Monday, August 8, 2022

Latest Posts

ಅಮಿತ್‍ ಶಾ -ಯಡಿಯೂರಪ್ಪ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ಉರುಳುಸೇವೆ

ಮಂಡ್ಯ : ಕೊರೋನಾ ಸೋಂಕಿನಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್‍ಶಾ ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ನಗರದ ಶ್ರೀ ವಿದ್ಯಾಗಣಪತಿ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಲ್ಲದೆ, ಉರುಳುಸೇವೆ ಮಾಡಿದರು.
ಇಲ್ಲಿನ ವಿದ್ಯಾನಗರ ಬಡಾವಣೆಯಲ್ಲಿರುವ ಶ್ರೀ ವಿದ್ಯಾಗಣಪತಿ ದೇವಸ್ಥಾನಕ್ಕೆ ಬೆಳಗ್ಗೆ 8-30ಕ್ಕೆ ಆಗಮಿಸಿದ ಕಾರ್ಯಕರ್ತರು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಆರ್‍ಎಪಿಸಿಎಂಎಸ್ ನಿರ್ದೇಶಕ ಶಿವಕುಮಾರ್ ಆರಾಧ್ಯ ಅವರು ಮುಖ್ಯಮಂತ್ರಿಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ದೇವಾಲಯದ ಪ್ರಾಂಗಣದಲ್ಲಿ ಉರುಳುಸೇವೆ ಮಾಡಿ ದೇವರನ್ನು ಪ್ರಾರ್ಥಿಸಿದರು.
ಈ ಇಬ್ಬರು ಮಹನೀಯರು ಶೀಘ್ರ ಗುಣಮುಖರಾಲೆಂದು ಪ್ರಾರ್ಥಿಸಿ ದೇವಾಲಯದಲ್ಲಿ ರುದ್ರಾಭಿಷೇಕ ಪೂಜೆ ಸಲ್ಲಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಪ್ರಚಾರಕ್ ಉಮೇಶ್, ಬಿಜೆಪಿ ಮುಖಂಡರಾದ ಸಾಯಿ ರವೀಂದ್ರ, ಸಿದ್ದರಾಜುಗೌಡ, ಪ್ರಕಾಶ್, ನಾಗಣ್ಣ ಮಲ್ಲಪ್ಪ, ಹನಿಯಂಬಾಡಿ ನಾಗರಾಜು, ಹೊಸಹಳ್ಳಿ ಶಿವು, ಮಂಜುನಾಥ್, ಬಿ. ಕೃಷ್ಣ, ಅಭಿಷೇಕ್ ಇತರರು ಈ ವೇಳೆ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss