Monday, August 15, 2022

Latest Posts

ಅಭಿಮಾನಿಗಳಿಗೆ ಫಿಟ್ನೆಸ್ ಪಾಠ ಮಾಡಿದ ನಟ ಪುನೀತ್ರಾಜ್ಕುಮಾರ್, ಯಾವ ಸಿನಿಮಾಕ್ಕೆ ಗೊತ್ತಾ?

ಕೊರೋನಾ  ವೈರಸ್‌ನಿಂದ  ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಹೀಗಾಗಿ ಸೆಲೆಬ್ರಿಟಿಗಳು ಎಲ್ಲರೂ  ಮನೆಯಲ್ಲೇ  ಕೂರುವಂತಾಗಿದೆ.  ಜಿಮ್‌ಗಳು  ಕೂಡ  ಓಪನ್ ಆಗದ  ಕಾರಣ  ಫಿಟ್ನೆಸ್  ಪ್ರಿಯರಿಗೆ  ಬೇಸರ  ಉಂಟಾಗಿದೆ.  ಈ ವೇಳೆ

ಮನೆಯಲ್ಲೇ  ವರ್ಕೌಟ್ ಮಾಡಿ ಮಾಡಿ ಎಂದು ನಟ ಪುನೀತ್  ರಾಜ್‌ಕುಮಾರ್ ಕೆರೆ  ನೀಡಿದ್ದಾರೆ. ರಾಜ್‌ಕುಮಾರ್  ಕುಟುಂಬವೇ  ಹಾಗೆ ಫಿಟ್ನೆಸ್‌ಗೆ  ತುಂಬಾನೇ   ಪ್ರಮಾಮುಖ್ಯತೆ  ಕೊಡುತ್ತಾರೆ. ವರನಟ ಡಾ. ರಾಜ್‌ಕುಮಾರ್ ನಿತ್ಯವೂ  ತಪ್ಪದೇ ಯೋಗಾಸನ ಮಾಡುತ್ತಿದ್ದರು.  ಈ ಮೂಲಕ ಅವರು ಎಲ್ಲರಿಗೂ ಮಾದರಿಯಾಗಿದ್ದರು. ಇನ್ನು, ನಟ ಶಿವರಾಜ್‌ಕುಮಾರ್

ಅವರ ಫಿಟ್ನೆಸ್ ಬಗ್ಗೆ ಯಾರೂ ಮಾತನಾಡುವಂತಿಲ್ಲ. ವಯಸ್ಸು ೫೮ ಆದರೂ ಇನ್ನೂ ಯಂಗ್ ಆಂಡ್ ಎನರ್ಜಿಟಿಕ್ ಆಗಿದ್ದಾರೆ. ಪುನೀತ್ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ನಿತ್ಯ ಜಿಮ್ ಗೆ ತೆರಳಿ ಪಿಟ್ನೆಸ್ ಕಾಯ್ದುಕೊಂಡಿದ್ದಾರೆ. ಈಗ ಅವರು ಮನೆಯಲ್ಲೇ ವರ್ಕೌಟ್ ಮಾಡುವ ವಿಡಿಯೋ ಹಾಕಿದ್ದಾರೆ. ಈ ವಿಡಿಯೋದಲ್ಲಿ ಪುನೀತ್ ಕೆಲ ಸಿಂಪಲ್  ವರ್ಕೌಟ್‌ಗಳನ್ನು

ಮಾಡಿ ತೋರಿಸಿದ್ದಾರೆ. ಅಷ್ಟೇ ಅಲ್ಲ, ವರ್ಕೌಟ್ ಮಾಡಿ  ಮತ್ತು ಫಿಟ್ ಆಗಿ ಎಂದು ಕೋರಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಪುನೀತ್ ಫಿಟ್ನೆಸ್ ಪಾಠ ಮಾಡಿದ್ದಾರೆ. ಈ ಮೊದಲು ಕೂಡ ಪುನೀತ್ ಫಿಟ್ನೆಸ್ ಚಾಲೆಂಜ್‌ಗಳನ್ನು ಹಾಕಿದ  ಉದಾಹರಣೆಗಳಿವೆ.

ಈ ಮೂಲಕ ಅವರು ಫಿಟ್ನೆಸ್ ಪ್ರಿಯರು ಎಂಬುದನ್ನು ಪದೇ ಪದೇ ಸಾಬೀತು ಮಾಡುತ್ತಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ ಪುನೀತ್ ಎರಡು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಯುವರತ್ನ ಸಿನಿಮಾ ಈಗಾಗಲೇ ಟೀಸರ್ ಮೂಲಕ ಸದ್ದು ಮಾಡಿದೆ. ಈ ಚಿತ್ರದಲ್ಲಿ ಪುನೀತ್ ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಅಪ್ಪು ಸಿನಿಮಾದಲ್ಲೂ ಪುನೀತ್ ಕಾಲೇಜು ವಿದ್ಯಾರ್ಥಿಯಾಗಿ ಮಿಂಚಿದ್ದರು. ಅದೇ ಶೇಡ್‌ನಲ್ಲಿ ಯುವರತ್ನ ಸಿನಿಮಾ ಮೂಡಿ ಬರುತ್ತಿದೆ ಎನ್ನಲಾಗುತ್ತಿದೆ. ಸಂತೋಷ್ ಆನಂದ್‌ರಾಮ್  ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸಯೇಶಾ ಸೈಗಲ್, ಸೋನು ಗೌಡ ಚಿತ್ರದ ನಾಯಕಿಯರು. ಡಾಲಿ ‘ನಂಜಯ್ ಹಾಗೂ ಪ್ರಕಾಶ್ ರಾಜ್ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss