Wednesday, August 17, 2022

Latest Posts

ಅಮಾನತುಗೊಂಡ 8 ಸಂಸದರಿಗೆ ಚಹಾ ನೀಡಿದ ರಾಜ್ಯಸಭಾ ಉಪಸಭಾಧ್ಯಕ್ಷ ಹರಿವಂಶ್: ಪ್ರಧಾನಿ ಮೋದಿ ಪ್ರಶಂಸೆ

ಹೊಸದಿಲ್ಲಿ: ಇತ್ತೀಚೆಗೆ ಅಧಿವೇಶನದಲ್ಲಿ ಅಂಗೀಕರಿಸಿದ ಕೃಷಿ ಮಸೂದೆಯನ್ನು ವಿರೋಧಿಸಿ ಸಂಸತ್ತಿನಲ್ಲಿ ಇಡೀರಾತ್ರಿ ಪ್ರತಿಭಟಿಸಿದ ಸಂಸದರಿಗೆ ರಾಜ್ಯಸಭಾ ಉಪಸಭಾಧ್ಯಕ್ಷ ಹರಿವಂಶ್ ಚಹಾ ನೀಡಿ ಸಂವಹನ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಅವರನ್ನು ಶ್ಲಾಘಿಸಿದ್ದಾರೆ, ರಾಜ್ಯಸಭೆಯ ಉಪಸಭಾಧ್ಯಕ್ಷ ಹರಿವಂಶ್ ಅವರ ಮೇಲೆ ದಾಳಿ ನಡೆಸಲು ಮುಂದಾಗಿ ಅವಮಾನ ಮಾಡಿದವರಿಗೆ ಸ್ವತಃ ಹರಿವಂಶ್ ಅವರೇ ಚಹಾ ನೀಡಿರುವ ನಡೆ ನಿಜವಾಗಿಯೂ ಶುದ್ಧ ಮನಸ್ಸು ಹಾಗೂ ವಿಶಾಲ ಮನಸ್ಸು ಹೊಂದಿದ್ದಾರೆ.

ಸೋಮವಾರ, ವೆಂಕಯ್ಯ ನಾಯ್ಡು ಅವರು ಡೆರೆಕ್ ಒ’ಬ್ರಿಯೆನ್ ಮತ್ತು ಡೋಲಾ ಸೇನ್, ಆಮ್ ಆದ್ಮಿ ಪಕ್ಷದ  ಸಂಜಯ್ ಸಿಂಗ್, ಕಾಂಗ್ರೆಸ್ ನ ರಾಜೀವ್ ಸಾತವ್, ರಿಪೂನ್ ಬೋರಾ ಮತ್ತು ಸೈಯದ್ ನಾಸಿರ್ ಹುಸೇನ್ ಮತ್ತು ಸಿಪಿಐ ಕೆಕೆ ರಾಗೇಶ್ ಮತ್ತು ಎಲಾಮಾರಾಮ್ ಕರೀಮ್ ಅವರು ರಾಜ್ಯಸಭಾ ಉಪಾಧ್ಯಕ್ಷರೊಂದಿಗೆ ಭಾನುವಾರ ಕೃಷಿ ಮಸೂದೆಗಳ ಅಂಗೀಕಾರದ ಸಂದರ್ಭದಲ್ಲಿ ಅಶಿಸ್ತಿನ ವರ್ತನೆ ನಡೆಸಿದ್ದು, ಈ ಎಂಟು ಸಂಸದರನ್ನು ಒಂದು ವಾರಗಳ ಕಾಲ ಅಧಿವೇಶನದಿಂದ ಅಮಾನತು ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!