ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತದಲ್ಲಿ ಕೊರೋನಾ ನಿಯಂತ್ರಣವು ಇತರೆ ದೇಶಗಳಿಗಿಂತ ಉತ್ತಮವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.
ಇಂದು ಕೊರೋನಾ ನಿಯಂತ್ರಣದ ಕುರಿತು ಆಂಧ್ರ ಪ್ರದೇಶ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಕೇರಳ, ಪಂಜಾಬ್, ರಾಜಸ್ಥಾನ್, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಜೊತೆ ವರ್ಚುಯಲ್ ಸಭೆ ನಡೆಸಿದರು.
ಕಳೆದ 10 ತಿಂಗಳಿಂದ ಕೊರೋನಾ ಹೋರಾಟದಲ್ಲಿ ವಿವಿಧ ಹಂತಗಳನ್ನು ಭಾರತ ನೋಡಿದೆ. ಪ್ರಧಾನಿ ಮೋದಿ ನಿರ್ದೇಶನದಂತೆ ಲಾಕ್ ಡೌನ್ ಜಾರಿಗೊಳಿಸಿದ ರಾಜ್ಯಗಳು ನಂತರದ ಅನ್ ಲಾಕ್ ವೇಳೆ ತುಂಬಾ ಉಪಯೋಗವಾಗಿದೆ ಎಂದು ತಿಳಿಸಿದರು.
ಇದೀಗ ದೇಶದಲ್ಲಿ ಶೇ.92.56ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. ಇತರೆ ಅಭಿವೃದ್ಧಿಹೊಂದಿದೆ ರಾಷ್ಟ್ರಗಳಿಗಿಂದ ಭಾರತ ಕೊರೋನಾ ವಿರುದ್ಧ ಉತ್ತಮವಾಗಿ ಹೋರಾಟ ಮಾಡಿದೆ ಎಂದರು.