Saturday, August 13, 2022

Latest Posts

ಅಮೆರಿಕದಲ್ಲೂ ಟಿಕ್ ಟಾಕ್ ಸೇರಿದಂತೆ ಇತರೆ ಚೀನಿ ಆಪ್ ಗಳ ಬ್ಯಾನ್ ಸಾಧ್ಯತೆ

ಹೊಸದಿಲ್ಲಿ: ರಾಷ್ಟ್ರೀಯ ಭದ್ರತೆಯ ಮೂಲವಾಗಿರುವ ಚೀನಾದ ಜನಪ್ರಿಯ ವಿಡಿಯೊ ಆ್ಯಪ್ ಟಿಕ್ ಟಾಕ್ ಅನ್ನು ಅಮೆರಿಕದಲ್ಲಿ ರದ್ದು ಮಾಡುವ ಚಿಂತನೆ ನಡೆಸುತ್ತಿದ್ದೇವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.

ಟಿಕ್ ಟಾಕ್ ಹೊರತಾಗಿ ಬೇರೆ ನೂತನ ಆವಿಷ್ಕಾರ ನಡೆಸಲು ನಾವು ಪ್ರಯತ್ನ ಮಾಡುತ್ತಿದ್ದು, ನಾವು ಟಿಕ್ ಟಾಕ್ ಕಾರ್ಯವೈಕರಿಯ ಕುರಿತು ಗಮನವಿಸಿದ್ದೇವೆ, ಟಿಕ್ ಟಾಕ್ ಗೆ ಹೋಲುವ ಆಪ್ ತರಲಿದ್ದು, ನಾವು ಟಿಕ್ ಟಾಕ್ ಅನ್ನು ಬ್ಯಾನ್ ಮಾಡಬಹುದು ಎಂದು ಟ್ರಂಪ್ ಹೇಳಿದ್ದಾರೆ.

ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ನಾವೂ ಚೀನಾದ ಅಪ್ಲಿಕೇಷನ್ ಗಳನ್ನು ನಿಷೇಧಿಸುವ ಆಲೋಚನೆ ಮಾಡುತ್ತಿದ್ದೇವೆ. ಈ ಕುರಿತು ಶೀಘ್ರ ನಿರ್ಧರಿಸಲಿದ್ದೇವೆ ಎಂದಿದ್ದರು.

ಈ ಬಗ್ಗೆ ಅಮೆರಿಕ ರಾಜ್ಯ ಕಾರ್ಯದರ್ಶಿ ಮೈಕ್ ಪಾಂಪಿಯೋ ಕೂಡ ಸುಳಿವು ನೀಡಿದ್ದರು. ಚೀನಾದ ಟಿಕ್ ಟಾಕ್ ದೇಶದ ಭದ್ರತೆಗೆ ದಕ್ಕೆ ತರಬಹುದಾಗಿದ್ದು, ಚೀನಾ ಅಪ್ಲಿಕೇಷನ್ ಗಳನ್ನು ನಿಷೇಧಿಸುವ ತೀರ್ಮಾನ ಮಾಡಲಿದೆ ಎಂದಿದ್ದರು.

ಅಮೆರಿಕದ ಯುಎಸ್ ಕಾಂಗ್ರೆಸ್ ನ 25 ಸದಸ್ಯರು ಸಹಿ ಸಂಗ್ರಹಿಸಿ ಟಿಕ್ ಟಾಕ್ ಬ್ಯಾನ್ ಮಾಡಬೇಕೆಂದು ಒತ್ತಾಯಿಸಿದ್ದರು.

ಜೂನ್ ತಿಂಗಳಲ್ಲಿ ಭಾರತದ ಭದ್ರತೆ ಹಾಗೂ ಖಾಸಗಿ ಮಾಹಿತಿಗಳ ದುರುಪಯೋಗ ನಿಲ್ಲಿಸಲು ಭಾರತ ಸರ್ಕಾರ ಟಿಕ್ ಟಾಕ್, ಹೆಲೋ, ವಿಚಾಟ್ ಸೇರಿದಂತೆ ಚೀನಾದ 59 ಆಪ್ ಗಳನ್ನು ನಿಷೇಧಿಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss