ಹೊಸ ದಿಗಂತ ವರದಿ, ಶಿವಮೊಗ್ಗ:
ಪಕ್ಷದ ಆಂತರಿಕ ಸಂವಿಧಾನಕ್ಕೆ ಬದ್ಧವಾಗಿ ತಾಲ್ಲೂಕು ಮಂಡಲದ ಆಯ್ಕೆ ನಡೆದಿರುವುದು ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿ.ಅಭಿವೃದ್ಧಿ ಹಾಗೂ ಸಂಘಟನೆ ದೃಷ್ಟಿಯಿಂದ ಪಕ್ಷಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಅನಿವಾರ್ಯ ಎಂದು ಶಾಸಕ ಎಸ್. ಕುಮಾರ್ ಬಂಗಾರಪ್ಪ ಹೇಳಿದರು.
ಸೊರಬ ಪಟ್ಟಣದ ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಬಿಜೆಪಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಉದ್ಘಾಟಿಸಿ ಮಾತನಾಡಿ, ತಾಲ್ಲೂಕಿನಲ್ಲಿ ಬಿಜೆಪಿ ಸದೃಢವಾಗಿದೆ. ಪಕ್ಷದ ಆಂತರಿಕ ಪ್ರಜಾಪ್ರಭುತ್ವದಲ್ಲಿ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಆಯ್ಕೆಯು ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ ಸೇರಿದಂತೆ 239 ಬೂತ್ ಮಟ್ಟದ ಪ್ರಮುಖರು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ. ಇದಕ್ಕೆ ನನ್ನ ಸಂಪೂರ್ಣ ಸಹ ಮತವಿದೆ ಎಂದರು.
ಅಧ್ಯಕ್ಷರಾಗಿ ಸಿ.ಎನ್. ಕ್ರೊೇಶ್ ಗೌಡ, ಉಪಾಧ್ಯಕ್ಷರಾಗಿ ಮೋಹನ್ ಶೇಟ್, ವಿನಾಯಕ ಹೆಚ್ಚೆ, ಮಹೇಶ್ ಮೂಡಿ, ದೇವಕಿ ಪಾಣಿರಾಜಪ್ಪ, ಉಮಾ ಸಕ್ರೆ, ನಾಗರಾಜ ಗೌಡ, ರಾಜಣ್ಣ ನಡಹಳ್ಳಿ, ಯಂಕೇನ್ ಹೂವಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ವೃತ್ತಿಕೊಪ್ಪ, ಶಿವಕುಮಾರ ಕಡಸೂರು ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳನ್ನು ಘೋಷಿಸಲಾಯಿತು.