Sunday, August 14, 2022

Latest Posts

ಅಮೆರಿಕದಲ್ಲಿ ಕೇಳಿಸುತ್ತಿದೆ ’ಮತ ಎಣಿಕೆ ನಿಲ್ಲಿಸಿ’ ’ಕದಿಯುವುದನ್ನು ನಿಲ್ಲಿಸಿ’ ಘೋಷಣೆ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿಸಿರುವ ಅಮೆರಿಕ ಚುನಾವಣೆಗೆ ಹೊಸ ಬಣ್ಣ ಬಂದಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಡೆಟ್ರಾಯಿಟ್ ಮತ್ತು ಫೀನಿಕ್ಸ್‌ಗಳಲ್ಲಿನ ಮತ ಎಣಿಕೆ ಕೇಂದ್ರಗಳಿಗೆ ಮುತ್ತಿಗೆ ಹಾಕಿ ಘೋಷಣೆಗಳನ್ನು ಕೂಗಿದ್ದಾರೆ.
ಇನ್ನೇನು ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಗೆಲುವಿನ ಘೋಷಣೆಗೆ ಕ್ಷಣ ಗಣನೆ ಶುರುವಾಗುತ್ತಿದ್ದಂತೆಯೇ ಈ ಬೆಳವಣಿಗೆ ನಡೆದಿದೆ. ಬ್ಯಾಲೆಟ್‌ಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.
’ಮತ ಎಣಿಕೆ ನಿಲ್ಲಿಸಿ’ ಎಂದು ಟ್ರಂಪ್ ಬೆಂಬಲಿಗರು ಡೆಟ್ರಾಯಿಟ್‌ನಲ್ಲಿ ಘೋಷಣೆ ಕೂಗಿದರೆ, ಫೀನಿಕ್ಸ್‌ನಲ್ಲಿ ’ಕದಿಯುವುದನ್ನು ನಿಲ್ಲಿಸಿ’ ಎಂದು ಕೂಗಿದರು. ಮತದಾನ ಮತ್ತು ಮತಪತ್ರ ಎಣಿಕೆಯ ಪ್ರಕ್ರಿಯೆಗಳಲ್ಲಿ ಮೋಸ ನಡೆದಿದೆ. ಮತಗಳನ್ನು ಕದಿಯಲಾಗುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ್ದರು. ಜೊತೆಗೆ ವಿವಿಧ ರಾಜ್ಯಗಳಲ್ಲಿ ಮತ ಎಣಿಕೆ ವಿರುದ್ಧ ಕಾನೂನು ಸಮರವನ್ನೂ ಅವರು ಆರಂಭಿಸಿದ್ದರು. ಇದೀಗ ಅದರ ಬೆನ್ನಲ್ಲೇ ಈ ಪ್ರತಿಭಟನೆಗಳು ನಡೆಯುತ್ತಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss