆಕ್ರಮಣದ ಹಿಂದೆ ಹಗಲು ಸಿಪಿಎಂ, ರಾತ್ರಿ ಎಸ್ಡಿಪಿಐ ಆಗಿ ಕೆಲಸ ನಿರ್ವಹಿಸುವ ತಂಡ ಕಾರ್ಯಾಚರಿಸುತ್ತಿದೆ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕುಮ್ಮಾನಂ ರಾಜಶೇಖರನ್ ಗಂಭೀರ ಆರೋಪ ಮಾಡಿದ್ದಾರೆ.
ನೇರವಾಗಿ ಎದುರು ನಿಲ್ಲಲು ಸಾಧ್ಯವಾಗದಿರುವುದರಿಂದ ಕತ್ತಲೆಯ ಮರೆಯಲ್ಲಿ ನಿಂತು ಅಬ್ದುಲ್ಲಕುಟ್ಟಿಯವರ ಮೇಲೆ ಆಕ್ರಮಣ ನಡೆಸಲಾಗಿದೆ. ಹಗಲು ಸಿಪಿಎಂ, ರಾತ್ರಿ ಎಸ್ಡಿಪಿಐ ಆಗಿ ಕೆಲಸ ನಿರ್ವಹಿಸುವ ರಾಜಕೀಯ ವಿಚಿತ್ರದ ಸಂಶೋಧನಾ ಶಾಲೆಯಾಗಿ ಕೇರಳ ಬದಲಾವಣೆಗೊಳ್ಳುತ್ತಿದೆ ಎಂದು ಫೇಸ್ಬುಕ್ ಮೂಲಕ ಅವರು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.