Thursday, July 7, 2022

Latest Posts

ಅಮೆರಿಕದಲ್ಲಿ ಗಾಂಧಿ ಪ್ರತಿಮೆಗೂ ತಟ್ಟಿದ ಪ್ರತಿಭಟನೆ ಬಿಸಿ: ರಾಯಭಾರಿ ಕ್ಷಮೆಯಾಚನೆ

ವಾಷಿಂಗ್ಟನ್: ಅಮೆರಿಕದಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ನಡುವೆ ವಾಷಿಂಗ್ಟನ್‌ ಡಿಸಿಯಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಗೆ ಹಾನಿಯಾಗಿದ್ದು, ಇದು ಭಾರತೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಭಾರತ ರಾಯಭಾರಿ ಕೆನ್ ಜಸ್ಟರ್, ವಾಷಿಂಗ್ಟನ್ ಡಿ.ಸಿ ಯಲ್ಲಿರುವ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಹಾನಿಗೊಳಿಸಿರುವ ಘಟನೆ ನೋವುಂಟುಮಾಡಿದೆ. ಈ ಕುರಿತು ನಾವು ಎಲ್ಲರ ಕ್ಷಮೆಯಾಚಿಸುತ್ತೇವೆ ಎಂದಿದ್ದಾರೆ.

ಘಟನೆ: ಭಾನುವಾರ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಎಂಬವರನ್ನು ಅಮೆರಿಕನ್ ಪೊಲೀಸ್ ತನ್ನ ಕಾಲಿನಿಂದ ಕುತ್ತಿಗೆ ತುಳಿದು ಕೊಲೆ ಮಾಡಿರುವ ವಿಡೀಯೋ ವೈರಲ್‌ಆದ ಬಳಿಕ ವರ್ಣೀಯ ಗಲಭೆ ಭುಗಿಲೆದ್ದಿದ್ದು, ಗಲಭೆಯ ತೀವ್ರತೆ ಎಷ್ಟಿತ್ತೆಂದರೆ ಖುದ್ದು ಅಧ್ಯಕ್ಷ ಟ್ರಂಪ್ ಬಂಕರ್ ನಲ್ಲಿ ಅಡಗಿಕೊಳ್ಳುವ ಸ್ಥಿತಿ ಉಂಟಾಗಿತ್ತು.

ವಿಡಿಯೋ ನೋಡಿದ ಅಮೆರಿಕನ್ನರೂ ಪ್ರತಿಭಟನೆಗೆ ಮುಂದಾದ ಪರಿಣಾಮ, ರಾತ್ರಿ ಹೊತ್ತಿನಲ್ಲಿ ಗಲಭೆ ಇನ್ನಷ್ಡು ತೀವ್ರಗೊಂಡಿತ್ತಲ್ಲದೆ, ಪ್ರತಿಭಟನೆ ಕೂಡಾ ಮಡೆದಿತ್ತು. ಈ ವೇಳೆ ಪೊಲೀಸ್ ಹಾಗೂ ಪ್ರತಿಭಟನಾಕಾರರ ನಡುವೆ ಸಂಘರ್ಷ ನಡೆದಿದ್ದು, ಸಾರ್ವಜನಿಕ ಆಸ್ತಿಗಳಿಗೆ ಪ್ರತಿಭಟನಾಕಾಋಉ ಬೆಂಕಿ ಹಚ್ಚಿ ನಾಶಗೊಳಿಸಿದ್ದರು. ಈ ವೇಳೆ ವಾಷಿಂಗ್ಟನ್ ಡಿಸಿ ಭಾರತೀಯ ರಾಯಭಾರ ಕಚೇರಿಯ ಹೊರಗಿರುವ ಗಾಂಧೀಜಿ ಪ್ರತಿಮೆಗೆ ಹಾನಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss