Sunday, August 14, 2022

Latest Posts

ಅಭಿಮಾನಿಗಳ ಮನಗೆದ್ದ ಅಮಿತಾಬ್ ಬಚ್ಚನ್: ಅಂಗಾಂಗ ದಾನ ಮಾಡಲಿರುವ ‘ಬಿಗ್ ಬಿ’

ಹೊಸದಿಲ್ಲಿ: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ತಮ್ಮ ಅಂಗಾಗ ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಹೌದೂ ದೇಶದ ಅನೇಕ ಕಷ್ಟದ ಪರಿಸ್ಥಿತಿಯಲ್ಲಿ ಭಾರತೀಯರ ಜೊತೆ ನಿಂತಿರುವ ಅಮಿತಾಬ್ ಬಚ್ಚನ್ ಇದೀಗ ಅಂಗಾಂಗ ದಾನ ಮಾಡುವುದಾಗಿ ಟ್ವಿಟರ್ ನಲ್ಲಿ ಘೋಷಿಸಿದ್ದಾರೆ.

ಟ್ವಿಟರ್‌ನಲ್ಲಿ 44.3 ಮಿಲಿಯನ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 23.3 ಮಿಲಿಯನ್ ಫಾಲೋವರ್ಸ್ ಹೊಂದಿರುವ ಬಿಗ್ ಬಿ ತಮ್ಮ ಅಭಿಮಾನಿಗಳ ಪಾಲಿಗೆ ಮಹಾನ್ ವ್ಯಕತಿಯಾಗಿದ್ದಾರೆ. ತಮ್ಮ ಟ್ವೀಟ್ ನ ಶೀರ್ಷಿಕೆಯಲ್ಲಿ ‘ಗ್ರೀನ್ ರಿಬ್ಬನ್’ ನ ಮಹತ್ವವನ್ನು ವಿವರಿಸಿದ್ದಾರೆ.

ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅಮಿತಾಬ್ ಬಚ್ಚನ್ , ತಮ್ಮ ಕೋಟ್ ಮೇಲೆ ಹರಿರು ರಿಬ್ಬನ್ ಧರಿಸಿ, ನಾನು ಅಂಗಾಂಗ ದಾನ ಮಾಡುತ್ತಿದ್ದೇನೆ. ಹಾಗೂ ಪವಿತ್ರವಾದ ಹಸಿರು ರಿಬ್ಬನ್ ಧರಿಸಿದ್ದೇಬೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss