ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಅಮೆರಿಕಕ್ಕೆ ಆಗಮಿಸುವ ವಿದೇಶಿಗಳಿಗೆ ಕ್ವಾರಂಟೈನ್ ಹಾಗೂ ಕೋವಿಡ್-19 ಪರೀಕ್ಷೆ ಕಡ್ಡಾಯ ಎಂದು ಅಮೆರಿಕ ನೂತನ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ.
ಬಿಡನ್ ಕೊರೋನಾಗೆ ಸಂಬಂಧಪಟ್ಟಂತೆ ಹಲವಾರು ಆಡಳಿತಾತ್ಮಕ ಆದೇಶಗಳಿಗೆ ಸಹಿ ಹಾಕಿದ್ದು, ವಿದೇಶದಿಂದ ಬರುವ ಪ್ರತಿಯೊಬ್ಬರಿಗೂ ವಿಮಾನ ನಿಲ್ದಾಣದಿಂದ ಹೊರಬಹುರುವ ಮುನ್ನ ಕೋವಿಡ್-19 ಪರೀಕ್ಷೆ ಮಾಡಿಸಬೇಕು. ನಂತರ ಇಲ್ಲಿ ಕಡ್ಡಾಯವಾಗಿ ಕ್ವಾರಂಟೈನ್’ಗೆ ಒಳಗಾಗಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕೂಡ ಕಡ್ಡಾಯ ಎಂದಿದ್ದಾರೆ.
ಕೊರೋನಾ ಸಮಯದಲ್ಲಿ ಜನರಿಗೆ ಅಗತ್ಯವಾಗಿ ಬೇಕಾಗಿರುವ ಆರೋಗ್ಯ ಸೇವೆ, ಲಸಿಕೆ, ಔಷಧಿಗಳಿಗಾಗಿ ಸರ್ಕಾರ ಯುದ್ಧೋಪಾಯದಲ್ಲಿ ಕೆಲಸ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಸಾಂಕ್ರಾಮಿಕ ಕಾಯಿಲೆ ಇಂದ ಮುಕ್ತಿ ಪಡೆಯುವ ವಿಶ್ವಾಸವಿದೆ ಎಂದು ಬಿಡನ್ ಹೇಳಿದ್ದಾರೆ.