Monday, July 4, 2022

Latest Posts

ಅಮೆರಿಕದಿಂದ 225 ಮಂದಿ ಭಾರತೀಯರು ತಾಯ್ನಾಡಿಗೆ ವಾಪಸ್: ವಿದೇಶಾಂಗ ಸಚಿವ ಎಸ್. ಜಯಶಂಕರ್

ಮುಂಬೈ: ಅಮೆರಿಕದಿಂದ ಮೊದಲನೇ ವಿಶೇಷ ಏರ್ ಇಂಡಿಯಾ ವಿಮಾನದಿಂದ 225 ಭಾರತೀಯರು ಮುಂಬೈಗೆ ಬಂದಿಳಿದಿದ್ದಾರೆ.

ವಿಶ್ವದಲ್ಲಿ ವ್ಯಾಪಕವಾಗಿ ಹರಡಿರುವ ಕೊರೋನಾ ಸೋಂಕಿನ ಹಿನ್ನಲೆ ವಿದೇಶಗಳಲ್ಲಿ ನೆಲೆಸಿರುವ ಭಾರತೀಯನ್ನು ತಾಯ್ನಾಡಿಗೆ ಕರೆತರುವಲ್ಲಿ ಭಾರತ ಮೇ.7ರಿಂದ ಕಾರ್ಯನಿರತವಾಗಿದ್ದು, ಇದೀಗ ವಂದೇ ಭಾರತ್ ಮಿಷನ್ ಅಡಿ ಅಮೆರಿಕದಿಂದ 225 ಭಾರತೀಯರನ್ನು ಭಾರತಕ್ಕೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜಯಶಂಕರ್ ತಿಳಿಸಿದ್ದಾರೆ.

ಲಂಡನ್, ಫಿಲಿಪಿನ್ಸ್, ರಿಯಾದ್, ಉಸ್ಬೇಕಿಸ್ತಾನ್, ಮಲೇಷಿಯ, ಕುವೈತ್, ದುಬೈ, ಡಾಖಾ, ಸಿಂಗಪೂರ ಸೇರಿದಂತೆ ವಿದೇಶಗಳಿಂದ ವಂದೇ ಮಾತರಂ ಮಿಷನ್ ಅಡಿಯಲ್ಲಿ ಈಗಾಗಲೇ ಸಾವಿರಾರು ಮಂದಿ ಭಾರತಕ್ಕೆ ಬಂದಿಳಿದಿದ್ದಾರೆ.

ವಿದೇಶಗಳಿಂದ ಬಂದಿರುವ ಭಾರತೀಯರನ್ನು ಕ್ವಾರಂಟೈನ್ ಮಾಡಿಲಾಗಿದ್ದು, ಅವರಿಗೆ ಅಗತ್ಯ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss